ಲಂಡನ್ (ಬ್ರಿಟನ್) – ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ್ ಸಧ್ಯ ಬ್ರಿಟನ್‌ನ ಅಧಿಕೃತ ಭೇಟಿಯಲ್ಲಿದ್ದಾರೆ. ಅವರು ಬ್ರಿಟನ್‌ನ ಪ್ರಧಾನಮಂತ್ರಿ ಕೇರ್ ಸ್ಟಾರ್ಮರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಈ ವೇಳೆ ಪ್ರಧಾನಮಂತ್ರಿ ಸ್ಟಾರ್ಮರ್ ಯುಕ್ರೇನ್ ಸಂಘರ್ಷ ಕುರಿತು ಬ್ರಿಟನ್‌ನ ದೃಷ್ಟಿಕೋನವನ್ನು ವಿವರಿಸಿದರು. ಇದಲ್ಲದೆ, ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ವೃದ್ಧಿಸುವುದು ಮತ್ತು ಉಭಯ ದೇಶಗಳ ಜನರ ನಡುವಿನ ವಿನಿಮಯವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
1. ಈ ಸಂಬಂಧ ವಿದೇಶಾಂಗ ಸಚಿವರು ಬ್ರಿಟನ್‌ನ ವಾಣಿಜ್ಯ ಸಚಿವ ಜೊನಾಥನ್ ರೆನಾಲ್ಡ್ಸ್ ಅವರನ್ನು ಭೇಟಿಯಾಗಿ ಭಾರತ-ಬ್ರಿಟನ್ ಮುಕ್ತ ವಾಣಿಜ್ಯ ಒಪ್ಪಂದದ ಕುರಿತು ಚರ್ಚೆ ನಡೆಸಿದರು.
2. ಜಯಶಂಕರ್ ಅವರು ಬ್ರಿಟನ್‌ನ ಗೃಹಸಚಿವ ಯವೆಟ್ ಕೂಪರ್ ಅವರನ್ನು ಭೇಟಿಯಾಗಿ ಭಯೋತ್ಪಾದನೆ ವಿರುದ್ಧ ಸಂಯುಕ್ತ ಪ್ರಯತ್ನಗಳ ಬಗ್ಗೆ ಮಾತುಕತೆಯಾಡಿದರು.
3. ಈ ಪ್ರವಾಸದ ಸಮಯದಲ್ಲಿ ವಿದೇಶಾಂಗ ಸಚಿವರು ಬ್ರಿಟನ್‌ನ ಬೆಲ್‌ಫಾಸ್ಟ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ ಹೊಸ ಭಾರತೀಯ ವಾಣಿಜ್ಯ ದೂತಾವಾಸದ ಉದ್ಘಾಟನೆ ಮಾಡಲಿದ್ದಾರೆ. ಬ್ರಿಟನ್‌ನ ವಿದೇಶಾಂಗ ಸಚಿವ ಡೇವಿಡ್ ಲ್ಯಾಮಿ ಹೇಳಿದಂತೆ, ಇದರಿಂದ ಎರಡು ದೇಶಗಳ ವ್ಯಾಪಾರ ಸಹಕಾರ ಇನ್ನಷ್ಟು ಬಲವಾಗಲಿದೆ. ಅಲ್ಲದೆ, ಬ್ರಿಟನ್ ರಕ್ಷಣಾ, ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಗಮನಹರಿಸಿದ್ದನ್ನು ಲ್ಯಾಮಿ ಸ್ಪಷ್ಟಪಡಿಸಿದರು.