ಉತ್ತರ ಪ್ರದೇಶದ ವಿಧಾನಸಭಾ ಪರಿಸರದಲ್ಲಿ ಪಾನ್ ಮಸಾಲಾ ಮತ್ತು ಗುಟ್ಖಾ ನಿಷೇಧ!

ಪಾನ್ ಮಸಾಲಾ ತಿನ್ನುವಾಗ ಸಿಕ್ಕಿಬಿದ್ದವರಿಗೆ 1 ಸಾವಿರ ರೂಪಾಯಿ ದಂಡ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ವಿಧಾನಸಭೆಯ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಶಾಸಕರೊಬ್ಬರು ಸಭಾಂಗಣದಲ್ಲಿ ಪಾನ್ ಮಸಾಲ ತಿಂದು ಉಗುಳಿದ್ದರು. ಈ ಪ್ರಕರಣದಲ್ಲಿ ವಿಧಾನಸಭಾಧ್ಯಕ್ಷ ಸತೀಶ ಮಹಾನ ಅವರು ಎಲ್ಲಾ ಶಾಸಕರಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಉಗುಳಿಗೆ ಸಂಬಂಧಿಸಿದ ಶಾಸಕರನ್ನೂ ಅವರು ಕೊಠಡಿಗೆ ಕರೆಸಿದ್ದರು. ಈ ಘಟನೆಯ ನಂತರ ವಿಧಾನಸಭೆಯು ಪಾನ್ ಮಸಾಲಾ ಮತ್ತು ಗುಟ್ಖಾ ಉಪಯೋಗಿಸುವುದರ ಮೇಲೆ ಸಂಪೂರ್ಣವಾಗಿ ನಿಷೇಧಿಸಿದೆ. ಹಾಗೆಯೇ ವಿಧಾನಸೌಧದ ಆವರಣದಲ್ಲಿ ಇದನ್ನು ತಿನ್ನುವಾಗ ಸಿಕ್ಕಿಬಿದ್ದರೆ 1000 ರೂಪಾಯಿ ದಂಡ ವಿಧಿಸಲಾಗುವುದು, ಎಂದು ಘೋಷಣೆ ಮಾಡಲಾಗಿದೆ.

ಸಂಪಾದಕೀಯ ನಿಲುವು

ಜನರನ್ನು ವಿಶೇಷವಾಗಿ ಯುವ ಪೀಳಿಗೆಯನ್ನು ವ್ಯಸನಿಗಳನ್ನಾಗಿ ಮಾಡುವ ಇಂತಹ ವಸ್ತುಗಳ ಉತ್ಪಾದನೆಗಳ ಮೇಲೆಯೇ ಸರಕಾರ ಏಕೆ ನಿಷೇಧಿಸುವುದಿಲ್ಲ?