India Stern Warning China Turkey : ಟರ್ಕಿಯೆ ಮತ್ತು ಚೀನಾವು ಭಾರತ-ಪಾಕಿಸ್ತಾನದ ಸಂಘರ್ಷದ ಬಗ್ಗೆ ಸೂಕ್ಷ್ಮವಾಗಿರಬೇಕು!

ಪಾಕಿಸ್ತಾನಕ್ಕೆ ನೀಡಿದ್ದ ಬೆಂಬಲದ ಕುರಿತು ಟರ್ಕಿಯೆ ಮತ್ತು ಚೀನಾಗೆ ತರಾಟೆಗೆ ತೆಗೆದುಕೊಂಡ ಭಾರತ

ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್

ನವದೆಹಲಿ – ‘ಆಪರೇಷನ್ ಸಿಂದೂರ್’ ಅಡಿಯಲ್ಲಿ ಮೇ ೭ ರಿಂದ ೧೦ ರವರೆಗೆ ನಡೆದ ಸೇನಾ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಚೀನಾ ಮತ್ತು ಟರ್ಕಿಯೆ ದೇಶಗಳ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಬಳಸಿದೆ ಎಂದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತವು ಟರ್ಕಿಯೆ ಮತ್ತು ಚೀನಾಗೆ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದ ಬಗ್ಗೆ ಸೂಕ್ಷ್ಮವಾಗಿರಲು ಸೂಚಿಸಿದೆ.

೧. ಭಾರತವು, ‘ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಮತ್ತು ಹಲವು ವರ್ಷಗಳಿಂದ ಪೋಷಿಸುತ್ತಿರುವ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಟರ್ಕಿಯೆ ಪಾಕಿಸ್ತಾನವನ್ನು ಒತ್ತಾಯಿಸಬೇಕು.

೨. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಚೀನಾದ ವಿದೇಶಾಂಗ ಸಚಿವರು ಮೇ ೧೦, ೨೦೨೫ ರಂದು ಪರಸ್ಪರ ಚರ್ಚಿಸಿದ್ದರು. ಹಾಗಾಗಿ, ಪರಸ್ಪರ ನಂಬಿಕೆ, ಪರಸ್ಪರ ಗೌರವ ಮತ್ತು ಪರಸ್ಪರ ಸಂವೇದನಾಶೀಲತೆ ಭಾರತ-ಚೀನಾ ಸಂಬಂಧಗಳ ಆಧಾರವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಚೀನಾಗೆ ತಿಳಿಸಿದ್ದಾರೆ.

೩. ಪಾಕಿಸ್ತಾನದ ಮನವಿ ನಂತರವೇ ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದವಾಗಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಸ್ಪಷ್ಟಪಡಿಸಿದ್ದಾರೆ. ‘ಆಪರೇಷನ್ ಸಿಂದೂರ್’ ಇನ್ನೂ ಪೂರ್ಣಗೊಂಡಿಲ್ಲ. ಭವಿಷ್ಯದಲ್ಲಿ ಭಯೋತ್ಪಾದಕ ದಾಳಿಗಳು ಸಂಭವಿಸಿದರೆ, ಪ್ರತಿದಾಳಿ ನಡೆಸಲು ಭಾರತ ಮತ್ತೆ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಎಚ್ಚರಿಕೆಗಳಿಗೆ ಚೀನಾ ಮತ್ತು ಟರ್ಕಿಯೆ ಸೊಪ್ಪು ಹಾಕುವುದಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಇವರಿಬ್ಬರಿಗೆ ಶಸ್ತ್ರಾಸ್ತ್ರಗಳ ಭಾಷೆ ಅರ್ಥವಾಗುವುದರಿಂದ ಅವರಿಗೆ ಅದೇ ಭಾಷೆಯಲ್ಲಿ ಉತ್ತರ ನೀಡುವುದು ಸೂಕ್ತ!