ಕುಂಭಮೇಳದಲ್ಲಿ ಮಹಿಳೆಯರು ಸ್ನಾನ ಮಾಡುತ್ತಿರುವ ಆಕ್ಷೇಪಾರ್ಹ ವಿಡಿಯೊಗಳ ಮಾರಾಟ; ಮೂವರ ಬಂಧನ

  • ವಿಡಿಯೋಗಳನ್ನು ಮಾರಾಟ ಮಾಡಿ 9 ಲಕ್ಷ ರೂಪಾಯಿ ಗಳಿಕೆ

  • ಗುಜರಾತ್‌ನ ರಾಜಕೋಟ ಆಸ್ಪತ್ರೆಯ ಮಹಿಳಾ ರೋಗಿಗಳ ಅಶ್ಲೀಲ ವಿಡಿಯೊಗಳನ್ನು ಸಹ ಮಾರಿದರು !

ಪ್ರಯಾಗರಾಜ (ಉತ್ತರ ಪ್ರದೇಶ) – ಇಲ್ಲಿ ಮಹಾಕುಂಭದಲ್ಲಿ ಮಹಿಳೆಯರು ಸ್ನಾನ ಮಾಡುತ್ತಿರುವ ವಿಡಿಯೊಗಳು ಮತ್ತು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮಾರಾಟ ಮಾಡಿದ ಆರೋಪದ ಕುರಿತು ಗುಜರಾತ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಪ್ರಯಾಗರಾಜನ ಚಂದ್ರ ಪ್ರಕಾಶ ಎಂಬ ಯೂಟ್ಯೂಬರ್ (ಯೂಟ್ಯೂಬ್ ಚಾನೆಲ್ ಆಪರೇಟರ್) ಕೂಡ ಸೇರಿದ್ದಾನೆ. ಅವನು ‘ಸಿಪಿ ಮೊಂಡಾ’ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾನೆ. ಅವನಿಂದ ಮಹಿಳೆಯರು ಸ್ನಾನ ಮಾಡುತ್ತಿರುವ ಆಕ್ಷೇಪಾರ್ಹ ವಿಡಿಯೊಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಆತನೊಂದಿಗೆ ಮಹಾರಾಷ್ಟ್ರದ ಲಾತೂರಿನ ಪ್ರಜ್ವಲ ತೇಲಿ ಮತ್ತು ಸಾಂಗ್ಲಿಯ ಪ್ರಾಜ ಪಾಟೀಲ ಎಂಬುವರನ್ನೂ ಪೊಲೀಸರು ಬಂಧಿಸಿದ್ದಾರೆ. ಹಣ ಸಂಪಾದಿಸಲು, ಅವರು ರಾಜಕೋಟ ಆಸ್ಪತ್ರೆಯ ಮಹಿಳಾ ರೋಗಿಗಳ ಆಕ್ಷೇಪಾರ್ಹ ವಿಡಿಯೊಗಳನ್ನು ಪಡೆದು, ಅದನ್ನು ಟೆಲಿಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದರು.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಕೆಲವು ‘ಹ್ಯಾಕರ್ಸ್‌ಗಳು’ (ಒಬ್ಬ ವ್ಯಕ್ತಿಯ ಪಾಸ್ವರ್ಡ್ ಅನ್ನು ಕಾನೂನುಬಾಹಿರವಾಗಿ ಪಡೆದು ಆ ವ್ಯಕ್ತಿಯ ಅನುಮತಿಯಿಲ್ಲದೆ ಅವರ ಖಾತೆಯನ್ನು ಬಳಸುವವರು) ಆಸ್ಪತ್ರೆಯ ಸಿಸಿಟಿವಿ ವ್ಯವಸ್ಥೆಯನ್ನು ಹ್ಯಾಕ್ ಮಾಡಿ (ನಿಯಂತ್ರಣ ಪಡೆದುಕೊಂಡು) ಮಹಿಳಾ ರೋಗಿಗಳ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ. ನಂತರ, ಪ್ರಜ್ವಲ ಮತ್ತು ಪ್ರಾಜ ಈ ಚಿತ್ರೀಕರಣಗಳನ್ನು ಪಡೆದುಕೊಂಡು ಆನ್‌ಲೈನ್‌ನಲ್ಲಿ 800 ರಿಂದ 2 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದರು. ಇದರಿಂದ ಇಬ್ಬರೂ ಕಳೆದ 7-8 ತಿಂಗಳಲ್ಲಿ 8-9 ಲಕ್ಷ ರೂಪಾಯಿ ಗಳಿಸಿದ್ದಾರೆ. ಇಬ್ಬರಿಂದ ಸುಮಾರು 2 ಸಾವಿರ ವಿಡಿಯೊಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಜ್ವಲ ಮತ್ತು ಪ್ರಾಜ ಪರಸ್ಪರರ ಪರಿಚಯವಿದೆ.

ಸಂಪಾದಕೀಯ ನಿಲುವು

ಇಂತಹ ವಿಕೃತರಿಗೆ ಗಲ್ಲುಶಿಕ್ಷೆ ವಿಧಿಸಿದರೆ, ಇತರರಿಗೆ ಹೆದರಿಕೆ ಮೂಡುವುದು !