ಅಧರ್ಮದ ನಾಶ ಮತ್ತು ಧರ್ಮದ ಸ್ಥಾಪನೆಗಾಗಿ ಶಸ್ತ್ರ ಎತ್ತುವುದು ನಮ್ಮ ಪರಂಪರೆ! – ಪ್ರಧಾನಮಂತ್ರಿ ಮೋದಿ

ಆದಂಪುರ (ಪಂಜಾಬ್) ವಾಯುನೆಲೆಗೆ ಭೇಟಿ ನೀಡಿದ ಪ್ರಧಾನಮಂತ್ರಿ ಮೋದಿ

ಆದಂಪುರ (ಪಂಜಾಬ್) – ಅಧರ್ಮದ ನಾಶ ಮತ್ತು ಧರ್ಮದ ಸ್ಥಾಪನೆಗಾಗಿ ಶಸ್ತ್ರ ಎತ್ತುವುದು ನಮ್ಮ ಪರಂಪರೆಯಾಗಿದೆ. ನಮ್ಮ ಹೆಣ್ಣುಮಕ್ಕಳು, ಸಹೋದರಿಯರ ಕುಂಕುಮ ಅಳಿಸಿದಾಗ, ಭಯೋತ್ಪಾದಕರ ಹೆಡೆಯನ್ನು ಅವರ ಮನೆಗೆ ನುಗ್ಗಿ ತುಳಿದೆವು. ಅವರು ಹೆದರಿ ಅಡಗಿಕೊಂಡಿದ್ದರು; ಆದರೆ ಅವರು ಯಾರಿಗೆ ಸವಾಲು ಹಾಕಿದರು, ಅದು ಹಿಂದೂ ಸೇನೆ ಎಂಬುದನ್ನು ಮರೆತಿದ್ದರು. ನಾವು ಭಯೋತ್ಪಾದಕರ ರೆಕ್ಕೆಗಳನ್ನು ಕತ್ತರಿಸಿದ್ದೇವೆ.

ಭಯೋತ್ಪಾದಕರನ್ನು ಅವರ ಮನೆಗೆ ನುಗ್ಗಿ ಕೊಂದಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಅವರು ಇಲ್ಲಿನ ವಾಯುನೆಲೆಗೆ ಭೇಟಿ ನೀಡಿದಾಗ ಸೈನಿಕರಿಗೆ ಮಾರ್ಗದರ್ಶನ ನೀಡುವಾಗ ಮಾತನಾಡಿದರು. ಈ ವಾಯುನೆಲೆಯ ಮೇಲೆ ಡ್ರೋನ್ ದಾಳಿ ನಡೆಸಿ ‘ಎಸ್-400’ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಭಾರತ ಈ ಹೇಳಿಕೆಯನ್ನು ತಿರಸ್ಕರಿಸಿತ್ತು. ಪಾಕಿಸ್ತಾನಕ್ಕೆ ಇದನ್ನೇ ತೋರಿಸಲು ಪ್ರಧಾನಮಂತ್ರಿ ಮೋದಿ ಈ ನೆಲೆಗೆ ಭೇಟಿ ನೀಡಿ, ಈ ನೆಲೆಗೆ ಪಾಕಿಸ್ತಾನ ಯಾವುದೇ ಹಾನಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿದರು. ಪ್ರಧಾನಮಂತ್ರಿ ಮೋದಿ ಈ ಸಂದರ್ಭದಲ್ಲಿ ಸೈನಿಕರನ್ನು ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಿದರು.

ಪ್ರಧಾನಮಂತ್ರಿ ಮೋದಿಯವರು ಮಾತು ಮುಂದುವರೆಸಿ,

1. ಭಾರತವು ಭಗವಾನ್ ಬುದ್ಧನ ಭೂಮಿ, ಹಾಗೆಯೇ ಗುರು ಗೋವಿಂದ್ ಸಿಂಗ್ ಅವರ ಭೂಮಿಯಾಗಿದೆ. ಭಾರತದ ಕಡೆ ಕೆಂಗಣ್ಣಿನಿಂದ ನೋಡಿದರೆ, ಅದರ ವಿನಾಶ ಖಚಿತ.

2. ಭಾರತೀಯ ಸೈನ್ಯವು ಪಾಕಿಸ್ತಾನಿ ಸೈನ್ಯಕ್ಕೆ ಮಣ್ಣು ಮುಕ್ಕಿಸಿದೆ. ಭಾರತೀಯ ಸೈನಿಕರು ಹೊಸ ಪೀಳಿಗೆಗೆ ಹೊಸ ಪ್ರೇರಣೆಯಾಗಿದ್ದೀರಿ. ಸೈನಿಕರೇ, ನಿಮ್ಮ ಪರಾಕ್ರಮದಿಂದ ಇಂದು ‘ಆಪರೇಷನ್ ಸಿಂದೂರ್’ನ ಧ್ವನಿ ಪ್ರತಿಯೊಂದು ಕಿವಿಯಲ್ಲೂ ಮೊಳಗುತ್ತಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಪ್ರತಿಯೊಬ್ಬ ಭಾರತೀಯನು ನಿಮ್ಮ ಜೊತೆಗಿದ್ದನು. ಪ್ರತಿಯೊಬ್ಬ ಭಾರತೀಯನ ಪ್ರಾರ್ಥನೆ ನಿಮ್ಮ ಜೊತೆಗಿತ್ತು. ಇಂದು ಪ್ರತಿಯೊಬ್ಬ ನಾಗರಿಕನು ಸೈನಿಕರು ಮತ್ತು ಅವರ ಕುಟುಂಬಕ್ಕೆ ಕೃತಜ್ಞನಾಗಿದ್ದಾನೆ, ಅವರ ಋಣಿಯಾಗಿದ್ದಾನೆ.

3. ‘ಆಪರೇಷನ್ ಸಿಂದೂರ್’ ಸಾಮಾನ್ಯ ಸೇನಾ ಕಾರ್ಯಾಚರಣೆಯಲ್ಲ. ಇದು ಭಾರತದ ನೀತಿ, ಶುದ್ಧ ಉದ್ದೇಶ ಮತ್ತು ನಿರ್ಣಾಯಕ ಸಾಮರ್ಥ್ಯದ ತ್ರಿವೇಣಿ ಸಂಗಮವಾಗಿದೆ.