ಅರುಣಾಚಲ ಪ್ರದೇಶದಲ್ಲಿ ಊರುಗಳ ಹೆಸರುಗಳನ್ನು ಬದಲಾಯಿಸುವುದರಿಂದ ನೈಜತೆ ಬದಲಾಗುವುದಿಲ್ಲ!

ಚೀನಾದ ಕಿವಿ ಹಿಂಡಿದ ಭಾರತ !

ನವದೆಹಲಿ – ಚೀನಾವು ಭಾರತೀಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಕೆಲವು ಸ್ಥಳಗಳ ಹೆಸರುಗಳನ್ನು ಬದಲಾಯಿಸುವ ವ್ಯರ್ಥ ಮತ್ತು ಹಾಸ್ಯಾಸ್ಪದ ಪ್ರಯತ್ನ ಮಾಡುತ್ತಿದೆ, ಎಂದು ನಮಗೆ ತಿಳಿದುಬಂದಿದೆ. ನಾವು ನಮ್ಮ ಸೈದ್ಧಾಂತಿಕ ನಿಲುವಿಗೆ ನಿಷ್ಠರಾಗಿದ್ದು ಹೆಸರನ್ನು ಬದಲಾಯಿಸುವ ಪ್ರಯತ್ನಗಳನ್ನು ಬಲವಾಗಿ ಖಂಡಿಸುತ್ತೇವೆ. ಹೆಸರುಗಳನ್ನು ಬದಲಾಯಿಸಿದರೆ, ವಾಸ್ತವ ಬದಲಾಗುವುದಿಲ್ಲ. ಅರುಣಾಚಲ ಪ್ರದೇಶ ಇದು ಭಾರತದ ಅವಿಭಾಜ್ಯ ಅಂಗವಾಗಿದೆ, ಎಂದು ವಿದೇಶಾಂಗ ಸಚಿವಾಲಯ ಉತ್ತರಿಸಿದೆ. (ಹೇಗೆ ಪಾಕಿಸ್ತಾನದ ವಿರುದ್ಧ ‘ಆಪರೇಷನ್ ಸಿಂದೂರ’ ನಡೆಸಿದೆವೊ, ಅದೇ ರೀತಿ ಕಪಟ ಚೀನಾ ಮಂಡಿಯೂರುವಂತೆ ಮಾಡಲು ಮತ್ತೊಮ್ಮೆ ಇಂತಹ ಕಾರ್ಯಾಚರಣೆ ನಡೆಸುವುದು ಅನಿವಾರ್ಯವಾಗಿದೆ ! – ಸಂಪಾದಕರು)