‘ನಾನು ಯಾವುದೇ ತಪ್ಪು ಮಾತನ್ನೂ ಆಡಿರಲಿಲ್ಲ!’ – ಅಬೂ ಆಜ್ಮಿಯ ಉದ್ಧಟತನ

ಹೇಳಿಕೆಯನ್ನು ಹಿಂದಕ್ಕೆ ತೆಗೆದುಕೊಂಡರೂ ನಿಲಂಬನೆ, ಇದು ಅನ್ಯಾಯ!

ಮುಂಬಯಿ – ನಾನು ಯಾವುದೇ ತಪ್ಪು ಹೇಳಿಲ್ಲ; ಆದರೂ, ಸದನದ ಕಲಾಪಗಳು ನಡೆಯಬೇಕು, ಗೊಂದಲವಾಗಬಾರದು, ಹಾಗೆಯೇ ಅಧಿವೇಶನದಲ್ಲಿ ಕೆಲಸಗಳು ಪೂರ್ಣಗೊಳ್ಳಬೇಕು, ಅದಕ್ಕಾಗಿ ವಿಧಾನಸಭೆಯ ಹೊರಗೆ ನೀಡಿದ ಹೇಳಿಕೆಯನ್ನು ನಾನು ಹಿಂತೆಗೆದುಕೊಂಡೆ. ಆದರೂ ನನ್ನ ಮೇಲೆ ಅಮಾನತು ಕ್ರಮ ಕೈಗೊಳ್ಳಲಾಯಿತು. ಇದು ಕೇವಲ ನನ್ನ ಮೇಲಿನ ಅನ್ಯಾಯವಲ್ಲ, ನಾನು ಯಾರನ್ನು ಪ್ರತಿನಿಧಿಸುತ್ತೇನೋ ಅವರ ಮೇಲಿನ ಅನ್ಯಾಯವಾಗಿದೆ ಎಂದು ಸಮಾಜವಾದಿ ಪಕ್ಷದ ಶಾಸಕ ಅಬು ಆಜ್ಮಿ ಹೇಳಿದ್ದಾರೆ. ಈ ಕುರಿತ ವಿಡಿಯೋವನ್ನು ಅವರು ‘ಎಕ್ಸ್’ ಮೂಲಕ ಹಂಚಿಕೊಂಡಿದ್ದಾರೆ.

ಅಬು ಆಜ್ಮಿ ಅವರ ಉದ್ಧಟತನ!

‘ನನಗೆ ಏನಾದರೂ ಆದರೆ ಸರಕಾರವೇ ಹೊಣೆ!’

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, “ನಾನು ಮಹಾಪುರುಷರಿಗೆ ಅವಮಾನ ಮಾಡಿಲ್ಲ. ನನಗೆ ಜೀವ ಬೆದರಿಕೆಗಳು ಬರುತ್ತಿವೆ. ನನಗೆ ಏನಾದರೂ ಆದರೆ ಸರಕಾರವೇ ಹೊಣೆ” ಎಂದು ಹೇಳಿದರು.

 

ಸಂಪಾದಕೀಯ ನಿಲುವು

  • ‘ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬ ವೃತ್ತಿಯ ಅಬೂ ಆಜ್ಮಿ
  • ತಪ್ಪು ಹೇಳದಿದ್ದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡುವ ಜನಸಾಮಾನ್ಯರು ಅಥವಾ ಅಮಾನತು ಕ್ರಮಕ್ಕೆ ಒತ್ತಾಯಿಸುವ ಜನಪ್ರತಿನಿಧಿಗಳು ಮೂರ್ಖರೇ?