ಐತಿಹಾಸಿಕ, ಭವ್ಯ ಮತ್ತು ಶಿಸ್ತುಬದ್ಧ ಆಯೋಜನೆ!

ಫೋಂಡಾ, (ಗೋವಾ) – ಮೇ 17 ರಿಂದ 19, 2025 ರ ಅವಧಿಯಲ್ಲಿ ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ದೇಶಾದ್ಯಂತ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಚೇತನವನ್ನು ಮೂಡಿಸುವ ಒಂದು ಅದ್ಭುತ ಕಾರ್ಯಕ್ರಮವಾಯಿತು. ಈ 3 ದಿನಗಳ ಐತಿಹಾಸಿಕ ಮಹೋತ್ಸವವು ‘ನ ಭೂತೋ ನ ಭವಿಷ್ಯತಿ’ ಎಂಬಂತಹ ಅಚ್ಚನ್ನು ಮೂಡಿಸಿದ್ದು, ನಿಜವಾದ ಅರ್ಥದಲ್ಲಿ ‘ಸನಾತನ ರಾಷ್ಟ್ರ’ದ ಶಂಖನಾದ ಮೊಳಗಿದೆ ಎಂದು ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ್ ಅವರು ತಿಳಿಸಿದ್ದಾರೆ. ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಸಮಾರೋಪ ಪತ್ರಿಕಾಗೋಷ್ಠಿ ಮೇ 27 ರಂದು ನಡೆಯಿತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಶ್ರೀ. ವರ್ತಕ ಅವರು ಮಾತು ಮುಂದುವರೆಸಿ, “ಗೋವಾದ ಇತಿಹಾಸದಲ್ಲಿ ಭಾರತ ಸೇರಿದಂತೆ 23 ದೇಶಗಳಿಂದ 30 ಸಾವಿರಕ್ಕೂ ಹೆಚ್ಚು ಜನರ ಇಷ್ಟು ಭವ್ಯ, ನಯನಮನೋಹರ ಮತ್ತು ಯೋಜಿತ ಏಕೈಕ ಕಾರ್ಯಕ್ರಮ ಆಗಿತ್ತು ಎಂದು ಅನೇಕ ಚಿಂತಕರು, ಪ್ರಾಧ್ಯಾಪಕರು, ಉದ್ಯಮಿಗಳು, ಬರಹಗಾರರು, ಸಂಪಾದಕರು, ಕೇಂದ್ರ ಸಚಿವರು ಮತ್ತು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರತಿ ವರ್ಷವೂ ಇಂತಹ ಶಂಖನಾದ ಮಹೋತ್ಸವವನ್ನು ಆಯೋಜಿಸಬೇಕು ಎಂದು ಸಮಾಜದಿಂದ ಬೇಡಿಕೆ ಬರತೊಡಗಿದೆ” ಎಂದರು.
ಫೋಂಡಾದ ‘ಪ್ಯಾನ್ ಅರೋಮಾ’ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಚುನಾವಣಾ ಆಯುಕ್ತ ಶ್ರೀ. ನಾರಾಯಣ ನಾವತಿ, ಉದ್ಯಮಿ ಶ್ರೀ. ಮನೋಜ ಗಾಂವ್ಕರ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ, ಉದ್ಯಮಿ ಮತ್ತು ಸಮಾಜ ಸೇವಕ ಶ್ರೀ. ಜಯಂತ ಮಿರಿಂಗ್ಕರ್, ಬ್ರಾಹ್ಮಣ ಮಹಾಸಂಘದ ಶ್ರೀ. ರಾಜ ಶರ್ಮಾ ಮತ್ತು ಗೋಮಂತಕ ಮಂದಿರ ಮಹಾಸಂಘದ ಕಾರ್ಯದರ್ಶಿ ಶ್ರೀ. ಜಯೇಶ ಥಳಿ ಅವರು ಉಪಸ್ಥಿತರಿದ್ದರು.
ಶ್ರೀ. ವರ್ತಕ್ ಅವರು ಮಾತು ಮುಂದುವರೆಸಿ,

1. ಮಹೋತ್ಸವದ ಉತ್ತರಾರ್ಧದಲ್ಲಿ ನಡೆದ ಶತಚಂಡಿ ಯಾಗವು ವಿಶೇಷವಾಗಿ ‘ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಭಾರತೀಯ ಸೇನೆಯು ವಿಜಯ ಸಾಧಿಸಬೇಕು’ ಎಂಬ ಉದ್ದೇಶದಿಂದ ನಡೆಸಲಾಯಿತು. ಈ ಸಮಯದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಸೈನ್ಯಕ್ಕಾಗಿ 1 ಲಕ್ಷದ 11 ಸಾವಿರ ರೂಪಾಯಿಗಳ ಮೊತ್ತವನ್ನು ಗೋವಾ ಮುಖ್ಯಮಂತ್ರಿ ಶ್ರೀ. ಪ್ರಮೋದ ಸಾವಂತ್ ಅವರಿಗೆ ಹಸ್ತಾಂತರಿಸಲಾಯಿತು.
2. ಈ ಮಹೋತ್ಸವದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಶುಭ ಹಸ್ತದಿಂದ 4 ಗಣ್ಯರಿಗೆ ‘ಹಿಂದೂ ರಾಷ್ಟ್ರರತ್ನ’ ಪ್ರಶಸ್ತಿ ಮತ್ತು 21 ಗಣ್ಯರಿಗೆ ‘ಸನಾತನ ಧರ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
3. ಈ ಮಹೋತ್ಸವಕ್ಕಾಗಿ ಸಾವಿರಾರು ಭಕ್ತರು ಹೊರಗಿನ ರಾಜ್ಯದಿಂದ ಆಗಮಿಸಿದ್ದರು. ಅವರು ಗೋವಾದಲ್ಲಿರುವ ದೇವಾಲಯಗಳು, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದರಿಂದ ಗೋವಾದಲ್ಲಿ ‘ಆಧ್ಯಾತ್ಮಿಕ ಪ್ರವಾಸೋದ್ಯಮ’ (Spiritual Tourism)ಕ್ಕೆ ಹೆಚ್ಚಿನ ಉತ್ತೇಜನ ಸಿಕ್ಕಿತು. ದೇಶ-ವಿದೇಶಗಳಿಂದ ಆಗಮಿಸಿದ ಗಣ್ಯರಿಗೆ ಗೋವಾ ‘ಭೋಗಭೂಮಿ’ ಅಲ್ಲ, ‘ಯೋಗಭೂಮಿ’ ಎಂದು ಮನವರಿಕೆ ಮಾಡಿಸುವಲ್ಲಿ ಈ ಮಹೋತ್ಸವವು ದೊಡ್ಡ ಯಶಸ್ಸನ್ನು ಸಾಧಿಸಿದೆ, ಎಂದು ಖಂಡಿತವಾಗಿ ಹೇಳಬಹುದು.
4. ಈ ಭವ್ಯ ಮಹೋತ್ಸವದ ಚರ್ಚೆಯು ದೇಶಾದ್ಯಂತ ಹರಡಿದ್ದು, ‘ಶಂಖನಾದ’ ಎಂಬ ಪರಿಕಲ್ಪನೆಯು ಈಗ ದೇಶಾದ್ಯಂತ ರಾಷ್ಟ್ರನಿರ್ಮಾಣದ ಚೇತನವನ್ನು ಮೂಡಿಸುತ್ತಿದೆ. ಒಟ್ಟಾರೆ ಈ ಮಹೋತ್ಸವದಿಂದ ‘ರಾಷ್ಟ್ರೀಯ ಏಕತೆ’, ‘ಭಾರತೀಯತೆಯ ಭಾವನೆ’, ‘ಆಧ್ಯಾತ್ಮಿಕ ಶಕ್ತಿ’, ‘ಸಾಂಸ್ಕೃತಿಕ ಚೇತನ’ ಮತ್ತು ‘ಶೌರ್ಯ’ ಇವುಗಳ ಪರಿಣಾಮಕಾರಿ ಜಾಗೃತಿ ಉಂಟಾಯಿತು.
5. ಈ ಕಾರ್ಯಕ್ರಮದ ಯಶಸ್ವಿ ಆಯೋಜನೆಯಲ್ಲಿ ಗೋವಾ ಸರಕಾರ, ಪೊಲೀಸ್ ಆಡಳಿತ, ಗೋವಾ ಇಂಜಿನಿಯರಿಂಗ್ ಕಾಲೇಜು, ಸ್ಥಳೀಯ ಜನಪ್ರತಿನಿಧಿಗಳು, ಸರಪಂಚರು, ಗ್ರಾಮಸ್ಥರು ಇವರೆಲ್ಲರ ಅಪಾರ ಪ್ರಮಾಣದಲ್ಲಿ ಸಹಕಾರ ದೊರಕಿತು. ಅದೇ ರೀತಿ ಪತ್ರಕರ್ತರು, ಉದ್ಯಮಿಗಳು ಮತ್ತು ಸೇವಾ ಸಂಸ್ಥೆಗಳ ಕೊಡುಗೆ ಅತ್ಯಮೂಲ್ಯವಾಗಿತ್ತು.
ಪತ್ರಿಕಾಗೋಷ್ಠಿಯಲ್ಲಿ ಇತರ ಗಣ್ಯರು ಸಹ ಮಾತನಾಡಿದರು.

ಸನಾತನ ರಾಷ್ಟ್ರದ ಬಗ್ಗೆ ಹೆಚ್ಚಿನ ಜಾಗೃತಿ! – ಮನೋಜ ಗಾಂವ್ಕರ್
ಫೋಂಡಾದ ಉದ್ಯಮಿ ಹಾಗೂ ಮಹೋತ್ಸವ ಆಯೋಜನಾ ಸಮಿತಿಯ ಸದಸ್ಯರಾದ ಶ್ರೀ. ಮನೋಜ ಗಾಂವ್ಕರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಯಶಸ್ವಿ ಆಯೋಜನೆಯಿಂದ ಸನಾತನ ರಾಷ್ಟ್ರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿದೆ. ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳು, ಸಂಪ್ರದಾಯಗಳು ಮತ್ತು ಸಮಸ್ತ ಹಿಂದೂಗಳು ಒಗ್ಗೂಡಬಹುದು ಎಂದು ಮಹೋತ್ಸವದಿಂದ ಅರಿವಾಯಿತು. ಈ ಚಳುವಳಿಯನ್ನು ಹೀಗೆಯೇ ಮುಂದುವರಿಸಬೇಕು ಎಂದು ಅನೇಕರು ಇಚ್ಛೆ ವ್ಯಕ್ತಪಡಿಸಿದ್ದಾರೆ” ಎಂದರು.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !