ಸರಕಾರ ಔರಂಗಜೇಬನಂತಹ ಕ್ರೂರಿಯ ಗೋರಿ ಏಕೆ ರಕ್ಷಿಸಬೇಕು ? – ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್ ಇವರ ನೇರ ಪ್ರಶ್ನೆ

ಮುಂಬಯಿ – ಜರ್ಮನಿಯಲ್ಲಿ ಹಿಟಲರ್ ನ ಗೋರಿ ಜೋಪಾನ ಮಾಡಲಿಲ್ಲ. ಜಗತ್ತಿನಲ್ಲಿ ಕ್ರೂರಿಗಳ ಗೋರಿಗಳು ಜೋಪಾನ ಮಾಡುವ ಪದ್ಧತಿ ಇಲ್ಲ. ಛತ್ರಪತಿ ಶಿವಾಜಿ ಮಹಾರಾಜ ಇವರನ್ನು ಕವಚದ ಹಾಗೆ ರಕ್ಷಿಸಿರುವ ಬಾಜೀಪ್ರಭು ಇವರ ಸಮಾಧಿ ವಿಶಾಲಗಡದಲ್ಲಿ ನಿರ್ಲಕ್ಷಿತವಾಗಿದೆ; ಆದರೆ ಕೇಂದ್ರ ಪುರಾತತ್ವ ಇಲಾಖೆ ಔರಂಗಜೇಬನ ಗೋರಿ ರಕ್ಷಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತದೆ. ಧರ್ಮವೀರ ಸಂಭಾಜಿ ಮಹಾರಾಜ ಇವರ ಮೇಲೆ ನಿರಂತರ ದೌರ್ಜನ್ಯ ನಡೆಸಿರುವ ಔರಂಗಜೇಬನಂತಹ ಕ್ರೂರಿಯ ಗೋರಿಯನ್ನು ಸರಕಾರ ಏಕೆ ರಕ್ಷಿಸಬೇಕು ?, ಎಂದು ಹಿಂದೂ ವಿಧೀಜ್ಞ ಪರಿಷತ್ ನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ಇವರು ಪ್ರಶ್ನಿಸಿ ಒಂದು ವಿಡಿಯೋ ಪ್ರಸಾರ ಮಾಡಿದ್ದಾರೆ. ಔರಂಗಜೇಬನ ಗೌರಿಯ ವೈಭವೀಕರಣದ ಬಗ್ಗೆ ಪ್ರಶ್ನಿಸಿ ಈ ವಿಡಿಯೋ ವಿವಿಧ ಮಾಧ್ಯಮಗಳಲ್ಲಿ ಕೂಡ ಪ್ರಸಾರವಾಗಿದ್ದು ಅದರ ಮೂಲಕ ಔರಂಗಜೇಬನ ಗೋರಿ ಧ್ವಂಸ ಮಾಡಲು ಹಿಂದುತ್ವ ಸಂಘಟನೆಗಳು ತೀವ್ರವಾಗಿ ಆಗ್ರಹಿಸುತ್ತಿದೆ.

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್ ಇವರು ಈ ವಿಡಿಯೋದಲ್ಲಿ ೨೦೧೧ ರಿಂದ ಔರಂಗಜೇಬನ ಗೋರಿಗಾಗಿ ಕೇಂದ್ರ ಪುರಾತತ್ವ ಇಲಾಖೆಯಿಂದ ಆಗಿರುವ ಖರ್ಚಿನ ವಿವರ ಕೂಡ ನೀಡಿದ್ದಾರೆ. ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ಇವರು ಕೇಂದ್ರ ಪುರಾತತ್ವ ಇಲಾಖೆಯಿಂದಲೇ ಈ ಮಾಹಿತಿ ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದಿದ್ದಾರೆ.

೨೦೧೯ ರಿಂದ ನವೆಂಬರ್ ೨೦೨೩ ವರೆಗಿನ ಅವಧಿಯಲ್ಲಿ ೬ ಲಕ್ಷ ೫೧ ಸಾವಿರದ ೯೦೦ ರಷ್ಟು ಖರ್ಚು ಮಾಡಿದ್ದಾರೆ. ಈ ಬಗ್ಗೆ ನ್ಯಾಯವಾದಿ ಇಚಲಕರಂಜೀಕರ ಇವರು, ‘ಕ್ರೂರಿ ಔರಂಗಜೇಬ ಮಹಾರಾಷ್ಟ್ರದಲ್ಲಿಯೇ ಮೃತನಾದನು. ಛತ್ರಪತಿ ಸಂಭಾಜಿ ನಗರ ಖುಲದಾಬಾದದಲ್ಲಿ ಅವನ ಗೋರಿ ಇದೆ. ಕ್ರೂರಿಯ ಗೋರಿ ಜಗತ್ತಿನಲ್ಲಿ ಕಾಪಾಡುವ ಪದ್ಧತಿ ಎಲ್ಲಿಯೂ ಇಲ್ಲ. ವಿಶಾಲಗಡದಲ್ಲಿನ ಬಾಜೀಪ್ರಭು ಇವರ ಸಮಾಧಿಯವರೆಗೆ ಹೋಗುವುದಕ್ಕಾಗಿ ಸರಿಯಾದ ರಸ್ತೆ ಕೂಡ ಇಲ್ಲ. ಹಿಂದವೀ ಸ್ವರಾಜಕ್ಕಾಗಿ ಬಲಿದಾನ ನೀಡಿರುವ ಮರಾಠರ ಸಮಾಧಿಗಳನ್ನು ಸರಕಾರ ನಿರ್ಲಕ್ಷಿಸಿದೆ. ಹಿಂದವೀ ಸ್ವರಾಜ್ಯದ ನಾಶ ಮಾಡಲು ಬಂದಿರುವ ಖಳನಾಯಕರ ಗೋರಿಗಳನ್ನು ವೈಭವಿಕರಿಸಲಾಗುತ್ತಿದೆ. ಅಕಬರುದ್ದೀನ್ ಓವೈಸಿ ಇವನು ಮೇ ೨೦೨೨ ರಲ್ಲಿ ಅಲ್ಲಿಗೆ ಹೋಗಿ ಔರಂಗಜೇಬನ ಗೋರಿಗೆ ಹೂವನ್ನು ಅರ್ಪಿಸಿದ್ದನು. ಇಂಥವರಗೆ ಔರಂಗಜೇಬನಂತಹ ಕ್ರೂರಿಯ ಗೋರಿಯ ಮಹತ್ವ ಏಕಿದೆ ? ಇದು ನನ್ನ ಪ್ರಶ್ನೆ ಆಗಿದೆ.

ರಾಷ್ಟ್ರ ಪ್ರೇಮಿಗಳ ಭಾವನೆಗಳು ಸರಕಾರದವರೆಗೆ ತಲುಪಬೇಕು ?

‘ಛಾವಾ’ ಚಲನಚಿತ್ರ ನೋಡಿ ಯಾರಿಗೆ ತಿಳಿದಿರಲಿಲ್ಲ ಅವರಿಗು ಕೂಡ ಧರ್ಮವೀರ ಸಂಭಾಜಿ ಮಹಾರಾಜ ಇವರ ಶೌರ್ಯ ಮತ್ತು ಔರಂಗಜೇಬನ ಕ್ರೌರ್ಯದ ಇತಿಹಾಸ ತಿಳಿಯಿತು. ಸಂಭಾಜಿ ರಾಜೇ ಇವರ ಹತ್ಯೆ ಔರಂಗಜೇಬನು ಕ್ರೌರ್ಯದಿಂದ ಮಾಡಿದ್ದನು, ಅದನ್ನು ನೋಡಿ ಪ್ರತಿಯೊಬ್ಬ ಹಿಂದೂವಿಗೆ ವೇದನೆ ಉಂಟಾಗಿದೆ. ‘ಛಾವಾ’ ಇಂತಹ ಚಲನಚಿತ್ರ ಸುಖಾಸುಮ್ಮನೆ ನಿರ್ಮಾಣ ಆಗುವುದಿಲ್ಲ, ಜನರು ಅದನ್ನು ನೋಡಬಹುದು, ಹೇಗೆ ಯಾವ ನಿರ್ಮಾಪಕನಿಗೆ ಅನಿಸುತ್ತದೆ, ಆಗಲೇ ಚಲನಚಿತ್ರದ ನಿರ್ಮಾಣವಾಗುತ್ತದೆ. ಛತ್ರಪತಿ ಸಂಭಾಜಿ ಮಹಾರಾಜ್ ಇವರನ್ನು ಕ್ರೂರಿ ಔರಂಗಜೇಬನು ನಿರಂತರ ದೌರ್ಜನ್ಯ ನಡೆಸಿ ಹತ್ಯೆ ಮಾಡಿದನು, ಇದರ ರೋಷ ಎಲ್ಲಾ ರಾಷ್ಟ್ರ ಪ್ರೇಮಿಗಳ ಮನಸ್ಸಿನಲ್ಲಿ ಇದೆ. ಈ ಭಾವನೆಗಳನ್ನು ನಾಗರೀಕರು ಸರಕಾರದ ವರೆಗೆ ತಲುಪಿಸಬೇಕು, ಎಂದು ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್ ಇವರು ಹೇಳಿದರು.