ದೇಶದಲ್ಲಿ ಧರ್ಮವನ್ನು ಟೀಕಿಸುವ ನಾಯಕರ ಗುಂಪೊಂದು ಸಕ್ರೀಯ ! – ಪ್ರಧಾನಮಂತ್ರಿ ಮೋದಿ

ಛತರಪುರ (ಮಧ್ಯಪ್ರದೇಶ) ಇಲ್ಲಿಯ ಭಾಗೇಶ್ವರ ಧಾಮದಲ್ಲಿ ಕ್ಯಾನ್ಸರ್ ಆಸ್ಪತ್ರೆಯ ಶಂಕುಸ್ಥಾಪನಾ ಕಾರ್ಯಕ್ರಮ

ಛತ್ತರಪುರ (ಮಧ್ಯಪ್ರದೇಶ): ಇತ್ತೀಚೆಗೆ ದೇಶದಲ್ಲಿ ಧರ್ಮವನ್ನು ಟೀಕಿಸುವ ನಾಯಕರ ಗುಂಪೊಂದು ಸಕ್ರಿಯವಾಗಿದೆ. ಇವರು ಹಿಂದೂಗಳ ಶ್ರದ್ಧೆಗಳನ್ನು ದ್ವೇಷಿಸುತ್ತಾರೆ. ಅವರು ನಮ್ಮ ಶ್ರದ್ಧೆ, ಸಂಸ್ಕೃತಿ, ದೇವಾಲಯಗಳು, ಹಬ್ಬಗಳು ಮತ್ತು ಸಂಪ್ರದಾಯಗಳ ಮೇಲೆ ದಾಳಿ ಮಾಡುತ್ತಿದ್ದಾರೆ” ಎಂದು ಪ್ರಧಾನಿಯವರು ವಾಗ್ದಾಳಿ ನಡೆಸಿದರು.

ಅವರು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ನಿರ್ಮಿಸುತ್ತಿರುವ ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಪ್ರದಾನಿ ಮೋದಿಯವರು ಮಾತುಮುಂದುವರೆಸಿ, “ನಮ್ಮ ದೇವಾಲಯಗಳು ಮತ್ತು ಪೂಜಾ ಕೇಂದ್ರಗಳು ಕೇವಲ ಧಾರ್ಮಿಕ ಸ್ಥಳಗಳಲ್ಲ, ಅವು ಸಾಮಾಜಿಕ ಜಾಗೃತಿ ಕೇಂದ್ರಗಳೂ ಆಗಿವೆ. ನಮ್ಮ ಋಷಿಮುನಿಗಳು ಆಯುರ್ವೇದ ಮತ್ತು ಯೋಗದಂತಹ ವಿಜ್ಞಾನವನ್ನು ಜಗತ್ತಿಗೆ ನೀಡಿದ್ದಾರೆ. ಮಹಾಕುಂಭ ಮೇಳದ ಬಗ್ಗೆ ಇಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಕೋಟ್ಯಂತರ ಜನರು ಇಲ್ಲಿಗೆ ಬಂದು ಶ್ರದ್ಧೆಯ ಅನುಭವ ಪಡೆಯುತ್ತಿದ್ದಾರೆ. ಇತರರಿಗೆ ಸೇವೆ ಸಲ್ಲಿಸುವುದು ಮತ್ತು ಅವರ ದುಃಖವನ್ನು ದೂರ ಮಾಡುವುದು ನಮ್ಮ ಧರ್ಮವಾಗಿದೆ. ನನ್ನ ಸಹೋದರ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಮತ್ತು ಐಕ್ಯತೆಯ ಮಂತ್ರವನ್ನು ನೀಡುತ್ತಿದ್ದಾರೆ. ಈಗ ಅವರು ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸುವ ಸಂಕಲ್ಪ ಮಾಡಿದ್ದಾರೆ. ಅಂದರೆ ಇನ್ನು ಬಾಗೇಶ್ವರ ಧಾಮದಲ್ಲಿ ಭಜನೆ, ಭೋಜನ ಮತ್ತು ಆರೋಗ್ಯಕರ ಜೀವನದ ಆಶೀರ್ವಾದ ದೊರೆಯಲಿದೆ. ಈ ಕಾರ್ಯಕ್ಕಾಗಿ ನಾನು ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರನ್ನು ಅಭಿನಂದಿಸುತ್ತೇನೆ. ಶ್ರೀ ಹನುಮಂತನ ಆಶೀರ್ವಾದದಿಂದ ಈ ಸ್ಥಳವು ಶ್ರದ್ಧೆಯ ಕೇಂದ್ರದ ಜೊತೆಗೆ ಆರೋಗ್ಯ ಕೇಂದ್ರವಾಗಲಿದೆ” ಎಂದು ಹೇಳಿದರು.

ಬಾಗೇಶ್ವರ ಧಾಮದಲ್ಲಿ ನಿರ್ಮಾಣವಾಗುತ್ತಿರುವ ಈ ನೂತನ ಆಸ್ಪತ್ರೆಯು 252 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. 2 ಲಕ್ಷ 37 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುವ ಈ ಆಸ್ಪತ್ರೆಯು ಸುಮಾರು 7 ಜಿಲ್ಲೆಗಳ ಕ್ಯಾನ್ಸರ್ ರೋಗಿಗಳು ಮತ್ತು ಇತರ ರೋಗಪೀಡಿತರಿಗೆ ಪ್ರಯೋಜನವನ್ನು ನೀಡಲಿದೆ.