Sambhal Azan Without Loudspeakers : ಸಂಭಲ್ (ಉತ್ತರ ಪ್ರದೇಶ) ದ ಶಾಹಿ ಜಾಮಾ ಮಸೀದಿಯ ಛಾವಣಿಯಿಂದ ಇಮಾಮ್ ಮೈಕ್ ಬದಲು ಬಾಯಿಯಿಂದ ಅಜಾನ್ !

ಮೈಕ್ ಮೇಲಿನ ನಿಷೇಧದ ಪರಿಣಾಮ !

(ಇಮಾಮ್ ಎಂದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವನು)
(ಅಜಾನ್ ಎಂದರೆ ಮುಸಲ್ಮಾನರನ್ನು ದೊಡ್ಡ ಧ್ವನಿಯಲ್ಲಿ ನಮಾಜ್‌ಗೆ ಆಹ್ವಾನಿಸುವುದು)

ಸಂಭಲ್ (ಉತ್ತರ ಪ್ರದೇಶ) – ಇಲ್ಲಿನ ಶ್ರೀ ಹರಿಹರ ದೇವಸ್ಥಾನದ ಸ್ಥಳದಲ್ಲಿ ನಿರ್ಮಿಸಲಾದ ಶಾಹಿ ಜಾಮಾ ಮಸೀದಿಯ ಛಾವಣಿಯಿಂದ ಇಲ್ಲಿನ ಇಮಾಮ್ ಹಿಂದಿನ ಕಾಲದಂತೆ ಮೈಕ್ ಮೂಲಕವಲ್ಲ ಬದಲಾಗಿ ಬಾಯಿಯಿಂದ ಅಜಾನ್ ನೀಡುತ್ತಿರುವ ವಿಡಿಯೋ ಪ್ರಸಾರವಾಗಿದೆ. ಉತ್ತರ ಪ್ರದೇಶದ ಧಾರ್ಮಿಕ ಸ್ಥಳಗಳಲ್ಲಿ ಅನಧಿಕೃತ ಮೈಕ್‌ಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ಪೊಲೀಸರು ಧಾರ್ಮಿಕ ಸ್ಥಳಗಳಿಂದ ಅನಧಿಕೃತವಾಗಿ ಅಥವಾ ನಿಗದಿತ ಮಿತಿಗಿಂತ ಹೆಚ್ಚು ಶಬ್ದ ಮಾಡುವ ಮೈಕ್‌ಗಳನ್ನು ತೆಗೆದುಹಾಕಿದ್ದಾರೆ.

ಆಡಳಿತವು ನಿಷೇಧ ಹೇರಿದರೂ ಇಲ್ಲಿನ ಮಸೀದಿಯಿಂದ ಮೈಕ್‌ಗಳ ಮೂಲಕ ಅಜಾನ್ ನೀಡಲಾಗಿತ್ತು. ನಂತರ ಪೊಲೀಸರು ಮಸೀದಿಯ ಇಮಾಮ್‌ಗಳ ಮೇಲೆ ಕ್ರಮ ಕೈಗೊಂಡಿದ್ದಾರೆ. ಇಲ್ಲಿಯವರೆಗೆ ಸಂಭಲ್‌ನ 3 ಮಸೀದಿಗಳ ಇಮಾಮ್‌ಗಳ ಮೇಲೆ ಮೈಕ್‌ಗಳ ಮೂಲಕ ಜೋರಾಗಿ ಅಜಾನ್ ನೀಡಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಸಂಭಾಲ್‌ನಲ್ಲಿ ಹೀಗಾಗುವುದಾದರೆ, ದೇಶಾದ್ಯಂತ ಈಗ ಹೀಗೆ ಮಾಡುವುದು ಅವಶ್ಯಕ. ದೇಶದಲ್ಲಿ 18 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಭಾಜಪ ಸರಕಾರವಿರುವಾಗ ಇದು ಅಸಾಧ್ಯವಲ್ಲ ಎಂದು ಕಾನೂನು ಪ್ರೇಮಿ ಹಿಂದೂಗಳಿಗೆ ಅನ್ನಿಸುತ್ತದೆ !