
‘ಭಾರತವು ಸಂತರ ಭೂಮಿಯಾಗಿದೆ. ‘ಅಧ್ಯಾತ್ಮಜ್ಞಾನ’ವು ಭಾರತದ ಸರ್ವೋತ್ತಮ ವೈಶಿಷ್ಟ್ಯ ವಾಗಿದೆ. ಭಾರತದಲ್ಲಿ ಅನೇಕ ಶ್ರೇಷ್ಠ ಸಂತರು ಜನ್ಮ ತಾಳಿದರು. ಅವರು ಜನರಿಗೆ ‘ಆನಂದಮಯ ಜೀವನ ಮಾಡುವುದು ಹೇಗೆ ?’ ಎಂದು ಕಲಿಸಿದರು. ಕಳೆದ ೪೦೦ ವರ್ಷಗಳ ವಿಚಾರ ಮಾಡಿದರೆ ೧೭ ನೇ ಶತಮಾನದಲ್ಲಿ ಸಮರ್ಥ ರಾಮದಾಸಸ್ವಾಮಿಗಳು, ೧೯ ನೇ ಶತಮಾನದಲ್ಲಿ ಸ್ವಾಮಿ ವಿವೇಕಾನಂದರು ಮತ್ತು ೨೦ ನೇ ಶತಮಾನದಲ್ಲಿ ಮಹರ್ಷಿ ಅರವಿಂದರು ಈ ಸಂತರು ಜನರಿಗೆ ಸಾಧನೆ ಕಲಿಸುವುದರೊಂದಿಗೆ ರಾಷ್ಟ್ರ-ಧರ್ಮರಕ್ಷಣೆಯ ದೊಡ್ಡ ಕಾರ್ಯ ಮಾಡಿದರು. ಈ ಸಂತರಂತೆಯೇ ಸದ್ಯದ ೨೧ ನೇ ಶತಮಾನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ರಾಷ್ಟ್ರ-ಧರ್ಮರಕ್ಷಣೆಯ ಕಾರ್ಯವನ್ನು ಮಾಡುತ್ತಿ ದ್ದಾರೆ. ಈ ೪ ಸಂತರ ಜನ್ಮಕುಂಡಲಿಗಳ ಅಧ್ಯಯನ ಮಾಡಿದಾಗ ಅವರ ಜನ್ಮಕುಂಡಲಿಗಳಲ್ಲಿನ ಅನೇಕ ಗ್ರಹಯೋಗಗಳಲ್ಲಿ ಸಾಮ್ಯತೆ ಇರುವುದು ನಮಗೆ ತಿಳಿಯಿತು. ಕಳೆದ ಸಂಚಿಕೆಯಲ್ಲಿ ಕೆಲವು ಭಾಗ ನೋಡಿದೆವು ಈ ವಾರ ಮುಂದಿನ ಭಾಗ ನೊಡೋಣ.
೨. ರಾಷ್ಟ್ರ ಮತ್ತು ಧರ್ಮರಕ್ಷಣೆಯ ಕಾರ್ಯ
ಕುಂಡಲಿಯಲ್ಲಿ ರವಿ, ಮಂಗಳ, ಗುರು ಮತ್ತು ಶನಿ ಇವುಗಳ ನಡುವೆ ಮಹತ್ವದ ಯೋಗವಿದೆ, ಈ ಯೋಗಗಳು ಪೂರಕ ಸ್ಥಾನಗಳಲ್ಲಿ ಮತ್ತು ರಾಶಿಗಳಲ್ಲಿರುವುದು ವ್ಯಕ್ತಿಯಲ್ಲಿ ಸಮಷ್ಟಿ ಕಾರ್ಯ ಮಾಡುವ ಕ್ಷಮತೆಯನ್ನು ತೋರಿಸುತ್ತವೆ. ರವಿ, ಮಂಗಳ ಮತ್ತು ಗುರು ಇವುಗಳೊಂದಿಗೆ ಪರಸ್ಪರ ಇರುವ ಸಂಯೋಗವು ಧೈರ್ಯ, ನೇತೃತ್ವ ಗುಣ, ಕಾರ್ಯಕ್ಷಮತೆ, ಬುದ್ಧಿವಂತಿಕೆ, ತೇಜ, ಸಾಮರ್ಥ್ಯ ಇತ್ಯಾದಿಗಳನ್ನು ಪ್ರದಾನಿಸುತ್ತವೆ. ಈ ಗುಣ ಗಳಿಂದಾಗಿ ವ್ಯಕ್ತಿ ಸಮಾಜದ ನೇತೃತ್ವವನ್ನು ಮಾಡುತ್ತಾನೆ ಹಾಗೂ ಸಮಾಜಕ್ಕೆ ದೃಷ್ಟಿಕೋನ ನೀಡುತ್ತಾನೆ. ಇಂತಹ ಯೋಗ ಸಂತರ ಕುಂಡಲಿಯಲ್ಲಿದ್ದರೆ ಇಂತಹ ಸಂತರು ಸಾಧನೆಯನ್ನು ಕಲಿಸುವುದರ ಜೊತೆಗೆ ರಾಷ್ಟ್ರ-ಧರ್ಮದ ರಕ್ಷಣೆಗಾಗಿ ಸಮಾಜದ ನೇತೃತ್ವ ಮಾಡುತ್ತಾರೆ.ಇಂತಹ ಸಂತರ ಮಾಧ್ಯಮದಿಂದ ಈಶ್ವರನೇ ಕಾರ್ಯ ಮಾಡುತ್ತಾನೆ.
೨ ಅ. ಸಮರ್ಥ ರಾಮದಾಸಸ್ವಾಮಿಗಳು
೨ ಅ ೧. ಜನರಲ್ಲಿ ರಾಷ್ಟ್ರ-ಧರ್ಮ ಭಾವನೆಯನ್ನು ಜಾಗೃತಗೊಳಿಸಿ ಅವರನ್ನು ‘ಹಿಂದವೀ ಸ್ವರಾಜ್ಯ’ದ ನಿರ್ಮಿತಿ ಕಾರ್ಯದಲ್ಲಿ ಸಮರ್ಪಿಸಿಕೊಳ್ಳಲು ಪ್ರೇರಣೆ ಕೊಡುವುದು : ಸಮರ್ಥ ರಾಮದಾಸಸ್ವಾಮಿ ಯವರ ಕುಂಡಲಿಯಲ್ಲಿ ‘ರವಿ’, ‘ಬುಧ’ ಮತ್ತು ‘ಗುರು’ ಇವರ ದಶಮ (ಕರ್ಮ) ಸ್ಥಾನದಲ್ಲಿ ಯುತಿ ಇದೆ ಹಾಗೂ ಈ ೩ ಗ್ರಹಗಳಿಗೆ ‘ಮಂಗಳ’ ಗ್ರಹದೊಂದಿಗೆ ಶುಭಯೋಗವಿದೆ. ಇವು ಬಲಿಷ್ಠ ಯೋಗಗಳಾಗಿವೆ. ಈ ಯೋಗ ಕ್ಷಾತ್ರತೇಜ, ಸಾಮರ್ಥ್ಯ, ನೇತೃತ್ವ, ಜನಜಾಗೃತಿ ಮುಂತಾದ ಪರಿಣಾಮವನ್ನು ತೋರಿಸುತ್ತವೆ. ಸಮರ್ಥರ ಕಾಲದಲ್ಲಿ ದೀರ್ಘಕಾಲದ ಇಸ್ಲಾಮೀ ಆಕ್ರಮಣ ಗಳಿಂದಾಗಿ ಜನರು ಹತಾಶರಾಗಿದ್ದರು. ಜನರ ಪ್ರತಿಕಾರಶಕ್ತಿ ಲೋಪವಾಗಿತ್ತು. ಇಂತಹ ಕಠಿಣ ಪ್ರಸಂಗದಲ್ಲಿ ಸಮರ್ಥರು ಅವರ ಶಿಷ್ಯರೊಂದಿಗೆ ಜನರ ಮನೆಮನೆಗೆ ಹೋಗಿ ಅವರ ಮನಸ್ಸಿನಲ್ಲಿ ರಾಷ್ಟ್ರ-ಧರ್ಮ ಭಾವನೆಯನ್ನು ಜಾಗೃತ ಗೊಳಿಸಿದರು. ಸಮರ್ಥರು ಜನರನ್ನು ಸಂಘಟಿಸಿದರು ಹಾಗೂ ಅವರಿಗೆ ಛತ್ರಪತಿ ಶಿವಾಜಿ ಮಹಾರಾಜರು ಕೈಗೆತ್ತಿಕೊಂಡ ‘ಹಿಂದವೀ ಸ್ವರಾಜ್ಯ’ದ ನಿರ್ಮಾಣಕಾರ್ಯದಲ್ಲಿ ಸಮರ್ಪಿಸಿಕೊಳ್ಳಲು ಪ್ರೇರಣೆ ನೀಡಿದರು. ಶ್ರೀ ಹನುಮಂತನ ಹಾಗೆ ಶಕ್ತಿ, ಭಕ್ತಿ ಹಾಗೂ ಬುದ್ಧಿ ಪ್ರಾಪ್ತವಾಗಲು ಸಮರ್ಥರು ಅನೇಕ ಸ್ಥಳಗಳಲ್ಲಿ ಹನುಮಂತನ ಮಂದಿರಗಳನ್ನು ಸ್ಥಾಪಿಸಿದರು ಹಾಗೂ ವ್ಯಾಯಾಮಶಾಲೆಗಳನ್ನು ನಿರ್ಮಿಸಿದರು. ಸಮರ್ಥರ ಹಿಂದೂ ಧರ್ಮ ಮತ್ತು ರಾಷ್ಟ್ರದ ಪುನರುಜ್ಜೀವನಗೊಳಿಸುವ ಕಾರ್ಯ ಅಭೂತಪೂರ್ಣವಾಗಿತ್ತು. ಅವರ ಕಾರ್ಯದಿಂದ ನಂತರ ಸ್ವಾತಂತ್ರ್ಯವೀರ ಸಾವರಕರ, ಲೋಕಮಾನ್ಯ ಟಿಳಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಹೆಡಗೆವಾರ, ಇತಿಹಾಸತಜ್ಞ ವಿ.ಕಾ. ರಾಜವಾಡೆ ಮುಂತಾದ ಅನೇಕ ರಾಷ್ಟ್ರಭಕ್ತರು ಪ್ರೇರಣೆ ಪಡೆದರು.
೨ ಆ. ಸ್ವಾಮಿ ವಿವೇಕಾನಂದ
೨ ಆ ೧. ಯುವಕರನ್ನು ಸಕ್ಷಮಗೊಳಿಸಿ ರಾಷ್ಟ್ರದ ಉನ್ನತಿಗಾಗಿ ಕಾರ್ಯವನ್ನು ಮಾಡುವ ಪ್ರೇರಣೆ ನೀಡುವುದು, ಹಾಗೆಯೇ ಹಿಂದೂ ಧರ್ಮವನ್ನು ಜಾಗತಿಕ ಸ್ತರಕ್ಕೆ ಒಯ್ಯುವುದು : ಸ್ವಾಮಿ ವಿವೇಕಾನಂದರ ಕುಂಡಲಿಯಲ್ಲಿ ‘ರವಿ’, ‘ಮಂಗಳ’ ಹಾಗೂ ‘ಗುರು’ ಇವುಗಳ ಪರಸ್ಪರ ಯೋಗವಿದೆ. ಇವುಗಳಲ್ಲಿ ‘ರವಿ’ ಮತ್ತು ‘ಮಂಗಳ’ ಇವು ಅನುಕ್ರಮವಾಗಿ ‘ಧನು’ ಹಾಗೂ ಮೇಷ’ ಈ ಅಗ್ನಿತತ್ತ್ವದ ರಾಶಿ ಗಳಲ್ಲಿವೆ. ಇದು ಬಲಿಷ್ಠ ಯೋಗ ವಾಗಿದೆ. ಈ ಯೋಗವು ಸಾಮರ್ಥ್ಯ, ತೇಜ, ಬುದ್ಧಿ, ಶಕ್ತಿ ಹಾಗೂ ನೇತೃತ್ವ ವನ್ನು ತೋರಿಸುತ್ತದೆ. ಸ್ವಾಮಿ ವಿವೇಕಾನಂದರು ಭಾರತೀಯ ಸಮಾಜಕ್ಕೆ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಅಭಿಮಾನ ವನ್ನು ಹೆಚ್ಚಿಸಲು ಪ್ರೇರಣೆ ನೀಡಿದರು. ಅವರು ಯುವಕರಿಗೆ ಶಾರೀರಿಕ ಹಾಗೂ ಆತ್ಮಬಲವನ್ನು ಹೆಚ್ಚಿಸಿಕೊಳ್ಳುವ ಮಂತ್ರವನ್ನು ನೀಡಿದರು. ‘ಎದ್ದೇಳಿ, ಜಾಗೃತರಾಗಿರಿ ಹಾಗೂ ಧ್ಯೇಯ ಸಾಧ್ಯವಾಗುವವರೆಗೆ ಮುನ್ನಡೆಯಿರಿ !’ ಈ ಘೋಷಣೆಯನ್ನು ಪುರಸ್ಕರಿಸಿದರು. ಅವರು ಭಾರತೀಯರಿಗೆ ಕರ್ಮಯೋಗದ ಬೋಧನೆ ಮಾಡಿ ರಾಷ್ಟ್ರದ ಉನ್ನತಿಗಾಗಿ ಕಾರ್ಯ ಮಾಡುವ ಪ್ರೇರಣೆ ನೀಡಿದರು.
ಸ್ವಾಮಿ ವಿವೇಕಾನಂದರು ‘ಚಿಕಾಗೋ’ (ಅಮೇರಿಕಾ) ದಲ್ಲಿನ ಜಾಗತಿಕ ಧರ್ಮ ಪರಿಷತ್ತಿ ನಲ್ಲಿ ಸಂಬೋಧಿಸುವಾಗ ಹಿಂದೂ ಧರ್ಮದ ‘ಸರ್ವಸಮಾವೇಶಕ, ಸಹಿಷ್ಣುತೆ ಹಾಗೂ ವ್ಯಾಪಕ’ ದೃಷ್ಟಿಕೋನವನ್ನು ಜಗತ್ತಿನ ಮುಂದಿಟ್ಟರು. ಅದರಿಂದ ಸಂಪೂರ್ಣ ಜಗತ್ತು ಭಾರತದ ಕಡೆಗೆ ಆಕರ್ಷಿಸಲ್ಪಟ್ಟಿತು. ಸ್ವಾಮೀಜಿಯವರು ಹಿಂದೂ ಧರ್ಮಕ್ಕೆ ಜಾಗತಿಕ ಸ್ತರದಲ್ಲಿ ಸ್ಥಾನ ನೀಡಿದರು. ಸ್ವಾಮೀಜಿಯವರು ೨ ವರ್ಷ ‘ಅಮೇರಿಕಾ’ ಮತ್ತು ‘ಯುರೋಪ್’ನಲ್ಲಿ ಪ್ರವಾಸ ಮಾಡಿ ಅಧ್ಯಾತ್ಮದ ಬಗ್ಗೆ ನೂರಾರು ಪ್ರವಚನ ಗಳನ್ನು ನೀಡಿದರು. ಅದರಿಂದ ಅನೇಕ ಪಾಶ್ಚಾತ್ಯ ವಿದ್ವಾಂಸರು, ತತ್ತ್ವಜ್ಞಾನಿಗಳು, ರಾಜಕಾರಣಿ ಗಳು ಸ್ವಾಮೀಜಿಯವರ ಬೋಧನೆಯಿಂದ ಪ್ರಭಾವಿತರಾದರು.
೨ ಇ. ಮಹರ್ಷಿ ಅರವಿಂದರು
೨ ಇ ೧. ಮಾನವೀ ಚೇತನದ ವಿಕಾಸಕ್ಕಾಗಿ ಒತ್ತು ಕೊಡುವುದು ಹಾಗೂ ಭಾರತ ‘ವಿಶ್ವದ ಆಧ್ಯಾತ್ಮಿಕ ಗುರು’ ಆಗುವುದರ ಮಾರ್ಗವನ್ನು ತೋರಿಸುವುದು : ಮಹರ್ಷಿ ಅರವಿಂದರ ಕುಂಡಲಿಯಲ್ಲಿ ಗುರು ಗ್ರಹದ ‘ರವಿ’, ‘ಮಂಗಳ’ ಹಾಗೂ ‘ಹರ್ಷಲ’ ಈ ಗ್ರಹಗಳ ಯುತಿ ಇದೆ. ಈ ಯುತಿಯು ‘ಕರ್ಕ’ ಈ ಜಲತತ್ತ್ವದ ರಾಶಿಯಲ್ಲಿದೆ. ಈ ಯೋಗ ಸೂಕ್ಷ್ಮ, ಸಂವೇದನಾಶೀಲ ಹಾಗೂ ಭಾವಾತ್ಮಕ ಪದ್ಧತಿಯಿಂದ ಸಮಷ್ಟಿ ಕಾರ್ಯ ಮಾಡುವ ಕ್ಷಮತೆಯನ್ನು ತೋರಿಸುತ್ತದೆ. ಮಹರ್ಷಿ ಅರವಿಂದರ ರಾಷ್ಟ್ರಕಾರ್ಯ ಸೂಕ್ಷ್ಮ ಹಾಗೂ ದೀರ್ಘ ಕಾಲದ ವರೆಗೆ ಪ್ರಭಾವ ಬೀರುವುದಾಗಿತ್ತು. ಅವರು ರಾಷ್ಟ್ರ ಕಾರ್ಯಕ್ಕೆ ಆಧ್ಯಾತ್ಮಿಕ ಸ್ವರೂಪವನ್ನು ನೀಡಿದರು. ‘ಭಾರತ ರಾಜಕೀಯ ಸ್ವಾತಂತ್ರ್ಯವನ್ನು ಗಳಿಸು ವುದರೊಂದಿಗೆ ಆತ್ಮಿಕ ಸ್ವಾತಂತ್ರ್ಯವನ್ನೂ ಗಳಿಸ ಬೇಕು. ನಿಜವಾದ ಕ್ರಾಂತಿ ಮಾನವ ಚೇತನದಲ್ಲಿ ಘಟಿಸಬೇಕು. ಮಾನವ ದಿವ್ಯತ್ವದ ಕಡೆಗೆ ಪ್ರವಾಸ ಮಾಡಬೇಕು’, ಎಂಬ ವಿಚಾರವನ್ನು ಅವರು ಮುಂದಿಟ್ಟರು. ಮಾನವನಲ್ಲಿ ಚೇತನದ ಪ್ರಮಾಣ ಕುಸಿದಾಗ ಅವನು ವಾಸನೆಗೆ ಬಲಿಯಾಗಿ ದುಃಖಿ ಹಾಗೂ ದುರ್ಬಲನಾಗುತ್ತಾನೆ; ಆದರೆ ಮಾನವನು ಸಾಧನೆಯ ಮೂಲಕ ಚೇತನದ ವಿಕಾಸ ಮಾಡಿಕೊಂಡರೆ ಅವನು ಸಶಕ್ತ, ಜ್ಞಾನಿ, ವಿವೇಕಿ, ವ್ಯಾಪಕ ಹಾಗೂ ಆನಂದಿತನಾಗುವನು. ಸಾಧನೆಯ ಅಂತಿಮ ಧ್ಯೇಯ ಕೇವಲ ‘ಮಾಯೆಯಿಂದ ಮುಕ್ತಿ ಅಥವಾ ಸಮಾಧಿ’ ಆಗಿರದೆ ‘ಪೃಥ್ವಿಯ ಜೀವನದಲ್ಲಿ ದಿವ್ಯತ್ವವನ್ನು ತರುವುದಾಗಿದೆ’, ಇಂತಹ ಚೇತನದ ಉತ್ಕ್ರಾಂತಿಯ ಸಿದ್ಧಾಂತವನ್ನು ಅವರು ಮಂಡಿಸಿದರು. ಮಹರ್ಷಿ ಅರವಿಂದರು ಭಾರತ ‘ವಿಶ್ವದ ಆಧ್ಯಾತ್ಮಿಕ ಗುರು. ಅಗುವ ಮಾರ್ಗವನ್ನು ತೋರಿಸಿದರು. ಮಹರ್ಷಿ ಅರವಿಂದರ ವಿಚಾರಗಳಿಂದ ಅನೇಕ ಕ್ರಾಂತಿಕಾರಿಗಳು, ನೇತಾರರು, ತತ್ತ್ವಜ್ಞಾನಿಗಳು, ಶಾಸ್ತ್ರಜ್ಞರು, ಕಲಾವಿದರು ಮುಂತಾದವರು ಪ್ರಭಾವಿತರಾದರು.

೨ ಈ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
೨ ಈ ೧. ದೇಶವಿರೋಧಿ ಶಕ್ತಿಗಳಿಂದ ರಾಷ್ಟ್ರ-ಧರ್ಮದ ಮೇಲಾಗುವ ಆಘಾತವನ್ನು ಗುರುತಿಸಿ ಅದರ ಪ್ರತಿಕಾರಕ್ಕಾಗಿ ಭಾರತದಲ್ಲಿ ‘ಹಿಂದೂ ರಾಷ್ಟ್ರ’ ಸ್ಥಾಪನೆಯ ಸಂಕಲ್ಪ ಮಾಡುವುದು : ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಕುಂಡಲಿಯ ಪ್ರಥಮ ಸ್ಥಾನದಲ್ಲಿ ‘ಮಂಗಳ’ ಮತ್ತು ಹನ್ನೊಂದನೇ (ಲಾಭ) ಸ್ಥಾನದಲ್ಲಿ ಉಚ್ಚ ರಾಶಿಯಲ್ಲಿನ ‘ರವಿ’ ಇದೆ. ಅವರ ಕುಂಡಲಿಯಲ್ಲಿ ‘ಗುರು’ ಗ್ರಹ ಮೊದಲ ಸ್ಥಾನದ ಆರಂಭದಲ್ಲಿದೆ.
೩. ಸಂತರ ಜನ್ಮಕುಂಡಲಿಯಲ್ಲಿ ಕಂಡುಬಂದಿರುವ ಸಮಾನ ಗ್ರಹಯೋಗ
ಅ. ಮೇಲೆ ಉಲ್ಲೇಖಿಸಿದ ೪ ಜನ ಸಂತರ ಜನ್ಮ ಕುಂಡಲಿಗಳಲ್ಲಿ ಧರ್ಮಸ್ಥಾನಗಳ (೧, ೫, ಮತ್ತು ೯ ಈ ಸ್ಥಾನಗಳ) ಸ್ವಾಮಿಗಳ ಪರಸ್ಪರ ಶುಭಯೋಗವಿದೆ. ಆದ್ದರಿಂದ ಬುದ್ಧಿವಂತಿಕೆ, ಭಾಗ್ಯ, ಪೂರ್ವ ಜನ್ಮಗಳ ಸಾಧನೆ, ಗುರುಕೃಪೆ ಇತ್ಯಾದಿಗಳ ಲಾಭವಾಗುತ್ತದೆ.
ಆ. ಈ ಸಂತರ ಕುಂಡಲಿಗಳಲ್ಲಿ ಮೋಕ್ಷಸ್ಥಾನಗಳ (೪, ೮ ಮತ್ತು ೧೨ ಈ ಸ್ಥಾನಗಳ) ಸ್ವಾಮಿಗಳಲ್ಲಿಯೂ ಪರಸ್ಪರ ಶುಭಯೋಗವಿದೆ. ಆದ್ದರಿಂದ ತ್ಯಾಗ, ಸಮರ್ಪಣಾಭಾವ, ಆಧ್ಯಾತ್ಮಿಕ ಉನ್ನತಿ, ಆಧ್ಯಾತ್ಮಿಕ ಕಾರ್ಯ ಮಾಡುವುದು ಇತ್ಯಾದಿ ಪರಿಣಾಮವಾಗುತ್ತವೆ.
ಇ. ಈ ಸಂತರ ಕುಂಡಲಿಗಳಲ್ಲಿ ಅನೇಕ ಗ್ರಹಯೋಗಗಳು ಸಮಾನವಾಗಿವೆ. ಅದರಲ್ಲಿ ರವಿ-ಗುರು (ಜ್ಞಾನಶಕ್ತಿ), ಬುಧ-ಶನಿ (ತತ್ತ್ವಜ್ಞಾನ ಹಾಗೂ ಆಧ್ಯಾತ್ಮಿಕ ಕಾರ್ಯ), ಶುಕ್ರ-ಶನಿ (ಮಾಯೆ ಯಿಂದ ಅಲಿಪ್ತತೆ), ಗುರು-ಮಂಗಳ (ಸಮಷ್ಟಿ ಕಾರ್ಯವನ್ನು ಮಾಡುವ ಕ್ಷಮತೆ) ಮತ್ತು ಚಂದ್ರ-ನೆಪ್ಚ್ಯೂನ್ (ಸೂಕ್ಷ್ಮದಲ್ಲಿನ ವಿಷಯ ತಿಳಿಯುವ ಕ್ಷಮತೆ) ಈ ಗ್ರಹಯೋಗಗಳ ಸಮಾವೇಶವಿದೆ. ಬುಧ, ಶುಕ್ರ ಹಾಗೂ ಶನಿ ಇವುಗಳ ಪರಸ್ಪರ ಇರುವ ಶುಭಯೋಗ ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿವೆ ಮತ್ತು ರವಿ, ಮಂಗಳ ಮತ್ತು ಗುರು ಇವುಗಳ ಪರಸ್ಪರ ಇರುವ ಶುಭಯೋಗವು ರಾಷ್ಟ್ರ-ಧರ್ಮರಕ್ಷಣೆಯ ಕಾರ್ಯಕ್ಕಾಗಿ ಆವಶ್ಯಕ ಕ್ಷಮತೆಯನ್ನು ತೋರಿಸುತ್ತದೆ.
ಈ. ಈ ಸಂತರ ಜನ್ಮಕುಂಡಲಿಗಳಲ್ಲಿ ಗ್ರಹಗಳ ಪ್ರಬಲ ಅಶುಭಯೋಗವಿಲ್ಲ. ಆದ್ದರಿಂದ ವೈಯಕ್ತಿಕ ಪ್ರಾರಬ್ಧದಿಂದ ಜೀವನದಲ್ಲಿ ಬರುವ ಅಡಚಣೆಗಳು ಕಡಿಮೆಯಿರುತ್ತವೆ.
೩ ಅ. ಸಂತರ ಜನ್ಮಕುಂಡಲಿಗಳು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಮಾಡುವ ದೃಷ್ಟಿಯಲ್ಲಿ ಅನುಕೂಲವಿರುವುದು : ಈ ಮೇಲಿನ ವಿವೇಚನೆಯಿಂದ ಅರಿವಾಗುವ ಅಂಶವೆಂದರೆ, ಈ ಸಂತರ ಜನ್ಮಕುಂಡಲಿಗಳು ಆಧ್ಯಾತ್ಮಿಕ ಉನ್ನತಿಯ ದೃಷ್ಟಿಯಲ್ಲಿ ಉತ್ತಮವಾಗಿವೆ, ಹಾಗೆಯೇ ಅವು ಉಚ್ಚ ಮಟ್ಟದ ಹಾಗೂ ಅಸಾಮಾನ್ಯ ವಾಗಿವೆ. ಈ ಸಂತರ ಕುಂಡಲಿಗಳಲ್ಲಿ ‘ರವಿ’, ‘ಮಂಗಳ’ ಹಾಗೂ ‘ಗುರು’ ಇವುಗಳ ಶುಭಯೋಗ ಇರುವುದರಿಂದ ಅವರ ದೃಷ್ಟಿಕೋನ ವ್ಯಾಪಕವಾಗಿರುವುದು ಕಂಡುಬರುತ್ತದೆ, ಹಾಗೆಯೇ ಅವರಿಗೆ ರಾಷ್ಟ್ರ ಮತ್ತು ಧರ್ಮದ ಸ್ಥಿತಿಯನ್ನು ಸುಧಾರಿಸುವ ತಳಮಳ ಇರುವುದು ಕಂಡುಬರುತ್ತದೆ. ಅವರು ಕೇವಲ ತಮ್ಮ ಆಧ್ಯಾತ್ಮಿಕ ಉನ್ನತಿಯ ಬಗ್ಗೆ ಗಮನಹರಿಸದೆ ಇಡೀ ಸಮಾಜವನ್ನು ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಲ್ಲಿ ಸುದೃಢಗೊಳಿಸಲು ಪ್ರಯತ್ನಿಸಿದರು.
೪. ಸಂತರ ಜನ್ಮಕುಂಡಲಿಗಳಲ್ಲಿ ಒಳ್ಳೆಯ ಯೋಗವಿದ್ದರೂ ಅವರು ಮಾಡಿದ ಪ್ರಯತ್ನ ಹೆಚ್ಚು ಮಹತ್ವದ್ದಾಗಿದೆ
ಈ ಸಂತರ ಜನ್ಮಕುಂಡಲಿಗಳಲ್ಲಿ ಒಳ್ಳೆಯ ಯೋಗವಿದ್ದರೂ ಅವರು ಧ್ಯೇಯಪ್ರಾಪ್ತಿಗಾಗಿ ಪಟ್ಟುಹಿಡಿದು ಮಾಡಿದ ಪ್ರಯತ್ನ, ಸರ್ವಸ್ವದ ತ್ಯಾಗ, ರಾಷ್ಟ್ರವಿರೋಧಿ ಶಕ್ತಿಗಳೊಂದಿಗೆ ಮಾಡಿದ ಹೋರಾಟ, ನಿರಂತರ ಮಾಡಿದ ಲೋಕಕಲ್ಯಾಣದ ವಿಚಾರ ಅಂದರೆ, ಅವರ ಪ್ರಯತ್ನವು ಅತ್ಯಂತ ಮಹತ್ವದ್ದಾಗಿದೆ. ಈ ಸಂತರು ಅವರ ಜೀವನದಲ್ಲಿ ಹಾಗೂ ಕಲಿಕೆಯಲ್ಲಿ ಪ್ರಯತ್ನಗಳಿಗೆ ಮಾತ್ರ ಹೆಚ್ಚು ಮಹತ್ವ ನೀಡಿದ್ದಾರೆ. ಜನ್ಮಕುಂಡಲಿಗಳಲ್ಲಿನ ಗ್ರಹಯೋಗಕ್ಕನುಸಾರ ನಮ್ಮ ಜೀವನದಲ್ಲಿ ವಿಶಿಷ್ಟ ಪರಿಸ್ಥಿತಿ ಉದ್ಭವಿಸುತ್ತದೆ. ಅದರ ಮೇಲೆ ನಮ್ಮ ನಿಯಂತ್ರಣವಿರುವುದಿಲ್ಲ; ಆದರೆ ಆ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು, ಎಂಬುದು ನಮ್ಮ ಪ್ರಯತ್ನಗಳ ಮೇಲೆ ಅವಲಂಬಿಸಿರುತ್ತದೆ. ಈ ಪ್ರಯತ್ನಗಳೇ ವ್ಯಕ್ತಿಗೆ ಯಶಸ್ಸನ್ನು ಗಳಿಸಿಕೊಡುತ್ತವೆ.
೫. ಸಂತರ ಮಾಧ್ಯಮದಿಂದ ಈಶ್ವರನು ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡುವುದು
ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, ‘ಯಾವಾಗ ಅಧರ್ಮ ಶಕ್ತಿಶಾಲಿ ಆಗುತ್ತದೆಯೋ, ಆಗ ಧರ್ಮದ ಸ್ಥಾಪನೆಗಾಗಿ ನಾನು ಸ್ವತಃ ಅವತಾರ ತಾಳುತ್ತೇನೆ.’ ಮಾನವ ಜಾತಿಯ ಆಧ್ಯಾತ್ಮಿಕ ಮಟ್ಟ ಕುಸಿದಾಗ ಅದನ್ನು ಪುನಃ ಸುಧಾರಣೆ ಮಾಡಲು ಈಶ್ವರ ವಿವಿಧ ವಿಭೂತಿಗಳ ರೂಪದಲ್ಲಿ ಕಾರ್ಯ ಮಾಡುತ್ತಾನೆ. ಇತ್ತೀಚೆಗಿನ ೪೦೦ ವರ್ಷಗಳ ವಿಚಾರ ಮಾಡಿದರೆ, ೧೭ ನೇ ಶತಮಾನದಲ್ಲಿ ಸಮರ್ಥ ರಾಮದಾಸಸ್ವಾಮಿಗಳು, ೧೯ ನೇ ಶತಮಾನದಲ್ಲಿ ಸ್ವಾಮಿ ವಿವೇಕಾನಂದರು ಮತ್ತು ೨೦ ನೇ ಶತಮಾನದಲ್ಲಿ ಮಹರ್ಷಿ ಅರವಿಂದರ ಮಾಧ್ಯಮದಿಂದ ಈಶ್ವರ ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡಿದ್ದಾನೆ. ಈಗ ೨೧ ನೇ ಶತಮಾನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾಧ್ಯಮದಿಂದ ಈಶ್ವರನು ಈ ಕಾರ್ಯವನ್ನು ಮಾಡುತ್ತಿದ್ದಾನೆ. ಈ ಸಂತರಲ್ಲಿ ಈಶ್ವರನ ಉಚ್ಚಮಟ್ಟದ ಚೇತನಾಶಕ್ತಿ ವ್ಯಕ್ತವಾಗಿದೆ. ಆದ್ದರಿಂದ ಅವರಿಂದಾಗುವ ಕಾರ್ಯ ವ್ಯಕ್ತಿಯ ಮನಸ್ಸು ಮತ್ತು ಬುದ್ಧಿಯ ಆಚೆಗಿರುವ ‘ವಿಶ್ವಮನಸ್ಸು’ ಮತ್ತು ‘ವಿಶ್ವಬುದ್ಧಿ’ಯ ಸಹಾಯದಿಂದ ಆಗುತ್ತದೆ. ಆದ್ದರಿಂದ ಅದು ಚಿರಕಾಲ ಪ್ರಭಾವಿಯಾಗಿರುತ್ತದೆ.
ಸಮಾಜದ ಆಗಿನ ಪರಿಸ್ಥಿತಿ ಹಾಗೂ ಮಾನಸಿಕತೆಗನುಸಾರ ಅವತಾರಿ ಸಂತರ ಕಾರ್ಯ ಮಾಡುವ ಪದ್ಧತಿ, ಅವರ ಬೋಧನೆ, ತತ್ತ್ವಜ್ಞಾನ, ಸಾಧನಾಮಾರ್ಗ ಇತ್ಯಾದಿಗಳಲ್ಲಿ ವಿವಿಧತೆ ಕಂಡು ಬರುತ್ತದೆ; ಆದರೆ ಅವರ ಧ್ಯೇಯ ಮಾತ್ರ ಒಂದೇ ಆಗಿರುತ್ತದೆ. ಅದೆಂದರೆ, ಮನುಕುಲವನ್ನು ಅಜ್ಞಾನ, ಸಂಕುಚಿತತೆ ಹಾಗೂ ದುರ್ಬಲತೆಯಿಂದ ಹೊರಗೆ ತಂದು ಜ್ಞಾನ, ವ್ಯಾಪಕತೆ, ಸಾಮರ್ಥ್ಯ ಹಾಗೂ ಪ್ರೇಮದ ಮಾರ್ಗವನ್ನು ತೋರಿಸುವುದು ಮತ್ತು ಮನುಷ್ಯನಲ್ಲಿ ಅಡಗಿರುವ ಈಶ್ವರನ ದಿವ್ಯತ್ವವನ್ನು ಪ್ರಕಟಿಸುವುದು !’
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !