ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ) – ಸಾಧಕರ ಹೃದಯ ಮಂದಿರದಲ್ಲಿ ನೆಲೆಸಿರುವ ಗುರುದೇವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಜನ್ಮೋತ್ಸವ ಎಲ್ಲರಿಗೂ ಒಂದು ಭಾವಪೂರ್ಣ ಕ್ಷಣವಾಗಿರುತ್ತದೆ. ಸಾಧಕರು ಈ ಸಂದರ್ಭದಲ್ಲಿ ವಿವಿಧ ಮಾಧ್ಯಮಗಳ ಮೂಲಕ ಗುರುದೇವರನ್ನು ಪ್ರಾರ್ಥಿಸುತ್ತಾರೆ. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಮೂರನೇ ದಿನ, ಅಂದರೆ ಮೇ 19 ರಂದು, ಸಾಧಕರು ಮತ್ತೊಮ್ಮೆ ಭಾವಪೂರ್ಣ ಕ್ಷಣಗಳಲ್ಲಿ ಮಿಂದೆದ್ದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ 83 ನೇ ಜನ್ಮೋತ್ಸವದ ನಿಮಿತ್ತ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡ್ಗಿಳ ಅವರು ಅವರಿಗೆ ಆರತಿ ಮಾಡಿದರು. ಈ ಸಂದರ್ಭದಲ್ಲಿ ಈರೋಡ್ (ತಮಿಳುನಾಡು) ದ ಪುರೋಹಿತ ಶ್ರೀ. ಅರುಣ ಕುಮಾರ ಗುರುಮೂರ್ತಿ ಮತ್ತು ಅವರ ಸಹೋದ್ಯೋಗಿಗಳು ವೇದ ಮಂತ್ರಗಳನ್ನು ಪಠಿಸಿದರು. ಈ ಸಂದರ್ಭದಲ್ಲಿ ಎಲ್ಲ ಸಾಧಕರ ಪರವಾಗಿ ಶ್ರೀಸತ್‌ಶಕ್ತಿ ಮತ್ತು ಶ್ರೀಚಿತ್‌ಶಕ್ತಿ ಅವರು ಗುರುದೇವರ ಚರಣಗಳಲ್ಲಿ ನಮಸ್ಕರಿಸಿದರು.
ಈ ವರ್ಷ ಸನಾತನ ಸಂಸ್ಥೆಯ ರಜತ ಮಹೋತ್ಸವ ವರ್ಷವಾಗಿದ್ದು, ವೈಶಾಖ ಕೃಷ್ಣ ಷಷ್ಠಿಯಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ 83 ನೇ ಜನ್ಮೋತ್ಸವವೂ ಇತ್ತು. ಈ ಶುಭ ಸಂಯೋಗದ ನಿಮಿತ್ತ ಸನಾತನ ಶಕ್ತಿಯ ಭವ್ಯ ದರ್ಶನವನ್ನು ಜಗತ್ತು ಕಂಡಿದೆ! ಈ ಮೂರು ದಿನಗಳ ಕಾಲ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ತೀವ್ರ ದೈಹಿಕ ತೊಂದರೆಯಿದ್ದರೂ ವಿವಿಧ ಸತ್ರಗಳಲ್ಲಿ ಉಪಸ್ಥಿತರಿದ್ದರು ಮತ್ತು ಇದರಿಂದ ಸಾಧಕರು, ಧರ್ಮಪ್ರೇಮಿಗಳು ಮತ್ತು ರಾಷ್ಟ್ರಪ್ರೇಮಿಗಳು ದಿವ್ಯ ಸತ್ಸಂಗವನ್ನು ಪಡೆದರು. ಇದರಿಂದ ಎಲ್ಲ ಸಾಧಕರೂ ಭಾವಾಶ್ರು ನೇತ್ರಗಳಿಂದ ಗುರುಚರಣದಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಗುರುಚರಣದಲ್ಲಿ ನೃತ್ಯ ಸೇವೆ
ನಂತರ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ವಿಭಾಗದಿಂದ ಗುರುಚರಣದಲ್ಲಿ ‘ಗುರುಚರಣೋಂ ಪರ್ ಶೀಶ್ ನಮಾವೂಂ’ ಹಾಡಿನ ಸಾಹಿತ್ಯಕ್ಕೆ ನೃತ್ಯ ಸೇವೆಯನ್ನು ಪ್ರಸ್ತುತಪಡಿಸಲಾಯಿತು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕು. ವೈಷ್ಣವಿ ಗುರವ, ಕು. ಬಾಂಧವ್ಯಾ ಶ್ರೇಷ್ಠಿ, ಕು. ನಿಧಿ ಗವಾರೆ, ಕು. ತೀರ್ಥಾ ದೇವ್ಘರೆ, ಕು. ಮೃಣಾಲಿನಿ ದೇವ್ಘರೆ, ಕು. ಸೋನಾಕ್ಷಿ ಚೋಪ್ದಾರ್, ಕು. ಅಪಾಲಾ ಔಂಧಕರ್, ಕು. ಶರ್ವರಿ ಕಾನಸ್ಕರ್, ಕು. ಅಂಜಲಿ ಕಾನಸ್ಕರ್ ಮತ್ತು ಕು. ವೈದೇಹಿ ಸಾವಂತ್ ಅವರು ಇದರಲ್ಲಿ ಭಾಗವಹಿಸಿದ್ದರು. ನೃತ್ಯ ವಿಭಾಗದ ಸಂಯೋಜಕಿ ಸೌ. ಸಾವಿತ್ರಿ ಇಚಲಕರಂಜಿಕರ್ ಅವರು ಈ ನೃತ್ಯವನ್ನು ನಿರ್ದೇಶಿಸಿದರು.
ಕೃತಜ್ಞತಾ ಗೀತೆ ಗಾಯನ
ಕೊನೆಯಲ್ಲಿ ‘ಕೃತಜ್ಞತಾ ಗೀತೆ’ಯನ್ನು ಪ್ರಸ್ತುತಪಡಿಸಲಾಯಿತು. ಸಾಧಕಿಯರಾದ ಸೌ. ಅಪೂರ್ವ ದೇಶಪಾಂಡೆ, ಸೌ. ಶರಣ್ಯಾ ದೇಸಾಯಿ, ಸುಶ್ರೀ ತೇಜಲ್ ಪಾತ್ರಿಕರ್ ಮತ್ತು ಸೌ. ಸೀಮಂತಿನಿ ಬೋರ್ಡೆ ಅವರು ಎಲ್ಲ ಸಾಧಕರ ಪರವಾಗಿ ಗೀತೆಯ ಮೂಲಕ ಗುರುಚರಣದಲ್ಲಿ ಕೃತಜ್ಞತೆ ವ್ಯಕ್ತಪಡಿಸಿದರು.
ಬ್ರಹ್ಮಾಂಡವ್ಯಾಪಿ ಕಾರ್ಯ ನಿರ್ವಹಿಸುವ ಋಷಿಗಳು ಸನಾತನಕ್ಕೆ ಮಾರ್ಗದರ್ಶನ ನೀಡುವುದು ನಮ್ಮ ದೊಡ್ಡ ಭಾಗ್ಯ!![]() ‘ವಿಶ್ವದ ಸೃಷ್ಟಿಯಿಂದ ಬ್ರಹ್ಮಾಂಡದ ಸಮತೋಲನವನ್ನು ಕಾಯ್ದುಕೊಳ್ಳುವುದು ಮತ್ತು ಭೂಮಿಯ ಮೇಲೆ ಧರ್ಮವನ್ನು ಉಳಿಸಿಕೊಳ್ಳುವುದು ಈ ಎರಡು ಮಹತ್ಕಾರ್ಯಗಳನ್ನು ಋಷಿಗಳು ಮಾಡುತ್ತಿದ್ದಾರೆ. ಈ ಕಾರ್ಯದ ವ್ಯಾಪಕತೆಯನ್ನು ನೋಡಿದಾಗ, ಒಟ್ಟಾರೆ ಬ್ರಹ್ಮಾಂಡ-ವ್ಯವಸ್ಥೆಯಲ್ಲಿ ಋಷಿಗಳ ಕಾರ್ಯವು ಅಲೌಕಿಕವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅಂತಹ ಬ್ರಹ್ಮಾಂಡವ್ಯಾಪಿ ಕಾರ್ಯ ಮಾಡುವ ಋಷಿಗಳು ಪ್ರಸ್ತುತ ಕಾಲದಲ್ಲಿ ಭೂಮಿಯ ಮೇಲಿನ ಸಣ್ಣ ಸನಾತನ ಸಂಸ್ಥೆಗೆ ನಾಡಿಪಟ್ಟಿಗಳ ಮೂಲಕ ಮಾರ್ಗದರ್ಶನ ನೀಡುತ್ತಿದ್ದಾರೆ. ನಮಗೆ ಇದಕ್ಕಿಂತ ದೊಡ್ಡ ಭಾಗ್ಯ ಬೇರೆ ಯಾವುದೂ ಇರಲು ಸಾಧ್ಯವಿಲ್ಲ. ಇಂದು ಸನಾತನ ಸಂಸ್ಥೆಯ ಹಿಂದೆ ಋಷಿ ಸಮೂಹವೂ ನಿಂತಿದೆ. ಅಂತಹ ಎಲ್ಲ ಋಷಿಗಳ ಚರಣಗಳಿಗೆ ಎಷ್ಟೇ ಕೃತಜ್ಞತೆ ವ್ಯಕ್ತಪಡಿಸಿದರೂ ಅದು ಕಡಿಮೆಯೇ!’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ |
ಮಹರ್ಷಿಗಳು, ಸಂತರು ಮತ್ತು ದೇವತೆಗಳ ಚರಣಗಳಲ್ಲಿ ಕೃತಜ್ಞತೆ!
ಮೇ 17 ರಿಂದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನಡೆಯುತ್ತಿದೆ. ಈ ಮಹೋತ್ಸವವು ಶ್ರೀಗುರುಗಳಿಗೆ ಅಪೇಕ್ಷಿತ ರೀತಿಯಲ್ಲಿ ನಡೆಯಲು ಮಹರ್ಷಿಗಳು, ಸಂತರು ಮತ್ತು ದೇವತೆಗಳ ಕೃಪೆಯಿಂದ ಮಾತ್ರ ಸಾಧ್ಯವಾಗಿದೆ. ಮಹೋತ್ಸವದ ಆಯೋಜನೆಯಲ್ಲಿ ವಿವಿಧ ರೀತಿಯ ಅಡೆತಡೆಗಳು ಬಂದರೂ, ಮಹರ್ಷಿಗಳು, ಸಂತರು ಮತ್ತು ದೇವತೆಗಳ ಕೃಪೆಯಿಂದ ಅವುಗಳನ್ನು ನಿವಾರಿಸಲು ಸಾಧ್ಯವಾಯಿತು ಮತ್ತು ಕಾರ್ಯವು ಪೂರ್ಣಗೊಳ್ಳುತ್ತಿದೆ. ಇದರಿಂದಲೇ ಸಾಧಕರಿಗೆ ಶ್ರೀಗುರುಗಳ ಮಹೋತ್ಸವದಲ್ಲಿ ಚೈತನ್ಯ ಮತ್ತು ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತಿದೆ. ಮಹರ್ಷಿಗಳು, ಸಂತರು ಮತ್ತು ದೇವತೆಗಳ ಕೃಪೆಯಿಂದಲೇ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ಅವರ ಚರಣಗಳಿಗೆ ಅನಂತ ಕೋಟಿ ಕೃತಜ್ಞತೆಗಳು!
– ಎಲ್ಲ ಸಾಧಕರು