Russian Minister Advises : ಭಾರತ ಮತ್ತು ಪಾಕಿಸ್ತಾನಗಳು ತಾಳ್ಮೆಯಿಂದ ವರ್ತಿಸಬೇಕು!

ರಷ್ಯಾದ ಉಪ ವಿದೇಶಾಂಗ ಸಚಿವರ ಸಲಹೆ

ರಷ್ಯಾದ ಉಪ ವಿದೇಶಾಂಗ ಸಚಿವ ಆಂಡ್ರೇ ರುಡೆಂಕೊ

ಮಾಸ್ಕೋ (ರಷ್ಯಾ) – ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ನಂತರ ರಷ್ಯಾದ ಉಪ ವಿದೇಶಾಂಗ ಸಚಿವ ಆಂಡ್ರೇ ರುಡೆಂಕೊ ಅವರು ರಷ್ಯಾದಲ್ಲಿರುವ ಭಾರತೀಯ ರಾಯಭಾರಿಯನ್ನು ಭೇಟಿಯಾದರು. ರಷ್ಯಾವು ಭಾರತ ಸೇರಿದಂತೆ ಜಾಗತಿಕ ಭಯೋತ್ಪಾದನೆಯ ಬೆದರಿಕೆಗೆ ಸೂಕ್ತವಾಗಿ ಪ್ರತಿಕ್ರಿಯಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಘೋಷಿಸಿತ್ತು.

ಭಾರತೀಯ ರಾಯಭಾರಿ ವಿನಯ ಕುಮಾರ್ ಅವರು ರಷ್ಯಾದ ವಿದೇಶಾಂಗ ಸಚಿವರಿಗೆ ಇತ್ತೀಚಿನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದರು. ರಷ್ಯಾದ ಈ ಕ್ರಮದಿಂದಾಗಿ, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಕೂಡ ರಷ್ಯಾದ ಉಪ ವಿದೇಶಾಂಗ ಸಚಿವರನ್ನು ಭೇಟಿ ಮಾಡಲು ರಾಯಭಾರಿಯನ್ನು ಕಳುಹಿಸಿದರು.  ರಷ್ಯಾದ ಉಪ ವಿದೇಶಾಂಗ ಸಚಿವರ ಮನವಿಯ ಪ್ರಕಾರ, ಎರಡೂ ಕಡೆಯವರು ತಾಳ್ಮೆಯಿಂದ ಇರಬೇಕೆಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ರಷ್ಯಾ ಉಕ್ರೇನ್‌ ಜೊತೆಗೆ ವರ್ತಿಸಿದಂತೆಯೇ, ಭಾರತ ಪಾಕಿಸ್ತಾನದ ಜೊತೆಗೆ ವರ್ತಿಸಲಿದೆ, ಇದನ್ನು ರಷ್ಯಾ ಗಮನದಲ್ಲಿಡಬೇಕು!