ಫೋಂಡಾ (ಗೋವಾ) – ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ 83ನೇ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ, ಮೇ 17 ರಿಂದ 19ರ ವರೆಗೆ ಗೋವಾದ ಫರ್ಮಾಗುಡಿಯಲ್ಲಿರುವ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನೆರವೇರಿತು. ಇದಕ್ಕೆ ಗೋವಾ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರಚಾರ ದೊರಕಿದೆ.
ಕನ್ನಡ ದೈನಿಕಗಳಾದ ‘ಸಂಯುಕ್ತ ಕರ್ನಾಟಕ’ ‘ಉದಯ ವಾಹಿನಿ’, ‘ಕರುನಾಡ ಎಕ್ಸ್‌ಪ್ರೆಸ್’, ಕೊಂಕಣಿ ದೈನಿಕ ‘ಭಾಂಗರಭುಂಯ’, ಹಾಗೂ ಆಂಗ್ಲ ದೈನಿಕ ‘ನವ ಹಿಂದ್ ಟೈಮ್ಸ್’ ಗಳಲ್ಲಿ ಹೆಚ್ಚಿನ ಪ್ರಚಾರ ನೀಡಲಾಗಿದೆ. ಈ ನಿಮಿತ್ತ ಸನಾತನ ಸಂಸ್ಥೆಯು ಈ ದೈನಿಕಗಳ ಸಂಪಾದಕೀಯ ಮಂಡಳಿಗಳಿಗೆ ಕೃತಜ್ಞತೆ ಸಲ್ಲಿಸಿದೆ.