|
ಮುಂಬಯಿ – ಕಾಂಗ್ರೆಸ್ ನಾಯಕ ವಿಜಯ ವಡೇಟ್ಟಿವಾರ ಅವರು ಜಗದ್ಗುರು ನರೇಂದ್ರಾಚಾರ್ಯಜಿ ಮಹಾರಾಜರ ಬಗ್ಗೆ ನೀಡಿದ ಹೇಳಿಕೆಯಿಂದಾಗಿ ಎಲ್ಲೆಡೆಯಿಂದ ಟೀಕೆಗಳು ವ್ಯಕ್ತವಾಗುತ್ತಿವೆ. ರಾಜ್ಯದ ನಾನಾ ಕಡೆಗಳಲ್ಲಿ ಮಹಾರಾಜರ ಶಿಷ್ಯರು ಮತ್ತು ಅನುಯಾಯಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. “ವಡೇಟ್ಟಿವಾರ ಕ್ಷಮೆ ಕೇಳಬೇಕು” ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುತ್ತಿದೆ. ನರೇಂದ್ರಾಚಾರ್ಯಜಿ ಮಹಾರಾಜರು ಸ್ವತಃ ಮುಂಬಯಿ ಉಪನಗರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ವಿಜಯ ವಡೇಟ್ಟಿವಾರ ವಿರುದ್ಧ ದೂರು ದಾಖಲಿಸಿದ್ದಾರೆ. “ಮತಗಳ ಧಾರ್ಮಿಕ ಧ್ರುವೀಕರಣ ಮಾಡುವವರು ಮಹಾರಾಜರಾಗಲು ಸಾಧ್ಯವಿಲ್ಲ” ಎಂದು ಕಾಂಗ್ರೆಸ್ ನಾಯಕ ವಿಜಯ ವಡೇಟ್ಟಿವಾರ ಅವರು ಜಗದ್ಗುರು ನರೇಂದ್ರಾಚಾರ್ಯ ಮಹಾರಾಜರ ಬಗ್ಗೆ ಹೇಳಿಕೆ ನೀಡಿದ್ದಾರೆ. ವಿಜಯ ವಡೇಟ್ಟಿವಾರ ಅವರು ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.
ಸಂಪಾದಕೀಯ ನಿಲುವುಮುಸ್ಲಿಂ ಧರ್ಮಗುರುಗಳ ಬಗ್ಗೆ ಕಾಂಗ್ರೆಸ್ ಅಥವಾ ಇನ್ನಾವುದೇ ನಾಯಕರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆ, ಈಗಾಗಲೇ ‘ಸರ್ ತನ್ ಸೆ ಜುದಾ’ (ಶಿರಚ್ಛೇದ) ಫತ್ವಾ ಹೊರಡಿಸುತ್ತಿದ್ದರು! |