ದೈನಿಕ ‘ ಸನಾತನ ಪ್ರಭಾತ ‘ ದ ಪತ್ರಕರ್ತ ಅಜಯ ಕೇಳಕರ ಅವರ ಪ್ರಬೋಧನೆಯ ನಂತರ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿನ ಫಲಕದಲ್ಲಿ ತ್ವರಿತ ಬದಲಾವಣೆ !

ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿನ ‘ ಛತ್ರಪತಿ ಶಿವಾಜಿ ಮಹಾರಾಜ ಸಭಾಗೃಹ ‘ ಹೀಗೆ ನೂತನ ಹೆಸರು ಇರುವ ನಾಮಫಲಕ

ಕೊಲ್ಹಾಪುರ್, ಮಾರ್ಚ್ ೨ (ವಾರ್ತೆ) – ಕೊಲ್ಹಾಪುರ್ ಜಿಲ್ಲಾಧಿಕಾರಿ ಕಾರ್ಯಾಲಯದ ನಿವಾಸಿ ಉಪಜಿಲ್ಲಾಧಿಕಾರಿ ಕಾರ್ಯಾಲಯದ ಪಕ್ಕದಲ್ಲಿರುವ ಸಭಾಗೃಹದ ಹೆಸರು ‘ಛತ್ರಪತಿ ಶಿವಾಜಿ ಸಭಾಗೃಹ ‘ ಎಂದಿತ್ತು. ಈ ಹೆಸರಿನಲ್ಲಿ ಸುಧಾರಣೆ ಮಾಡಿ ‘ಛತ್ರಪತಿ ಶಿವಾಜಿ ಮಹಾರಾಜ ಸಭಾಗೃಹ ‘ ಎಂದು ಬರೆಯಬೇಕು, ಎಂದು ದೈನಿಕ ‘ ಸನಾತನ ಪ್ರಭಾತ ‘ದ ಪತ್ರಕರ್ತ ಶ್ರೀ. ಅಜಯ ಕೇಳಕರ ಅವರು ಅಲ್ಲಿನ ನಿವಾಸಿ ಉಪಜಿಲ್ಲಾಧಿಕಾರಿ ಶ್ರೀ. ಸಂಜಯ ತೇಲಿ ಅವರಿಗೆ ವಿನಂತಿಸಿದ್ದರು. ವಿನಂತಿಯ ಬಳಿಕ ಕೂಡಲೇ ಈ ಬಗ್ಗೆ ಗಮನ ಹರಿಸಿ ಶ್ರೀ. ತೇಲಿ ಅವರು ಈ ಸಭಾಗೃಹದ ನಾಮಫಲಕ ‘ಛತ್ರಪತಿ ಶಿವಾಜಿ ಮಹಾರಾಜ ಸಭಾಗೃಹ ‘ ಎಂದು ಬದಲಾಯಿಸಿದರು. ತಕ್ಷಣ ಕ್ರಮ ಕೈಗೊಂಡು ನಾಮಫಲಕ ಬದಲಾಯಿಸಿದ್ದಕ್ಕೆ ಶಿವಾಜಿ ಮಹಾರಾಜರ ಅನುಯಾಯಿಗಳು ಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನ ‘ ಛತ್ರಪತಿ ಶಿವಾಜಿ ಸಭಾಗೃಹ ‘ ಹೀಗೆ ಹೆಸರು ಇರುವ ನಾಮಫಲಕ

ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತಿಸ್ಗಢ ಸಂಘಟಕರಾದ ಶ್ರೀ. ಸುನೀಲ ಘನವಟ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ‘ಛತ್ರಪತಿ ಶಿವಾಜಿ ಮಹಾರಾಜ’ ಅವರ ಸಂದರ್ಭದಲ್ಲಿನ ನಾಮಫಲಕವನ್ನು ತಕ್ಷಣ ಗಮನಹರಿಸಿ ಬದಲಾಯಿಸಿರುವ ಕರ್ತವ್ಯ ದಕ್ಷ ಮತ್ತು ರಾಷ್ಟ್ರಪ್ರೇಮಿ ಅಧಿಕಾರಿಗಳು ಇತರರಿಗೆ ಆದರ್ಶವಾಗಿದ್ದಾರೆ. ಇಂತಹ ಅಧಿಕಾರಿಗಳಿಂದ ನಾಗರೀಕರ ಸಮಸ್ಯೆಗಳು ಪರಿಹರಿಸಲು ಮತ್ತು ಆಡಳಿತ ವ್ಯವಸ್ಥೆಗೆ ವೇಗ ಬರಲು ಸಹಾಯವಾಗುವುದು,’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಛತ್ರಪತಿ ಶಿವಾಜಿ ಮಹಾರಾಜರ ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಸನಾತನ ಪ್ರಭಾತದ ವರದಿಗಾರ ಅಜಯ್ ಕೇಲ್ಕರ್ ಅವರಿಗೆ ಅಭಿನಂದನೆಗಳು. ಇಂತಹ ಕರ್ತವ್ಯ ದಕ್ಷ ಪತ್ರಕರ್ತರು ಎಲ್ಲೆಡೆ ಇರಬೇಕು !