ಗುತ್ತಿಗೆದಾರನಿಗೆ ೧೦ ಲಕ್ಷ ರೂಪಾಯಿ ದಂಡ !

ಮುಂಬಯಿ – ಅಹಮದಾಬಾದ್-ಮುಂಬಯಿ ಮಾರ್ಗದ ‘ವಂದೇ ಭಾರತ್’ ಎಕ್ಸ್‌ಪ್ರೆಸ್‌ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಆದಿತ್ಯ ಡಿಡ್ವಾನಿಯಾ ಎಂಬ ಪ್ರಯಾಣಿಕರು ‘ಎಕ್ಸ್’ (X) ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ‘ಐ.ಆರ್.ಸಿ.ಟಿ.ಸಿ’ (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ – IRCTC) ಸಂಬಂಧಪಟ್ಟ ಆಹಾರ ಪೂರೈಕೆ ಗುತ್ತಿಗೆದಾರನಿಗೆ ೧೦ ಲಕ್ಷ ರೂಪಾಯಿ ದಂಡ ವಿಧಿಸಿದೆ, ಅಲ್ಲದೆ ಆತನ ಗುತ್ತಿಗೆಯನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನೂ ಪ್ರಾರಂಭಿಸಲಾಗಿದೆ.
pic.twitter.com/eLznrk10TR Shocking : Insect Found In Meal Served On Vande Bharat Express Train !
— The Bharat Post (@TheBharatPost__) April 7, 2026
ಜಿರಲೆ ಪತ್ತೆಯಾದ ನಂತರ ಇತರ ಪ್ರಯಾಣಿಕರು ಕೂಡ ಊಟ ಮಾಡುವುದನ್ನು ನಿಲ್ಲಿಸಿದರು. ಪ್ರಯಾಣಿಕರು ಸಂಬಂಧಪಟ್ಟ ಆಹಾರದ ಛಾಯಾಚಿತ್ರಗಳು (ಫೋಟೋಗಳು) ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ರೈಲ್ವೆ ಸಚಿವಾಲಯವನ್ನೂ ‘ಟ್ಯಾಗ್’ ಮಾಡಿದ್ದಾರೆ.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!