Indian Origin Canada Foreign Minister : ಕೆನಡಾದ ವಿದೇಶಾಂಗ ಸಚಿವರಾಗಿ ಅನಿತಾ ಆನಂದ ಇವರ ನೇಮಕ: ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕಾರ!

ಒಟ್ಟಾವಾ – ಕೆನಡಾದ ಪ್ರಧಾನಮಂತ್ರಿ ಮಾರ್ಕ್ ಕಾರ್ನಿ ಅವರು ಇತ್ತೀಚೆಗೆ ನೂತನ ಸಚಿವ ಸಂಪುಟವನ್ನು ಘೋಷಿಸಿದ್ದಾರೆ. ಈ ಸಂಪುಟದಲ್ಲಿ 28 ಮಂದಿ ಇದ್ದಾರೆ. ಭಾರತೀಯ ಮೂಲದ ಅನಿತಾ ಆನಂದ ಅವರನ್ನು ವಿದೇಶಾಂಗ ಸಚಿವರಾಗಿ ನೇಮಿಸಲಾಗಿದೆ. ಕೆನಡಾದ ಲಿಬರಲ್ ಪಕ್ಷದ ಸದಸ್ಯೆಯಾದ ಅನಿತಾ ಆನಂದ ಅವರು ಹಿಂದೂ ಧರ್ಮಗ್ರಂಥವಾದ ಭಗವದ್ಗೀತೆಯ ಮೇಲೆ ಕೈಯಿಟ್ಟು ಸಚಿವೆ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಿದರು.

ಭಾರತದೊಂದಿಗೆ ಸಂಬಂಧ ಸುಧಾರಿಸಲು ಕಾರ್ಯನಿರ್ವಹಿಸುವೆ! – ಅನಿತಾ ಆನಂದ

 ಮಾಜಿ ಪ್ರಧಾನಮಂತ್ರಿ ಟ್ರುಡೊ ಅವರ ಅವಧಿಯಲ್ಲಿ ಬಹುತೇಕ ಹದಗೆಟ್ಟಿದ್ದ ಭಾರತದೊಂದಿಗಿನ ಸಂಬಂಧವನ್ನು ಪುನಃ ಸ್ಥಾಪಿಸುವುದು ವಿದೇಶಾಂಗ ಸಚಿವೆಯಾಗಿ ನನ್ನ ಗುರಿಯಾಗಿದೆ ಎಂದು ಅನಿತಾ ಆನಂದ ಹೇಳಿದರು.

ಯಾರು ಅನಿತಾ ಆನಂದ?

ಈ ಹಿಂದೆ ಕೆನಡಾದ ರಕ್ಷಣಾ ಸಚಿವೆ ಮತ್ತು ಸಾರಿಗೆ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದ ಅನಿತಾ ಆನಂದ ಅವರು 20 ಮೇ 1967 ರಂದು ಕೆನಡಾದ ಕೆಂಟವಿಲ್ಲೆಯಲ್ಲಿ ವಲಸೆ ಬಂದ ವೈದ್ಯಕೀಯ ಕುಟುಂಬದಲ್ಲಿ ಜನಿಸಿದರು. ಅವರ ಪೋಷಕರು 1960 ರ ದಶಕದ ಆರಂಭದಲ್ಲಿ ಭಾರತದಿಂದ ಕೆನಡಾಕ್ಕೆ ವಲಸೆ ಹೋದರು. ಅವರ ತಾಯಿ ಪಂಜಾಬಿನವರಾಗಿದ್ದರೆ, ತಂದೆ ತಮಿಳುನಾಡಿನವರಾಗಿದ್ದರು. 2019 ರಲ್ಲಿ ಅವರು ಕೆನಡಾದ ಫೆಡರಲ್ ಸಚಿವ ಸಂಪುಟವನ್ನು ಸೇರಿದ ಮೊದಲ ಹಿಂದೂ ಮಹಿಳೆಯಾಗಿದ್ದರು.