ಬಾಂಗ್ಲಾದೇಶದ ಸೇನೆಯ ಸ್ಪಷ್ಟೀಕರಣ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಅಧಿಕಾರವನ್ನು ಉರುಳಿಸುವ ಯಾವುದೇ ಉದ್ದೇಶ ನಮಗಿಲ್ಲ ಎಂದು ಬಾಂಗ್ಲಾದೇಶದ ಸೇನೆಯು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದೆ. ಕಳೆದ ಕೆಲವು ದಿನಗಳಿಂದ ಹಂಗಾಮಿ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಸೇನೆಯ ಒತ್ತಡದಿಂದ ರಾಜೀನಾಮೆ ನೀಡಲಿದ್ದಾರೆ ಎಂಬ ಚರ್ಚೆ ನಡೆಯುತ್ತಿತ್ತು. ಈ ಪ್ರಶ್ನೆಗೆ ಸೇನೆಯು ಸ್ಪಷ್ಟೀಕರಣ ನೀಡಿದೆ. ಸೇನೆಯ ಈ ಸ್ಪಷ್ಟೀಕರಣ ಎಷ್ಟರ ಮಟ್ಟಿಗೆ ಸತ್ಯ ಮತ್ತು ಎಷ್ಟು ಸುಳ್ಳು ಎಂಬುದು ಭವಿಷ್ಯದಲ್ಲಿ ತಿಳಿಯಲಿದೆ ಎಂದು ಹೇಳಲಾಗುತ್ತಿದೆ.
1. ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ರಿಗೇಡಿಯರ್ ಜನರಲ್ ನಜೀಮ್ ಉದ ದೌಲಾ, “ದೇಶದ ಸ್ವಾತಂತ್ರ್ಯ, ಭದ್ರತೆ ಅಥವಾ ಸಾರ್ವಭೌಮತ್ವದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಬಾಂಗ್ಲಾದೇಶದ ಸೇನೆ ಮತ್ತು ಮಹಮ್ಮದ್ ಯೂನಸ್ ನೇತೃತ್ವದ ಹಂಗಾಮಿ ಸರಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈ ವಿಷಯ ಅತ್ಯಂತ ಸೂಕ್ಷ್ಮವಾಗಿದೆ. ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದು ಎಲ್ಲರಿಗೂ ವಿನಂತಿಸುತ್ತೇನೆ. ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಂದು ಹೆಜ್ಜೆಯಲ್ಲೂ ಪರಸ್ಪರ ಪೂರಕವಾಗಿದ್ದೇವೆ. ಸೇನೆ ಮತ್ತು ಸರಕಾರ ಒಂದೇ ಕುಟುಂಬದ ಭಾಗವಾಗಿದೆ. ಇಲ್ಲಿ ಯಾವುದೇ ಬಿರುಕು ಮೂಡುವ ಲಕ್ಷಣಗಳಿಲ್ಲ” ಎಂದು ಹೇಳಿದರು.
2. ಇದೇ ವೇಳೆ, ಸೇನೆಯು, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಡುವಿನ ‘ರಾಖೀನ ಕಾರಿಡಾರ್’ (ಸುಸಜ್ಜಿತ ಹೆದ್ದಾರಿ) ಕುರಿತು ಮಾತನಾಡುತ್ತಾ, “ಇದು ಸೂಕ್ಷ್ಮ ವಿಷಯವಾಗಿದೆ. ಬಾಂಗ್ಲಾದೇಶ ಸೇನೆಯು ರಾಷ್ಟ್ರೀಯ ಭದ್ರತೆಗೆ ಅಡ್ಡಿಪಡಿಸುವ ಯಾವುದೇ ಕೃತಿಯಲ್ಲಿ ಎಂದಿಗೂ ಭಾಗಿಯಾಗುವುದಿಲ್ಲ” ಎಂದು ತಿಳಿಸಿದೆ.
ಸಂಪಾದಕೀಯ ನಿಲುವುಸೇನೆಯ ಈ ಸ್ಪಷ್ಟೀಕರಣದ ಮೇಲೆ ಹೇಗೆ ವಿಶ್ವಾಸವಿಡಬಹುದು? ಇದೇ ಸೇನೆಯು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಮೋಸಗೊಳಿಸಿ ಅಧಿಕಾರದಿಂದ ಕೆಳಗಿಳಿಸಿ ದೇಶದಿಂದ ಪಲಾಯನ ಮಾಡುವಂತೆ ಮಾಡಿತ್ತು! |
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ಟ್ರಂಪ್ ಸರಕಾರದ ಮೇಲೆ ಇಸ್ರೇಲ್ ಬೇಹುಗಾರಿಕೆ ಮಾಡುತ್ತಿದೆ! – ಅಮೆರಿಕ
ಹಕೀಂಪುರ (ಬಂಗಾಳ): ತಾಯ್ನಾಡಿಗೆ ಮರಳಲು ಪ್ರತಿದಿನ ಗಡಿ ಭಾಗಕ್ಕೆ ಬರುತ್ತಿರುವ 200-300 ಬಾಂಗ್ಲಾದೇಶಿಗರು !
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!