ಭಾರತದ ಕಾರ್ಯಾಚರಣೆಯಲ್ಲಿ ಮಸೂದ್ ಅಜರ್‌ನ 14 ಸಂಬಂಧಿಕರು ಸಾವನ್ನಪ್ಪಿದ್ದಾರೆ!
ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತದ ‘ಆಪರೇಷನ್ ಸಿಂದೂರ’ದಿಂದಾಗಿ ಜೈಶ್-ಎ-ಮೊಹಮ್ಮದ್ ಈ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಅವನ ಕುಟುಂಬಸ್ಥರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಸರಕಾರ ಆತನಿಗೆ ಪರಿಹಾರ ಎಂದು ಸರಕಾರಿ ನಿಧಿಯಿಂದ ಒಟ್ಟು 14 ಕೋಟಿ ರೂಪಾಯಿಗಳನ್ನು ನೀಡಲಿದೆ. ಮಸೂದನ ಕುಟುಂಬದಲ್ಲಿನ 14 ಜನರು ಸಾವನ್ನಪ್ಪಿದ್ದಾರೆ. ಪ್ರತಿಯೊಬ್ಬ ಮೃತ ವ್ಯಕ್ತಿಗೆ 1 ಕೋಟಿ ರೂಪಾಯಿ ನೀಡಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಕಾರ್ಯಾಲಯವು ಪೂರ್ಣ ಪರಿಹಾರವನ್ನು ಘೋಷಿಸಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್‌ಪುರದಲ್ಲಿ ಜೈಶ್ ನ ಮುಖ್ಯ ಕಛೇರಿ ಇತ್ತು. ಅದನ್ನು ಭಾರತವು ಧ್ವಂಸಗೊಳಿಸಿತ್ತು. ಇಲ್ಲಿಯೇ ಮಸೂದ್ ನ ಸಂಬಂಧಿಕರು ವಾಸವಾಗಿದ್ದರು.
ಸಂಪಾದಕೀಯ ನಿಲುವುಪಾಕಿಸ್ತಾನ ಭಯೋತ್ಪಾದಕರನ್ನು ಪೋಷಿಸುತ್ತಿದೆ ಮತ್ತು ಕೊಲ್ಲಲ್ಪಟ್ಟ ನಂತರವೂ ಅವರ ಸಂಬಂಧಿಕರಿಗೆ ಪರಿಹಾರವನ್ನು ನೀಡುತ್ತದೆ, ಇದು ಇದರಿಂದ ಬಹಿರಂಗವಾಗಿದೆ. ಹೀಗೆ ಇರುವಾಗ ಅಂತರರಾಷ್ಟ್ರೀಯ ಹಣಕಾಸು ನಿಧಿ ಪಾಕಿಸ್ತಾನಕ್ಕೆ 20 ಸಾವಿರ ಕೋಟಿ ರೂಪಾಯಿ ಸಹಾಯ ನೀಡುತ್ತದೆ, ಇದು ಆಶ್ಚರ್ಯಕರವಾಗಿದೆ. ಭಾರತವು ಇದರ ಬಗ್ಗೆ ಅಂತರರಾಷ್ಟ್ರೀಯ ಹಣಕಾಸು ನಿಧಿಗೆ ಉತ್ತರಿಸುವಂತೆ ಕೇಳಬೇಕು! |