ರಾಯಪುರ : ಶಿಕ್ಷಣ ಮತ್ತು ಆರೋಗ್ಯದ ಹೆಸರಿನಲ್ಲಿ ಕ್ರೈಸ್ತಪಂಥದ ಪ್ರಚಾರ ಮಾಡುವ ಮತ್ತು ಮತಾಂತರದ ಘಟನೆಗಳಲ್ಲಿ ಸಹಭಾಗಿ ಇರುವ ಸ್ವಯಂಸೇವಾ ಸಂಸ್ಥೆಗಳ ವಿಚಾರಣೆ ಮಾಡುವಂತೆ ಛತ್ತೀಸ್‌ಗಡದ ಮುಖ್ಯಮಂತ್ರಿ ವಿಷ್ಣುದೇವ ಸಾಯ ಇವರು ಆದೇಶ ನೀಡಿದ್ದಾರೆ. ಛತ್ತೀಸ್‌ಗಡದಲ್ಲಿ ಒಟ್ಟು ೧೫೩ ಸ್ವಯಂಸೇವಾ ಸಂಸ್ಥೆಗಳು ಇರುವುದು, ಅವುಗಳು ವಿದೇಶದಿಂದ ನಿಧಿ ಪಡೆಯುವುದಕ್ಕಾಗಿ ‘ವಿದೇಶಿ ಚಲನ ನಿಯಮನ ಕಾನೂನು’ ನ (‘ಫಾರಿನ್ ಎಕ್ಸ್ಚೇಂಜ್ ರೆಗುಲೇಶನ್ ಆಕ್ಟ್ ‘ಅಂದರೆ ಫೇರ’ದ) ಅಡಿಯಲ್ಲಿ ನೋಂದಣಿ ಆಗಿವೆ. ಆರೋಗ್ಯ, ಶಿಕ್ಷಣ ಮತ್ತು ಇತರ ಸಾಮಾಜಿಕ ಕಾರ್ಯ ಮಾಡುವ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಈ ಸ್ವಯಂಸೇವಾ ಸಂಸ್ಥೆಗಳ ಚಟುವಟಿಕೆ ಅನುಮಾನಾಸ್ಪದ ಇರುವುದು ಕಂಡು ಬಂದಿದೆ. ಮುಖ್ಯಮಂತ್ರಿ ವಿಷ್ಣುದೇವ ಸಾಯ ಇವರು ಕೂಡ ಈ ವಿಷಯದ ಬಗ್ಗೆ ಎಚ್ಚರಿಕೆ ನೀಡಿದ್ದರು. ಸ್ವಯಂ ಸೇವಾ ಸಂಸ್ಥೆಯು ಕ್ರೈಸ್ತ ಮತಾಂತರಕ್ಕೆ ಪ್ರೋತ್ಸಾಹ ನೀಡುವ ಚಟುವಟಿಕೆ ಕೇವಲ ಅನೈತಿಕ ಅಷ್ಟೇ ಅಲ್ಲದೆ ಅವುಗಳು ಸಂವಿಧಾನದ ಮೂಲ ಭಾವನೆಯ ವಿರುದ್ಧ ಕೂಡ ಇದೆ, ಎಂದು ಅವರು ಹೇಳಿದ್ದರು.
೧. ಈ ಸ್ವಯಂಸೇವಾ ಸಂಸ್ಥೆ ಶಿಕ್ಷಣ ಮತ್ತು ಆರೋಗ್ಯದ ಹೆಸರಿನಲ್ಲಿ ವಿದೇಶದಿಂದ ನಿಧಿ ಪಡೆದು ಮತಾಂತರಕ್ಕಾಗಿ ಉಪಯೋಗಿಸುತ್ತಾರೆ. ಆನಕ್ಷರ, ಬಡತನ, ಚಿಕಿತ್ಸೆ ಇದರ ದುರುಪಯೋಗ ಪಡೆಸಿಕೊಂಡು ಈ ಸಂಸ್ಥೆಗಳು ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಅನಿವಾರ್ಯಗೊಳಿಸುತ್ತಾರೆ.
೨. ಇದರಲ್ಲಿನ ಬಹುತೇಕ ಸ್ವಯಂ ಸೇವಾ ಸಂಸ್ಥೆಗಳು ಅವರ ಕಾರ್ಯಕ್ಷೇತ್ರ ಎಂದು ಆದಿವಾಸಿ ಪರಿಸರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
೩. ಬಸ್ತರದಲ್ಲಿ ೧೯ ರಲ್ಲಿ ೯ ನೋಂದಣಿ ಆಗಿರುವ ಸಂಸ್ಥೆಗಳು ಮತ್ತು ಜಶಪುರದಲ್ಲಿ ೧೮ ರಲ್ಲಿ ೧೫ ಸಂಸ್ಥೆಗಳು ಕ್ರೈಸ್ತ ಮಿಶಿನರಿಗಳಿಂದ ನಡೆಸಲಾಗುತ್ತಿವೆ. ಇಲ್ಲಿ ಮತಾಂತರದ ಪ್ರಮಾಣ ಕೂಡ ಎಲ್ಲಕ್ಕಿಂತ ಹೆಚ್ಚಾಗಿದೆ. ಜಶಪುರದ ಒಟ್ಟು ಆದಿವಾಸಿ ಜನಸಂಖ್ಯೆಯಲ್ಲಿ ಶೇಕಡ ೩೫ ಕ್ಕಿಂತಲೂ ಹೆಚ್ಚಿನ ಜನರು ಕ್ರೈಸ್ತರಾಗಿದ್ದಾರೆ.
೪. ರಾಜ್ಯದಲ್ಲಿ ೧೧ ತಿಂಗಳಲ್ಲಿ ಮತಾಂತರದ ಬಗ್ಗೆ ೧೩ ದೂರುಗಳು ದಾಖಲಾಗಿವೆ. ರಾಜ್ಯದಲ್ಲಿ ಭಾಜಪ ಸರಕಾರವು ಮತಾಂತರದ ವಿರುದ್ಧ ನೂತನ ಮತ್ತು ಕಠಿಣ ಕಾನೂನು ರೂಪಿಸುವ ದೃಷ್ಟಿಯಿಂದ ಸಿದ್ಧತೆ ಆರಂಭಿಸಿದೆ.
ಸಂಪಾದಕೀಯ ನಿಲುವುಸಾಮಾಜಿಕ ಕಾರ್ಯದ ಹೆಸರಿನಲ್ಲಿ ನಿಧಿ ಪಡೆದು ಅದನ್ನು ಕ್ರೈಸ್ತ ಪಂಥದ ಪ್ರಚಾರ ಮಾಡಲು ಮತ್ತು ಪ್ರಸಾರ ಮಾಡುವುದಕ್ಕಾಗಿ ಉಪಯೋಗಿಸುವ ಮೂಲಕ ಸಮಾಜದಲ್ಲಿ ಧಾರ್ಮಿಕ ಬಿರಿಕು ನಿರ್ಮಾಣ ಮಾಡುವ ಸ್ವಯಂಸೇವಾ ಸಂಸ್ಥೆಯ ಅನುಮತಿ ರದ್ದುಪಡಿಸಿ ಸಂಬಂಧ ಪಟ್ಟವರನ್ನು ಜೈಲಿಗೆ ಅಟ್ಟುವುದೇ ಸರಿ ಇದೆ ! |