ಛತ್ರಪತಿ ಸಂಭಾಜಿ ಮಹಾರಾಜರ ಹತ್ಯೆಗೆ ಮನುಸ್ಮೃತಿ ಕಾರಣ !’ – ಶಾಸಕ ರೋಹಿತ ಪವಾರ, ಶರದ ಪವಾರ ಬಣ

ಪುಣೆ – ರಾಷ್ಟ್ರವಾದಿ ಕಾಂಗ್ರೆಸ್ ಶರದಚಂದ್ರ ಪವಾರ ಗುಂಪಿನ ಶಾಸಕರಾದ ರೋಹಿತ ಪವಾರರವರು ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಆಧಾರಿತ ‘ಛಾವಾ’ ಚಲನಚಿತ್ರವನ್ನು ನೋಡಿದರು. ಇದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಅವರು ‘ಎಕ್ಸ್’ನಲ್ಲಿ ‘ಛತ್ರಪತಿ ಸಂಭಾಜಿ ಮಹಾರಾಜರ ಹತ್ಯೆಗೆ ಮನುಸ್ಮೃತಿಯು ಕಾರಣವಾಗಿದೆ. ಔರಂಗಜೇಬನಿಗೆ ಮನುಸ್ಮೃತಿಯನ್ನು ಯಾರು ಹೇಳಿದರು ? ಎಂಬುದನ್ನು ಹುಡುಕುವುದೂ ಮಹತ್ವದ್ದಾಗಿದೆ’ ಎಂದು ಬರೆದಿದ್ದಾರೆ. (ಹಿಂದೂಗಳ ಮೇಲೆ ಜಿಝಿಯ ತೆರಿಗೆ ಹೇರಿದ್ದ ಔರಂಗಜೇಬನು ಎಂದಾದರು ಹಿಂದುಗಳ ಮನುಸ್ಮೃತಿಯನ್ನು ಕೇಳಿಸಿಕೊಳ್ಳುವನೇ ? ಶಾಲೆಯ ವಿದ್ಯಾರ್ಥಿಗಳಿಗೆ ತಿಳಿಯುವಷ್ಟೂ ತಿಳಿಯದಿರುವವರು ಶಾಸಕರೇ ! – ಸಂಪಾದಕರು)

ಶಾಸಕ ರೋಹಿತ ಪವಾರರವರು ಮುಂದುವರಿದು, ‘ನಿರಂತರವಾಗಿ ಅತ್ಯಾಚಾರಗಳನ್ನು ಸಹಿಸಿದರೂ ಸಂಭಾಜಿ ಮಹಾರಾಜರು ತಮ್ಮ ನಿಲುವಿನಿಂದ ಎಳೆಯಷ್ಟು ಕೂಡ ಕದಲಲಿಲ್ಲ. ಅವರು ಮರಣವನ್ನು ಸ್ವೀಕರಿಸಿದರು; ಆದರೆ ಶರಣಾಗಲಿಲ್ಲ. ಅವರ ಮೇಲೆ ನಡೆಸಲಾದ ನಿರಂತರ ಅತ್ಯಾಚಾರಗಳು ಮತ್ತು ನೀಡಿರುವ ಮರಣ ಯಾತನೆಯು ಮನುಸ್ಮೃತಿಯಲ್ಲಿನ ಕಲಿಕೆಯ ಪ್ರಯೋಗವೇ ಆಗಿದೆ. ಮನುಸ್ಮೃತಿಯಲ್ಲಿ ಹೇಳಿರುವಂತೆ ಯಾರಿಗಾದರೂ ಅಮಾನವೀಯ ರೀತಿಯಲ್ಲಿ ಹೇಗೆ ಕಿರುಕುಳ ನೀಡುವುದು, ಎಂಬುದರ ಮಾಹಿತಿಯನ್ನು ಔರಂಗಜೇಬನವರೆಗೆ ತಲುಪಿಸಿದವರು ಯಾರು ? ಇದನ್ನು ನೋಡುವುದು ಆವಶ್ಯಕವಾಗಿದೆ. (ಇತರ ಪಂಥಗಳ ಧಾರ್ಮಿಕ ಪುಸ್ತಕದಲ್ಲಿನ ಲೇಖನಗಳನ್ನು ರೋಹಿತ ಪವಾರ ರವರು ಎಂದಾದರೂ ಓದಿದ್ದಾರೆಯೇ ? ಕಾಫೀರರನ್ನು ಹೇಗೆ ಕೊಲ್ಲಬೇಕು ? ಎಂಬ ಅವರ ಕಲಿಕೆಯ ಬಗ್ಗೆ ರೋಹಿತ ಪವಾರರಿಗೆ ತಿಳಿದಿದೆಯೇ ? – ಸಂಪಾದಕರು) ಈ ಚಲನಚಿತ್ರದಿಂದ ಅಸಹಾಯಕತೆಯನ್ನು ಬಿಟ್ಟು ಯಾವುದೇ ಸಂಕಷ್ಟವನ್ನು ಎದುರಿಸುವ, ಹೋರಾಡುವ ಮತ್ತು ಹೋರಾಟದ ಪ್ರೇರಣೆ ದೊರೆಯುತ್ತದೆ. ಶತ್ರುವು ಯಾವಾಗಲೂ ಬಹಿರಂಗವಾಗಿ ವಿರೋಧಿಸುತ್ತಿರುತ್ತಾನೆ. ಕೆಲವು ಹತ್ತಿರದ ವ್ಯಕ್ತಿಗಳಿಂದಲೂ ಎಚ್ಚರದಿಂದಿರುವುದು ಆವಶ್ಯಕವಾಗಿರುತ್ತದೆ ಎಂಬುದರ ಪಾಠವೂ ದೊರೆಯುತ್ತದೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಈ ಪಾಠ ಎಲ್ಲರಿಗೂ ಅಕ್ಷರಶಃ ಸರಿ ಹೊಂದುತ್ತದೆ’, ಎಂದು ಹೇಳಿದರು.

ಅವರ ಹೇಳಿಕೆ !

 

ಸಂಪಾದಕೀಯ ನಿಲುವು

  • ಔರಂಗಜೇಬನು ಛತ್ರಪತಿ ಸಂಭಾಜಿ ಮಹಾರಾಜರನ್ನು ಕ್ರೂರವಾಗಿ ಹತ್ಯೆ ಮಾಡಿದ ಇತಿಹಾಸವಿರುವಾಗಲೂ ಅದರಲ್ಲಿ ಜಾತ್ಯಾಂಧತೆಯನ್ನು ಪ್ರಕಟಿಸುವ ಮತಾಂಧರನ್ನು ಓಲೈಸುವವರು ಶಿವಾಜಿ ಮಹಾರಾಜರ ದ್ರೋಹಿಗಳಲ್ಲವೇ ?
  • ರೋಹಿತ ಪವಾರರವರ ಅಜ್ಜ ಶರದ ಪವಾರ ರವರು ೧೯೯೩ ರ ಮುಂಬಯಿ ಬಾಂಬ ಸ್ಫೋಟದ ಪ್ರಕರಣದಲ್ಲಿ ಮುಸಲ್ಮಾನರನ್ನು ರಕ್ಷಿಸಲು ‘ಮುಸಲ್ಮಾನಬಹುಳ ಪ್ರದೇಶದಲ್ಲಿಯೂ ಒಂದು ಬಾಂಬ್ ಸ್ಪೋಟ್ ನಡೆದಿದೆ’ ಎಂಬ ಸುಳ್ಳು ಹೇಳಿಕೆ ನೀಡಿ `ಬಾಂಬ ಸ್ಪೋಟವು ಕೇವಲ ಹಿಂದುಗಳ ವಿರುದ್ಧ ನಡೆದಿಲ್ಲ’ ಎಂದು ತೋರಿಸಲು ಪ್ರಯತ್ನಿಸಿದ್ದರು. ಇಂದು ಅವರ ಮೊಮ್ಮಗನೂ ಕ್ರೂರಿ ಔರಂಗಜೇಬನನ್ನು ರಕ್ಷಿಸಲು ಮನಸ್ಮೃತಿಯನ್ನು ಟೀಕಿಸುತ್ತಿದ್ದಾನೆ. ಇದರಿಂದ ಇಂತಹವರ ಮನಸ್ಥಿತಿಯು ಜನರ ಎದುರಿಗೆ ಬರುತ್ತಿದೆ, ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನು ?