R V Deshpande On Savarkar : ‘ಸ್ವಾತಂತ್ರ್ಯವೀರ ಸಾವರಕರ ಅವರನ್ನು ಹೊಗಳಿದ್ದ ಕಾಂಗ್ರೆಸ್‌ನ ಆರ್.ವಿ. ದೇಶಪಾಂಡೆ ಅವರ ಪೋಸ್ಟ್ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್‌ನಿಂದಲೇ ಡಿಲೀಟ್ !

ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ಮತ್ತು ಸ್ವಾತಂತ್ರ್ಯವೀರ್ ಸಾವರ್ಕರ್

ಬೆಂಗಳೂರು – ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು ಸ್ವಾತಂತ್ರ್ಯವೀರ ಸಾವರಕರ ಅವರ ಜಯಂತಿಯಂದು ‘ಎಕ್ಸ್’ ನಲ್ಲಿ ಸಾವರಕರ ಅವರನ್ನು ಹೊಗಳಿ ಪೋಸ್ಟ್ ಮಾಡಿ ಕೇವಲ 2 ಗಂಟೆಗಳ ನಂತರ ಅದನ್ನು ತೆಗೆದುಹಾಕಿದರು. ಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಪ್ರತಿಕ್ರಿಯಿಸುತ್ತಾ, ‘ದೇಶಪಾಂಡೆಯವರ ದೇಹ ಕಾಂಗ್ರೆಸ್ಸಿನಲ್ಲಿದ್ದರೂ, ಆತ್ಮ ಭಾಜಪದಲ್ಲಿದೆ. ಇಂತಹ ಆತ್ಮಗಳು ಕಾಂಗ್ರೆಸ್ಸಿನಲ್ಲಿ ಬಹಳಷ್ಟಿವೆ’ ಎಂದು ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದ ನಂತರ ಅವರು ಪೋಸ್ಟ್ ಅನ್ನು ತೆಗೆದುಹಾಕಿದರು.

1. ಮಾಜಿ ಸಚಿವ ಶ್ರೀ ಆರ್.ವಿ. ದೇಶಪಾಂಡೆ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ‘ತಮ್ಮ ಇಡೀ ಜೀವನವನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಅರ್ಪಿಸಿದ ಭಾರತಮಾತೆಯ ಕ್ರಾಂತಿಕಾರಿ ಸುಪುತ್ರ ವಿನಾಯಕ ದಾಮೋದರ ಸಾವರಕರ ಅವರಿಗೆ ಜಯಂತಿಯಂದು ಶತಶಃ ನಮನಗಳು, ಯುವಕರಲ್ಲಿ ದೇಶಭಕ್ತಿಯ ಜ್ವಾಲೆಯನ್ನು ಹೊತ್ತಿಸಿದ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಮಹತ್ವವನ್ನು ಸಾರಿದ ಇವರು ಒಬ್ಬ ಅದ್ಭುತ ದೇಶಭಕ್ತರಾಗಿದ್ದರು,’ ಎಂದು ಹೇಳಿದ್ದರು.

2. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ನಿರಂತರವಾಗಿ ಸ್ವಾತಂತ್ರ್ಯವೀರ ಸಾವರಕರ ಅವರನ್ನು ಟೀಕಿಸುತ್ತಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶಪಾಂಡೆಯವರ ಈ ಪೋಸ್ಟ್ ಚರ್ಚೆಗೆ ಗ್ರಾಸವಾಯಿತು.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನಲ್ಲಿ ಸಾವರಕರ ಭಕ್ತರೂ ಇದ್ದಾರೆ; ಆದರೆ ಅಧಿಕಾರದ ಸ್ವಾರ್ಥ, ತತ್ವನಿಷ್ಠೆಗಾಗಿ ಹೋರಾಡುವ ಸಿದ್ಧತೆಯ ಕೊರತೆ, ಹೇಡಿತನದ ನಿಲುವುಗಳಿಂದಾಗಿ ಅವರು ಕಾಂಗ್ರೆಸ್‌ನಿಂದಾಗುವ ಪ್ರಖರ ದೇಶಭಕ್ತನ ಅವಮಾನವನ್ನು ಸ್ವೀಕರಿಸಿ, ತಮ್ಮ ನೈತಿಕತೆಯನ್ನೂ ಕಳೆದುಕೊಳ್ಳುತ್ತಿದ್ದಾರೆ!