ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಲಿರುವ ಎರಾಲ್ ಮಸ್ಕ್

ನವದೆಹಲಿ – ಅಮೆರಿಕದ ಶತಕೋಟ್ಯಾಧಿಪತಿ ಎಲಾನ್ ಮಸ್ಕ್ ಅವರ ತಂದೆ ಎರಾಲ್ ಮಸ್ಕ್ ಈ ತಿಂಗಳಲ್ಲಿ ಭಾರತ ಪ್ರವಾಸಕ್ಕೆ ಬರಲಿದ್ದು, ಅವರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಅವರು ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಇದರಿಂದ ಅವರ ಭಾರತದೊಂದಿಗಿನ ಆಧ್ಯಾತ್ಮಿಕ ಸಂಬಂಧ ಎದ್ದು ಕಾಣಲಿವೆ ಎಂದು ಹೇಳಲಾಗುತ್ತಿದೆ.

ಅವರು ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಭಾರತ ಪ್ರವಾಸದ ಸಮಯದಲ್ಲಿ ದೇಶದಲ್ಲಿನ ವಿವಿಧ ವ್ಯಾಪಾರ ಸಭೆಗಳಲ್ಲಿಯೂ ಅವರು ಭಾಗವಹಿಸುವ ನಿರೀಕ್ಷೆಯಿದೆ. ಮಸ್ಕ್ ಅವರ ಭಾರತ ಪ್ರವಾಸ ಜೂನ್ 1 ರಿಂದ ಜೂನ್ 6 ರವರೆಗೆ ಇರುತ್ತದೆ. ಆನಂತರ ಅವರು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದಾರೆ. ಅವರು ದೇಶದ ವಿವಿಧ ನೀತಿ ನಿರೂಪಕರು, ಹೂಡಿಕೆದಾರರು ಮತ್ತು ಉನ್ನತ ಮಟ್ಟದ ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.