S-500 Air Defense System : ಭಾರತದ ಬಳಿ ಈಗ ‘ಎಸ್-500’ ವಾಯು ರಕ್ಷಣಾ ವ್ಯವಸ್ಥೆ: ‘ಎಸ್-400’ ಗಿಂತ ಹೆಚ್ಚು ಅಪಾಯಕಾರಿ!

ನವದೆಹಲಿ – ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಸಂದರ್ಭದಲ್ಲಿ, ಭಾರತದ ‘ಎಸ್-400’ ವಾಯು ರಕ್ಷಣಾ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಪಾಕಿಸ್ತಾನದಿಂದ ಬರುತ್ತಿದ್ದ ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಭಾರತವು ಗಾಳಿಯಲ್ಲಿಯೇ ನಾಶಪಡಿಸಿದೆ. ಪಾಕಿಸ್ತಾನದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅದು ಭಾರತದ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ‘ಎಸ್ -400’ ನ ಯಶಸ್ಸನ್ನು ನೋಡಿ, ರಷ್ಯಾವು ಈಗ ಭಾರತಕ್ಕೆ ‘ಎಸ್-500’ ವಾಯು ರಕ್ಷಣಾ ವ್ಯವಸ್ಥೆಯನ್ನು ನೀಡಿದೆ. ‘ಎಸ್-500’ ವಾಯು ರಕ್ಷಣಾ ವ್ಯವಸ್ಥೆಯು ‘ಎಸ್-400’ ಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಅಪಾಯಕಾರಿ ಎಂದು ಹೇಳಲಾಗುತ್ತದೆ.

‘ಎಸ್-500’ ವಾಯು ರಕ್ಷಣಾ ವ್ಯವಸ್ಥೆಯು ಹಲವು ಹಂತಗಳನ್ನು ಹೊಂದಿರುವುದರಿಂದ, ಅದು ಒಂದೇ ಸಮಯದಲ್ಲಿ ಅನೇಕ ಗುರಿಗಳನ್ನು ಭೇದಿಸಬಹುದು. ಇದು ಶತ್ರುಗಳ ಯುದ್ಧ ವಿಮಾನಗಳು, ಕ್ರೂಸ್ ಕ್ಷಿಪಣಿಗಳು, ಹೈಪರ್‌ಸಾನಿಕ್ ಕ್ಷಿಪಣಿಗಳು ಹಾಗೆಯೆ ಭೂಮಿಯ ಕೆಳ ಕಕ್ಷೆಯಲ್ಲಿ ಇರುವ ಅವರ ಬೇಹುಗಾರಿಕೆ ಉಪಗ್ರಹಗಳನ್ನು ಹೊಡೆದುರುಳಿಸಬಹುದು ಎನ್ನಲಾಗಿದೆ.