|
ಭಾಗ್ಯನಗರ (ತೆಲಂಗಾಣ) – ಇಸ್ರೈಲ್‌ನಲ್ಲಿ ಹೆಚ್ಚು ಸಂಬಳ ಪಡೆಯಲು ಹೋಗಿರುವ ಸುಮಾರು 1 ಸಾವಿರದ 500 ಭಾರತೀಯ ನಾಗರಿಕರ ದುಃಸ್ಥಿತಿ ನೋಡಲು ಸಿಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ನೈಪುಣ್ಯತೆ ಹೊಂದಿರುವ ಭಾರತೀಯರನ್ನು ಕೂಲಿ ಕೆಲಸ ಮಾಡಬೇಕಾಗುತ್ತಿದೆ. ಅದರಲ್ಲಿಯೂ ಮೂಲ ಒಪ್ಪಂದದ ಅನುಸಾರ ಎಲ್ಲರೂ ತಿಂಗಳಿಗೆ 200 ರಿಂದ 236 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಷರತ್ತು ವಿಧಿಸಿದ್ದರೂ, ಪ್ರತಿಯೊಬ್ಬನೂ 360 ಗಂಟೆಗಳ ಕಾಲ ಅಂದರೆ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸಲಾಗುತ್ತಿದೆ.
1. ಈ ಭಾರತೀಯರಲ್ಲಿ ಕೆಲವರು ಸಿವಿಲ್ ಇಂಜಿನಿಯರ್‍ಗಳಾಗಿದ್ದಾರೆ. ಇನ್ನಿತರ ಕೆಲವು ಜನರು ನಿರ್ಮಾಣ ತಜ್ಞರು, ಸೆರಾಮಿಕ್ ಟೈಲ್ಸ್ ತಜ್ಞರು, ಪೀಠೋಪಕರಣ ತಯಾರಿಕಾ ತಜ್ಞರು ಮುಂತಾದ ವಿವಿಧ ಕ್ಷೇತ್ರಗಳೊಂದಿಗೆ ಸಂಬಂಧಿಸಿದವರಾಗಿದ್ದಾರೆ.
2. ಹಲವರು ತಮಗೆ ಒಪ್ಪಂದದ ಪ್ರಕಾರ ‘ಉತ್ತಮ ವೇತನ ಸಿಕ್ಕಿದೆ. ಆದರೆ ತಮಗೆ ಆಯ್ಕೆಯ ಸಮಯದಲ್ಲಿ ಹೇಳಿರುವ ಕೆಲಸ ಸಿಗಲಿಲ್ಲ ಎಂದು ದೂರಿದ್ದಾರೆ. ಅವರಲ್ಲಿ ಹೆಚ್ಚಿನವರು ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಇಟ್ಟಿಗೆ ಮತ್ತು ಸಿಮೆಂಟ್ ಎತ್ತುತ್ತಿದ್ದಾರೆ, ಇನ್ನೂ ಕೆಲವರು ಮನೆ ಸ್ವಚ್ಛಗೊಳಿಸುತ್ತಿದ್ದಾರೆ.
3. ಇಸ್ರೈಲ್-ತೆಲಂಗಾಣ ಸಂಘದ ಅಧ್ಯಕ್ಷ ಸೋಮ ರವಿ ಹಿಂದಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಇಸ್ರೈಲ್-ಹಮಾಸ್ ಯುದ್ಧದ ಸಮಯದಲ್ಲಿ, ಇಸ್ರೈಲ್ ನುರಿತ ಕೆಲಸಗಾರರ ಕೊರತೆಯನ್ನು ಅನುಭವಿಸಿತು, ಆದ್ದರಿಂದ ಭಾರತದಿಂದ ಜನರನ್ನು ಕಳುಹಿಸಲಾಯಿತು. ಡಿಸೆಂಬರ್ 2023 ರಿಂದ, ಅಂದಾಜು 10 ಸಾವಿರ ಭಾರತೀಯ ನುರಿತ ಕೆಲಸಗಾರರನ್ನು ಇಸ್ರೈಲ್‌ಗೆ ಕಳುಹಿಸಲಾಗಿದೆ. ಈ ಪೈಕಿ 1 ಸಾವಿರ 500 ಕ್ಕೂ ಹೆಚ್ಚು ಜನರಿಗೆ ಬೇರೆಯೇ ಉದ್ಯೋಗಗಳನ್ನು ನೀಡಲಾಗಿದೆ.
4. ಭಾರತೀಯ ಕಾರ್ಮಿಕರು ಮುಖ್ಯವಾಗಿ ರಫಾಹ, ಲೆಬನಾನಿನ ಗಡಿ, ಅಶದೋದ, ಹಾಯಫಾ, ಟೆಲ್ ಅವೀವ್, ಹೋಲೋನ, ಜೆರುಸಲೆಮ ಮತ್ತು ನೆತನ್ಯಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.
5. ಈ ಪ್ರಕರಣದಲ್ಲಿ, ಡಿಸೆಂಬರ್ 2024 ರಲ್ಲಿ ಕೇಂದ್ರ ಸರಕಾರವು ಕೆಲವು ಕಾರ್ಮಿಕರು ಇಸ್ರೈಲ್‌ಗೆ ಸಂಬಂಧಿಸಿದ ದೂರುಗಳನ್ನು ಸರಕಾರಿ ಅಧಿಕಾರಿಗಳಿಗೆ ವರದಿ ಮಾಡಿದ್ದಾರೆ ಎಂದು ಹೇಳಿತ್ತು. ಅವುಗಳನ್ನು ಪರಿಹರಿಸಲಾಗಿದೆ. ಮತ್ತೊಂದೆಡೆ, ಕಾರ್ಮಿಕರು ದೂರುಗಳನ್ನು ನೀಡುತ್ತಿದ್ದರೂ ಸರಕಾರ ಅವುಗಳನ್ನು ಪರಿಹರಿಸಿಲ್ಲ’, ಎಂದು ಹೇಳುತ್ತಿದ್ದಾರೆ.
ಸಂಪಾದಕೀಯ ನಿಲುವುಭಾರತವು ಇಸ್ರೈಲ್ ಆಡಳಿತವನ್ನು ಈ ಬಗ್ಗೆ ವಿಚಾರಿಸಬೇಕು. ಆಗ ಮಾತ್ರ ಅಲ್ಲಿನ ಸಂಸ್ಥೆಗಳು ಭಾರತೀಯರ ದುರುಪಯೋಗವನ್ನು ಪಡೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕು ! |