Tamil Nadu Free Rice Distribution : ತಮಿಳುನಾಡಿನ ಡಿಎಂಕೆ ಸರಕಾರದಿಂದ ರಂಜಾನ್ ಸಮಯದಲ್ಲಿ ಮಸೀದಿಗಳಿಗೆ ಉಚಿತವಾಗಿ ಅಕ್ಕಿ ವಿತರಣೆ

(ಡಿಎಂಕೆ ಎಂದರೆ ದ್ರಾವಿಡ ಮುನ್ನೇತ್ರ ಕಳಘಂ, ಅಂದರೆ ದ್ರಾವಿಡ ಪ್ರಗತಿ ಸಂಘ)

ಚೆನ್ನೈ (ತಮಿಳುನಾಡು) – ರಂಜಾನ್ ಸಮಯದಲ್ಲಿ ಮುಸಲ್ಮಾನರಿಗೆ ಮಸೀದಿಗಳಲ್ಲಿ ಉಪವಾಸದ ಗಂಜಿ ನೀಡಲಾಗುತ್ತದೆ. ಈಗ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಘಂ ಪಕ್ಷದ ಸರಕಾರವು ಇದಕ್ಕಾಗಿ ಅಕ್ಕಿ ನೀಡಲಿದೆ. ಉಪವಾಸ ಮಾಡುವ ಮುಸಲ್ಮಾನರಿಗೆ ಉಪವಾಸದ ಗಂಜಿ ತಯಾರಿಸಲು ತಮಿಳುನಾಡು ಸರಕಾರವು ಪ್ರತಿ ವರ್ಷ ಮಸೀದಿಗಳಿಗೆ ಅಕ್ಕಿ ನೀಡಲಿದೆ ಎಂದು ಸರಕಾರವು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸರಕಾರವು ಮಸೀದಿಗಳಿಗೆ 7 ಸಾವಿರ 920 ಮೆಟ್ರಿಕ್ ಟನ್ ಅಕ್ಕಿ ನೀಡಲಿದೆ. ಇದಕ್ಕಾಗಿ ಸರಕಾರವು 18 ಕೋಟಿ 41 ಲಕ್ಷ 40 ಸಾವಿರ ರೂಪಾಯಿಗಳನ್ನು ಹೆಚ್ಚುವರಿಯಾಗಿ ಖರ್ಚು ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಿಂದಿನ ವರ್ಷಗಳಂತೆ ಈ ವರ್ಷವೂ ಮುಸಲ್ಮಾನರು ಮಸೀದಿಗಳಿಗೆ ಅಕ್ಕಿ ನೀಡುವಂತೆ ವಿನಂತಿಸಿದ್ದಾರೆ.

ಸಂಪಾದಕೀಯ ನಿಲುವು

ಡಿಎಂಕೆ ಸರಕಾರವು ಹಿಂದೂ ದೇವಾಲಯಗಳನ್ನು ಸರಕಾರೀಕರಣಗೊಳಿಸಿ, ಅವುಗಳ ಕೋಟ್ಯಂತರ ರೂಪಾಯಿಗಳ ದೇವನಿದಿಯನ್ನು ಇತರ ಕಾರ್ಯಗಳಿಗೆ ಬಳಸುತ್ತಿದೆ. ದೇವಾಲಯಗಳ ದುರಸ್ತಿ ಅಥವಾ ಇತರ ವ್ಯವಸ್ಥೆಗಳನ್ನು ಸುಗಮಗೊಳಿಸುವ ಕಡೆಗೆ ಗಮನ ನೀಡದೆ ಮಸೀದಿಗಳ ಮೇಲೆ ದುಂದುವೆಚ್ಚ ಮಾಡುತ್ತಿದೆ. ಇದು ತಮಿಳುನಾಡಿನ ಹಿಂದೂಗಳಿಗೆ ಯಾವಾಗ ತಿಳಿಯುತ್ತದೆ ?