ಪಾಕಿಸ್ತಾನದ ಸಂಸದ ಸೈಯದ್ ಅಲಿ ಜಾಫರ್ ಅವರ ಪಾಕ್ ಸಂಸತ್ತಿನಲ್ಲಿ ಸರಕಾರಕ್ಕೆ ಮನವಿ!

ಇಸ್ಲಾಮಾಬಾದ್ (ಪಾಕಿಸ್ತಾನ) – “ನಾವು ಈಗಲೇ ನೀರಿನ ಬಿಕ್ಕಟ್ಟನ್ನು ಪರಿಹರಿಸದಿದ್ದರೆ, ನಾವು ಹಸಿವಿನಿಂದ ಸಾಯಬಹುದು. ಇದು ‘ವಾಟರ್ ಬಾಂಬ್’ (ನೀರಿನ ಬಾಂಬ್); ಏಕೆಂದರೆ ಸಿಂಧೂ ಕಣಿವೆ ನಮ್ಮ ಜೀವನಾಡಿಯಾಗಿದೆ. ನಮ್ಮ ದೇಶದ ಮೂರು ಭಾಗದಷ್ಟು ನೀರು ದೇಶದ ಹೊರಗಿನಿಂದ ಬರುತ್ತದೆ. ನಮ್ಮ ಪ್ರತಿ ೧೦ ರಲ್ಲಿ ೯ ಜನರು ಈ ನದಿಯನ್ನು ಅವಲಂಬಿಸಿದ್ದಾರೆ. ನಮ್ಮ ೯೦ ಪ್ರತಿಶತ ಬೆಳೆಗಳಿಗೆ ಈ ನದಿಯಿಂದ ನೀರು ದೊರೆಯುತ್ತದೆ. ಈ ಬಿಕ್ಕಟ್ಟಿನಿಂದ ಆದಷ್ಟು ಬೇಗ ಹೊರಬರಲು ಸರಕಾರ ಕೆಲವು ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಪಾಕಿಸ್ತಾನದ ಸಂಸದ ಸೈಯದ್ ಅಲಿ ಜಾಫರ್ ಅವರು ಪಾಕಿಸ್ತಾನದ ಸಂಸತ್ತಿನಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿದ ಕುರಿತು ಒತ್ತಾಯಿಸಿದರು. ಅಲಿ ಜಾಫರ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ‘ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್’ ಪಕ್ಷದ ಸಂಸದರಾಗಿದ್ದಾರೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ