ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ: ಸನಾತನ ಧರ್ಮಕ್ಕಾಗಿ ಕಾರ್ಯನಿರ್ವಹಿಸುವವರಿಗೆ ಉತ್ತಮ ಆರೋಗ್ಯಕ್ಕಾಗಿ ಮಹಾಧನ್ವಂತರಿ ಯಾಗ!

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಮಹಾಧನ್ವಂತರಿ ಯಾಗ!

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ನಗರ, ಫೊಂಡಾ, ಮೇ 19 (ವರದಿ) – ಮುಂಬರುವ ಭಯಾನಕ ಕಾಲದಲ್ಲಿ ಎಲ್ಲ ಸಾಧಕರ ಆರೋಗ್ಯವನ್ನು ಕಾಪಾಡಲು ಮತ್ತು ಸನಾತನ ರಾಷ್ಟ್ರದ ಸ್ಥಾಪನೆಯನ್ನು ಶೀಘ್ರಗೊಳಿಸಲು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಮಹಾಧನ್ವಂತರಿ ಯಾಗವನ್ನು ನಡೆಸಲಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಈ ಯಾಗದ ಪ್ರಯೋಜನವನ್ನು ದೇಶ-ವಿದೇಶಗಳಿಂದ ಬಂದಿದ್ದ ಸಾವಿರಾರು ಸಾಧಕರು ಮತ್ತು ಧರ್ಮಾಭಿಮಾನಿಗಳು ಪಡೆದರು.

ಮಹಾಧನ್ವಂತರಿ ಯಜ್ಞದ ಆರಂಭದಲ್ಲಿ ಶಂಖನಾದ ಮಾಡಲಾಯಿತು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡ್ಗಿಳ ಅವರ ಹಸ್ತದಿಂದ ದೀಪ ಪ್ರಜ್ವಲಿಸುವ ಮೂಲಕ ಯಾಗವನ್ನು ಪ್ರಾರಂಭಿಸಿದರು. ಸಾಮೂಹಿಕವಾಗಿ ಶ್ರೀ ಗಣೇಶನ ಶ್ಲೋಕವನ್ನು ಪಠಿಸಲಾಯಿತು. ನಂತರ ಪುಣ್ಯಾಹವಾಚನ, ಮಹಾಗಣಪತಿ ಪೂಜೆ, ನವಗ್ರಹ ಪೂಜೆ ಮಾಡಿ ಶ್ರೀವಿಷ್ಣುಸಹಸ್ರನಾಮ ಪಾರಾಯಣ ಮಾಡಲಾಯಿತು. ಈ ಯಜ್ಞದ ಯಜಮಾನತ್ವವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ಅವರ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡ್ಗಿಳ ವಹಿಸಿದ್ದರು.

64 ದಂಪತಿಗಳು ಈ ಯಜ್ಞದ ಸಂಕಲ್ಪ ಮಾಡಿದರು. ಯಜ್ಞದ ಆರಂಭದಲ್ಲಿ ಮಹಾಸಂಕಲ್ಪ ಮಾಡಲಾಯಿತು. ಈ ಸಂದರ್ಭದಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕಾಗಿ ಜಮಾಯಿಸಿದ್ದ 25 ಸಾವಿರ ಸಾಧಕರು ಮತ್ತು ಹಿಂದೂ ಕಾರ್ಯಕರ್ತರು ಮಹಾಸಂಕಲ್ಪವನ್ನು ಪಠಿಸಿದರು. ತೀರ್ಥರೂಪ ಡಾ. (ಸೌ.) ಕುಂದಾ ಜಯಂತ ಆಠವಲೆ ಅವರ ವಂದನೀಯ ಉಪಸ್ಥಿತಿಯೂ ಈ ಯಜ್ಞದಲ್ಲಿತ್ತು.

1. ಅಷ್ಟದಳ ಕಮಲದ ಆಕಾರದ ವೃತ್ತಾಕಾರದ ಯಜ್ಞಕುಂಡದಲ್ಲಿ ಈ ಮಹಾಧನ್ವಂತರಿ ದೇವತೆಗಾಗಿ ವಿವಿಧ ಆಯುರ್ವೇದ ಸಸ್ಯಗಳ ಹವನವನ್ನು ಮಾಡಲಾಯಿತು. ಈ ಆಹುತಿಯು ಮಹಾಧನ್ವಂತರಿ ದೇವತೆಗೆ ತಲುಪಲಿ ಎಂದು ಪ್ರಾರ್ಥಿಸಲಾಯಿತು. ಮಹಾಪೂರ್ಣಾಹುತಿಯೊಂದಿಗೆ ಯಾಗವು ಮುಕ್ತಾಯಗೊಂಡಿತು.

2. ತಮಿಳುನಾಡಿನ ಈರೋಡ್‌ನ ಗುರುಮೂರ್ತಿ ಶಿವಾಚಾರ್ಯ ಮತ್ತು ಶಿವಾಗಮ ವಿದ್ಯಾ ನಿಧಿ ಆಗಮಾಚಾರ್ಯ ಶ್ರೀ. ಅರುಣ ಕುಮಾರ್ ಗುರುಮೂರ್ತಿ ಅವರು ಈ ಯಾಗದ ಪೌರೋಹಿತ್ಯವನ್ನು ನಡೆಸಿದರು.

ಪ್ರಾರ್ಥನೆ!

‘ಮುಂಬರುವ ದಿನಗಳಲ್ಲಿ ಸನಾತನ ಧರ್ಮಕ್ಕಾಗಿ ಕಾರ್ಯನಿರ್ವಹಿಸುವ ಎಲ್ಲರಿಗೂ ಉತ್ತಮ ಆರೋಗ್ಯ ದೊರೆಯಲಿ, ಸನಾತನ ಧರ್ಮಕ್ಕಾಗಿ ವಿವಿಧ ಸ್ಥಳಗಳಲ್ಲಿ, ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲರನ್ನೂ ಭಗವಂತನು ರಕ್ಷಿಸಲಿ ಮತ್ತು ಸನಾತನ ರಾಷ್ಟ್ರದ ಸ್ಥಾಪನೆಗೆ ಸಹಾಯ ಮಾಡಲಿ’ ಎಂದು ಯಜ್ಞವನ್ನು ಪ್ರಾರಂಭಿಸುವ ಮೊದಲು ಪ್ರಾರ್ಥಿಸಲಾಯಿತು.

ಯಜ್ಞ ಸ್ಥಳದಲ್ಲಿ ವಿಷ್ಣುರೂಪದಲ್ಲಿ ಪೂಜಿಸಿದ ಮಹಾಧನ್ವಂತರಿ ಪೀಠ

ಯಜ್ಞ ಸ್ಥಳದಲ್ಲಿ ಶ್ರೀ ಮಹಾಧನ್ವಂತರಿ ದೇವತೆಗಾಗಿ ಸುಂದರವಾದ ಪೀಠವನ್ನು ಸಿದ್ಧಪಡಿಸಲಾಗಿತ್ತು. ಅಲ್ಲಿ ಶಂಖ, ಚಕ್ರಗಳನ್ನೂ ಪೂಜಿಸಲಾಯಿತು. ಮಹಾಧನ್ವಂತರಿ ದೇವತೆ ಶ್ರೀವಿಷ್ಣುರೂಪವಾಗಿದೆ. ಮಹಾಧನ್ವಂತರಿ ದೇವತೆ ಸಮುದ್ರ ಮಂಥನದಿಂದ ಪ್ರಕಟವಾಗಿದ್ದಾಳೆ. ಆದ್ದರಿಂದ ಶ್ರೀ ವಿಷ್ಣುರೂಪ ಮಹಾಧನ್ವಂತರಿ ಪೂಜೆಯನ್ನು ಯಜ್ಞ ಸ್ಥಳದಲ್ಲಿ ಮಾಡಲಾಯಿತು.

ಗಣ್ಯರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಹಸ್ತದಿಂದ ಪ್ರಸಾದ!

ಕೇಂದ್ರ ಇಂಧನ ರಾಜ್ಯ ಸಚಿವ ಶ್ರೀಪಾದ ನಾಯಕ್, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಪತ್ನಿ ಸೌ. ಸುಲಕ್ಷಣಾ ಸಾವಂತ್, ಗೋವಾದ ಜಲಸಂಪನ್ಮೂಲ ಸಚಿವ ಶ್ರೀ. ಸುಭಾಷ ಶಿರೋಡ್ಕರ್, ಗೋವಾದ ವಿದ್ಯುತ್ ಸಚಿವ ಶ್ರೀ. ಸುದಿನ ಢವಳೀಕರ್ ಅವರ ಪತ್ನಿ ಮತ್ತು ಸನಾತನದ ಸಂತ ಪೂ. (ಸೌ.) ಜ್ಯೋತಿ ಢವಳೀಕರ್, ಮಾಜಿ ಶಾಸಕ ಶ್ರೀ. ದೀಪಕ್ ಢವಳೀಕರ್ ಅವರ ಪತ್ನಿ ಮತ್ತು ಸನಾತನದ ಸಾಧಕಿ ಸೌ. ಲತಾ ಢವಳೀಕರ್ ಅವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ಯಜ್ಞದ ಪ್ರಸಾದವನ್ನು ನೀಡಿದರು. ಯಜ್ಞದಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಈ ಸಂದರ್ಭದಲ್ಲಿ ಪ್ರಸಾದವನ್ನು ನೀಡಲಾಯಿತು.