
ಕಳೆದ ಲೇಖನದಲ್ಲಿ ೨೬/೧೪ ನೇ ಸಂಚಿಕೆಯಲ್ಲಿ ಅಂತಃಸ್ರಾವಗಳ ಗ್ರಂಥಿ (ಹಾರ್ಮೋನ್ಸ್) ಅಸಮತೋಲನವಾಗಲು ಮಾನಸಿಕ ಒತ್ತಡವೇ ಕಾರಣವಾಗಿರುತ್ತದೆ, ಎಂಬುದನ್ನು ನಾವು ಓದಿದೆವು. ‘ಮಾನಸಿಕ ಒತ್ತಡದಿಂದ ನಿಜವಾಗಿಯೂ ಇಷ್ಟು ಪರಿಣಾಮವಾಗುತ್ತದೆಯೆ ?’, ಎನ್ನುವ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಬರಬಹುದು. ಮಾನಸಿಕ ಒತ್ತಡವು ನಮ್ಮ ಶರೀರದಲ್ಲಿನ ವಿವಿಧ ಕೋಶಗಳ ಮೇಲೆ ಹೇಗೆ ವಿಪರೀತ ಪರಿಣಾಮ ಮಾಡುತ್ತದೆ, ಎಂಬುದನ್ನು ಈ ವಾರದ ಲೇಖನದಲ್ಲಿ ತಿಳಿದುಕೊಳ್ಳಲಿಕ್ಕಿದ್ದೇವೆ. ಇದನ್ನು ಗಮನಿಸಿ ಎಲ್ಲರೂ ಆರೋಗ್ಯಪೂರ್ಣ ಜೀವನ ಸಾಗಿಸಲು ಕೇವಲ ಶಾರೀರಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನು ಕೂಡ ಕಾಪಾಡಲು ಪ್ರಯತ್ನಿಸಬಹುದು.

೧. ಅಸ್ಥಿ ಮತ್ತು ಸ್ನಾಯು ವ್ಯವಸ್ಥೆ ( Bones and muscles )
ಮಾನಸಿಕ ಒತ್ತಡವಿದ್ದರೆ ಸ್ನಾಯು ಗಳ ಮೇಲೆ ಒತ್ತಡ ಬರುತ್ತದೆ. ಸ್ನಾಯು ಗಳ ಮೇಲೆ ಒತ್ತಡ ಬರುವುದು, ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅನಿರೀಕ್ಷಿತವಾಗಿ ಬಂದ ಮಾನಸಿಕ ಒತ್ತಡದಿಂದ ಹೇಗೆ ಸ್ನಾಯು ಗಳ ಮೇಲೆ ಒತ್ತಡ ಬರುತ್ತದೆಯೋ, ಹಾಗೆಯೆ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾದಾಗ ಸ್ನಾಯು ಗಳ ಮೇಲೆ ಬಂದಿರುವ ಒತ್ತಡವೂ ಕ್ರಮೇಣ ಕಡಿಮೆಯಾಗುತ್ತದೆ; ಆದರೆ ನಿರಂತರವಾಗಿ ಮಾನಸಿಕ ಒತ್ತಡವಿದ್ದರೆ, ಸ್ನಾಯುಗಳ ಮೇಲೆ ಪದೇ ಪದೇ ಒತ್ತಡ ಬರುತ್ತಿರುತ್ತದೆ ಹಾಗೂ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಸ್ನಾಯುಗಳ ಮೇಲೆ ಬಂದಿರುವ ಒತ್ತಡದಿಂದ ಕುತ್ತಿಗೆ ನೋವು, ಭುಜಗಳ ನೋವು, ತಲೆನೋವು, ಸೊಂಟ ನೋವು ಇತ್ಯಾದಿ ಬರುತ್ತವೆ.
೨. ಶ್ವಾಸಾಂಗವ್ಯೂಹ
ನಮ್ಮ ಶರೀರಕ್ಕೆ ಪ್ರಾಣವಾಯುವನ್ನು ಪೂರೈಸುವ ಕಾರ್ಯವನ್ನು ಶ್ವಾಸಕೋಶವು ಮಾಡುತ್ತದೆ. ಮಾನಸಿಕ ಒತ್ತಡ ಹೆಚ್ಚಾದಾಗ ಉಸಿರಾಟ ಅಪೂರ್ಣವಾಗುವುದರಿಂದ ಉಸಿರಾಟದ ವೇಗ ಹೆಚ್ಚಾಗುತ್ತದೆ. ಯಾರಿಗೆ ಉಸಿರಾಟದ ಕಾಯಿಲೆ ಇಲ್ಲವೋ ಅವರಿಗೆ ಪರಿಣಾಮದ ಅಷ್ಟು ಅರಿವಾಗುವುದಿಲ್ಲ; ಆದರೆ ಉಬ್ಬಸ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಇನ್ನಿತರ ಕಾಯಿಲೆಗಳಿದ್ದರೆ ಮಾನಸಿಕ ಒತ್ತಡದಿಂದ ಆ ಕಾಯಿಲೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ.
೩. ರಕ್ತಾಭಿಸರಣ ವ್ಯವಸ್ಥೆ ( Circulatory system )
ರಕ್ತಾಭಿಸರಣ ವ್ಯವಸ್ಥೆಯು ಹೃದಯ ಮತ್ತು ಅದರಿಂದ ಹೊರಡುವ ರಕ್ತವಾಹಿನಿಗಳಿಂದ ತಯಾರಾಗಿರುತ್ತದೆ. ಸಂಪೂರ್ಣ ಶರೀರಕ್ಕೆ ಶುದ್ಧ ರಕ್ತವನ್ನು ಪೂರೈಸುವ ಕಾರ್ಯವನ್ನು ಇದು ಮಾಡುತ್ತದೆ. ಅನಿರೀಕ್ಷಿತವಾಗಿ ಬರುವ ಒತ್ತಡದಿಂದ, ಉದಾ. ಕಾರ್ಯಾಲಯದಲ್ಲಿ ಯಾವುದಾದರೊಂದು ಅನಿರೀಕ್ಷಿತ ಕೆಲಸ ಬಂದರೆ, ಮಾರ್ಗದಲ್ಲಿ ಸಾರಿಗೆಗೆ ತಡೆಯುಂಟಾದರೆ (ಟ್ರಾಫಿಕ್ ಜಾಮ್) ಹಾಗೂ ಸಮಯಕ್ಕನುಸಾರ ತಲುಪಬೇಕೆಂಬ ಒತ್ತಡ ಇತ್ಯಾದಿಗಳಿಂದ ಹೃದಯದ ಬಡಿತ ಹೆಚ್ಚಾಗುತ್ತದೆ, ಹೃದಯದ ಸ್ನಾಯುಗಳ ಆಕುಂಚನವೂ ವೇಗವಾಗಿ ಆಗುತ್ತದೆ. ಒತ್ತಡ ಬರುವುದರಿಂದ ಶರೀರದಲ್ಲಿ ಸ್ರವಿಸುವ ಕೆಲವು ಹಾರ್ಮೋನ್ಸ್‌ಗಳ ಪರಿಣಾಮದಿಂದ ಹೀಗಾಗುತ್ತದೆ. ದೀರ್ಘಕಾಲದ ವರೆಗೆ ಒತ್ತಡ ಇದ್ದರೆ, ಹೃದಯದ ಆಕುಂಚನದ ವೇಗ ಮತ್ತು ಬಿರುಸುತನ ಹೆಚ್ಚಾಗುತ್ತದೆ. ಆದ್ದರಿಂದ ರಕ್ತದೊತ್ತಡ ಹೆಚ್ಚಾಗುವುದು, ಹೃದಯಾಘಾತ ಇತ್ಯಾದಿ ವಿಕಾರಗಳು ನಿರ್ಮಾಣವಾಗುತ್ತವೆ.
೪. ಅಂತಃಸ್ರಾವಕ ಗ್ರಂಥಿಗಳು ( Endocrine system )
ಮನಸ್ಸಿನ ಮೇಲೆ ಒತ್ತಡ ಬಂದಾಗ ಶರೀರದ ನೈಸರ್ಗಿಕ ಪ್ರತಿಕ್ರಿಯೆಯೆಂದು ‘ಕ್ವಾರ್ಟೀಸೋನ್’ ಎಂಬ ಹೆಸರಿನ ಅಂತಃಸ್ರಾವ ತಯಾರಾಗುತ್ತದೆ. ಈ ಅಂತಃಸ್ರಾವದಿಂದ ಒತ್ತಡವನ್ನು ಜಯಿಸಲು ಊರ್ಜೆಯನ್ನು ನಿರ್ಮಾಣ ಮಾಡಲಾಗು ತ್ತದೆ. ಸ್ವಲ್ಪ ಸಮಯ ಬಂದಿರುವ ಒತ್ತಡವನ್ನು ನಿಯಂತ್ರಿಸಲು ಈ ಅಂತಃಸ್ರಾವವು ಕಾರ್ಯ ಮಾಡುತ್ತದೆ. ಒತ್ತಡ ದೀರ್ಘಕಾಲದ ವರೆಗೆ ಇದ್ದರೆ ಈ ಅಂತಃಸ್ರಾವದಲ್ಲಿ ಅಸಂತುಲನ ನಿರ್ಮಾಣ ವಾಗುವುದು ಹಾಗೂ ಅದರ ಪರಿಣಾಮದಿಂದ ಅಂತಃಸ್ರಾವ ದಲ್ಲಿ ಅಸಂತುಲನವುಂಟಾಗುತ್ತದೆ. ಆದ್ದರಿಂದ ಒತ್ತಡದಿಂದ ಮಧುಮೇಹ, ಸ್ಥೂಲಕಾಯ ಹಾಗೂ ನಿರಾಶೆಯಂತಹ ಸಮಸ್ಯೆ ಗಳು ನಿರ್ಮಾಣವಾಗುತ್ತವೆ.
೫. ಜೀರ್ಣಾಂಗ ವ್ಯೂಹ ( Digestive system )
ಯಾವುದಾದರೊಂದು ವಿಷಯದ ಬಗ್ಗೆ ನಮಗೆ ಒತ್ತಡ ಬಂದರೆ, ನಾವು ಹೊಟ್ಟೆಯಲ್ಲಿ ಗಂಟು ಎದ್ದಿದೆ ಎಂದು ಗ್ಯಾಸ್ ಆಗಿದೆಯೆಂದು ಹೇಳುತ್ತೇವೆ, ಇದರಿಂದ ನಮ್ಮ ಪಚನವ್ಯವಸ್ಥೆ ಮತ್ತು ಮೆದುಳಿನಿಂದ ಬರುವ ಸಂವೇದನೆಗಳು ಇವುಗಳು ಪರಸ್ಪರ ಸಂಬಂಧಿಸಿವೆ ಎಂಬುದು ನಮಗೆ ತಿಳಿಯುತ್ತದೆ. ಒತ್ತಡ ಬಹಳಷ್ಟು ಸಲ ತಿನ್ನುವ ಆಸಕ್ತಿಯನ್ನು ಹೆಚ್ಚಿಸುತ್ತದೆ ಅಥವಾ ಹಸಿವೆಯೇ ಇಲ್ಲದಂತಾಗುತ್ತದೆ. ಇದರಿಂದ ತಿನ್ನುವ ವ್ಯಸನವೂ ಹೆಚ್ಚಾಗಬಹುದು. ಇದರಿಂದ ಎದೆ ಉರಿಯುವುದು ಕಂಡು ಬರುತ್ತದೆ ಬರಬಹುದು. ಸತತ ವಾಗಿ ಮಾನಸಿಕ ಒತ್ತಡ ಹಾಗೂ ಮಾನಸಿಕ ಆಯಾಸವು ಎದೆ ಉರಿಯನ್ನು ಹೆಚ್ಚಿಸುತ್ತದೆ. ಅದೇ ರೀತಿ ಆಹಾರ ಸರಿಯಾಗಿ ಜೀರ್ಣವಾಗದಿರುವುದು, ಮಲಬದ್ಧತೆ ಅಥವಾ ಅತೀಸಾರ ಆಗುವುದು ಇತ್ಯಾದಿ ಆಗಬಹುದು.
೬. ಸಂತಾನೋತ್ಪತ್ತಿ ವ್ಯವಸ್ಥೆ ( Reproductive system )
ಮಾನಸಿಕ ಒತ್ತಡವು ಸ್ತ್ರೀಯರಲ್ಲಿನ ರಜಸ್ವಲೆಯ ಮೇಲೆ (ಮುಟ್ಟಿನ ಮೇಲೆ) ಪರಿಣಾಮ ಬೀರುತ್ತದೆ. ಮಾಸಿಕ ಸರದಿ ಅನಿಯಮಿತವಾಗುವುದು, ಆದಾಗ ತುಂಬಾ ತೊಂದರೆಯಾಗುವುದು, ಗರ್ಭಧಾರಣೆಯಾಗಲು ಅಡಚಣೆ ಉಂಟಾಗುವುದು, ಇಂತಹ ಅನೇಕ ಸಮಸ್ಯೆಗಳು ಕೇವಲ ಒತ್ತಡದಿಂದ ನಿರ್ಮಾಣವಾಗಬಹುದು. ನಿರಂತರ ಒತ್ತಡವು ಪುರುಷರಲ್ಲಿ ಸಾಕಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಉದಾ. ಶುಕ್ರಾಣುಗಳ ಸಂಖ್ಯೆ ಕಡಿಮೆಯಾಗುವುದು, ಸಂತಾನ ಆಗದಿರುವುದು ಇತ್ಯಾದಿ. ನಿರಂತರ ಒತ್ತಡವು (ಟೆನ್ಶನ್) ವೈವಾಹಿಕ ಜೀವನದಲ್ಲಿಯೂ ಸಮಸ್ಯೆಯನ್ನುಂಟು ಮಾಡುತ್ತದೆ. ಈ ರೀತಿ ಕೇವಲ ಮಾನಸಿಕ ಒತ್ತಡವು ಅನೇಕ ಕಾಯಿಲೆಗಳ ಮೂಲ ಕಾರಣವಾಗುತ್ತದೆ, ಆದ್ದರಿಂದ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಲು ಪ್ರಯತ್ನಿಸುವುದು ಆವಶ್ಯಕವಾಗಿದೆ. ಒತ್ತಡವು ಈ ಧಾವಂತದ ಜೀವನದಲ್ಲಿ ಬರುವ ಅವಿಭಾಜ್ಯ ಅಂಗವಾಗಿದೆ; ಆದರೆ ಆ ಒತ್ತಡದಿಂದ ನಮ್ಮ ಶರೀರದ ಮೇಲೆ ಪರಿಣಾಮ ವಾಗದಂತೆ ಅದನ್ನು ಹೇಗೆ ಜಯಿಸಬಹುದು ?
ಅ. ಪ್ರತಿದಿನ ಯಾವುದಾದರೂ ಇಷ್ಟವಾಗುವ ವ್ಯಾಯಾಮ ಮಾಡಬೇಕು.
ಆ. ರಾತ್ರಿಯ ನಿದ್ರೆ ಪೂರ್ಣವಾಗುವಂತೆ ನಿಯೋಜನೆ ಮಾಡಬೇಕು.
ಇ. ತನಗೆ ಇಷ್ಟವಾಗುವ ಹವ್ಯಾಸವನ್ನು ರೂಢಿ ಮಾಡಿಸಿಕೊಳ್ಳಬೇಕು.
ಈ. ಪ್ರಾಣಾಯಾಮ, ಧ್ಯಾನಧಾರಣೆ, ಗುರುಕೃಪಾಯೋಗ ಇಂತಹ ಯಾವುದೇ ಮಾರ್ಗಾನುಸಾರ ಸಾಧನೆಯನ್ನು ಮಾಡಬೇಕು
ಉ. ಬಹಳಷ್ಟು ಸಲ ಕೆಲವೊಮ್ಮೆ ಒತ್ತಡ ನಿರ್ಮಾಣವಾಗಲು ನಮ್ಮ ಸ್ವಭಾವದೋಷಗಳೇ ಕಾರಣವಾಗಿರುತ್ತವೆ, ಉದಾ. ‘ಎಲ್ಲವೂ ತನ್ನ ಇಚ್ಛೆಯಂತೆಯೆ ಆಗಬೇಕು, ಎನ್ನುವ ಹಠವಿದ್ದರೆ ಹಾಗೂ ಎದುರಿನ ಪರಿಸ್ಥಿತಿ ವಿರುದ್ಧವಿದ್ದರೆ, ಒತ್ತಡ ಹೆಚ್ಚಾಗುತ್ತದೆ, ಕೋಪ ಬರಲು ಆರಂಭವಾಗುತ್ತದೆ. ಈ ರೀತಿ ತನ್ನಲ್ಲಿನ ಯಾವ ಸ್ವಭಾವದೋಷಗಳಿಂದ ನನಗೆ ಒತ್ತಡ ಬರುತ್ತದೆ, ಎಂಬುದನ್ನು ಅಭ್ಯಾಸ ಮಾಡಿ ಅವುಗಳಿಗೆ ಸ್ವಯಂಸೂಚನೆಗಳನ್ನು ನೀಡಿ ಅವುಗಳನ್ನು ನಿವಾರಿಸಲು ಪ್ರಯತ್ನಿಸಬೇಕು.
– ವೈದ್ಯೆ (ಸೌ.) ಮುಕ್ತಾ ಲೋಟಲೀಕರ್, ಪುಣೆ. (೨೬೨.೨೦೨೪)
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !
ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ಅಮೇರಿಕಾದ ೬೦ ವೈದ್ಯಕೀಯ ಸಂಸ್ಥೆಗಳಲ್ಲಿ ‘ಪಾಕಕಲೆ ಔಷಧ’ ಪಠ್ಯಕ್ರಮದ ಬೋಧನೆ !
‘ವಂದೇ ಭಾರತ್’ ಎಕ್ಸ್ಪ್ರೆಸ್ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆ !