Pakistan China Fake Photo : ಭಾರತದ ಮೇಲೆ ಪಾಕಿಸ್ತಾನ ಮಾಡಿದ ದಾಳಿಯ ಚಿತ್ರವೆಂದು ಚೀನೀ ಸೇನೆಯ ಛಾಯಾಚಿತ್ರವನ್ನು ಉಡುಗೊರೆಯಾಗಿ ಕೊಟ್ಟರು !

ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸೀಮ ಮುನೀರ್ ಅವರು ಪ್ರಧಾನಿ ಷರೀಫರನ್ನು ಮೂರ್ಖರನ್ನಾಗಿಸಿದರು

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಆಗಿ ನೇಮಿಸಿದ ನಂತರ, ಅವರು ಮೇ 25 ರ ರಾತ್ರಿ ಔತಣಕೂಟವನ್ನು ಆಯೋಜಿಸಿದ್ದರು. ಈ ಔತಣಕೂಟದಲ್ಲಿ ಪ್ರಧಾನಿ ಷಹಬಾಜ್ ಷರೀಫ್, ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ನಾಯಕ ಬಿಲಾವಲ್ ಭುಟ್ಟೋ ಸೇರಿದಂತೆ ರಾಜಕಾರಣಿಗಳು ಮತ್ತು ಸೇನಾ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ, ಅಸೀಮ ಮುನೀರ್ ಅವರು ಪ್ರಧಾನಿ ಷರೀಫ್ ಅವರಿಗೆ ಒಂದು ಛಾಯಾಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಈ ಛಾಯಾಚಿತ್ರವು ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತಕ್ಕೆ ಪಾಕಿಸ್ತಾನ ನೀಡಿದ ಪ್ರತ್ಯುತ್ತರದ ಕಥೆಯಾಗಿದೆ ಎಂದು ಹೇಳಲಾಗಿತ್ತು; ಆದರೆ, ವಾಸ್ತವದಲ್ಲಿ ಈ ಛಾಯಾಚಿತ್ರ ಐದು ವರ್ಷಗಳಷ್ಟು ಹಳೆಯದು ಮತ್ತು ಚೀನೀ ಸೇನೆಗೆ ಸಂಬಂಧಿಸಿದ್ದು ಎಂದು ಬಹಿರಂಗವಾಗಿದೆ. ಇದರಿಂದಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಮುನೀರ್ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.

ಮುನೀರ್ ಅವರು ನೀಡಿದ ಛಾಯಾಚಿತ್ರವು ಆಗಸ್ಟ್ 18, 2018 ರಂದು, ಚೀನೀ ಸೇನೆಯ 74 ನೇ ಗುಂಪಿನ ಅಡಿಯಲ್ಲಿ, ‘ಪಿ ಎಚ್ ಎಲ್-03 ಲಾಂಗ್ ರೇಂಜ್ ರಾಕೆಟ್ ಸಿಸ್ಟಮ್’ ಮೂಲಕ ಹಲವು ರಾಕೆಟ್‌ಗಳನ್ನು ಉಡಾಯಿಸಲಾಯಿತು. ಅದರ ಕಾರ್ಯಾಚರಣೆಯ ಛಾಯಾಚಿತ್ರವಿದಾಗಿದೆ.

ಸಂಪಾದಕೀಯ ನಿಲುವು

ಭಾರತವು ‘ಆಪರೇಷನ್ ಸಿಂದೂರ್’ ಮೂಲಕ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ನಂತರವೂ, ತಮ್ಮ ವಿಜಯವನ್ನು ಆಚರಿಸುತ್ತಿರುವ ಪಾಕಿಸ್ತಾನಿ ಸೇನೆ ಮತ್ತು ಸರಕಾರದ ಈ ಬೌದ್ಧಿಕ ದಿವಾಳಿತನವನ್ನು ಜಗತ್ತು ನೋಡುತ್ತಿದೆ!