ಡೆಹರಾಡೂನ್ (ಉತ್ತರಖಂಡ) – ಉತ್ತರಾಖಂಡದ ಭಾಜಪ ಸರಕಾರದ ಸಚಿವಸಂಪುಟವು ರಾಜ್ಯದ ೧೩ ರಲ್ಲಿ ೧೧ ಜಿಲ್ಲೆಯಲ್ಲಿ ಹೊರರಾಜ್ಯದವರಿಗೆ ಹೊಲ ಮತ್ತು ನೀರಾವರಿ ಭೂಮಿ ಖರೀದಿಗೆ ನಿಷೇಧ ಹೇರುವ ಮಸೂದೆಯ ಕರಡು ಅಂಗಿಕಾರವಾಗಿದೆ. ಇದು ‘ಭೂ ಕಾನೂನು’ ಎಂದು ಗುರುತಿಸಲಾಗುವುದು. ಈ ಮಸೂದೆ ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್‌ನ ಅಧಿವೇಶನದಲ್ಲಿ ಮಂಡಿಸಲಾಗುವುದು. ಇದು ಅನುಮೋದನೆಯಾದ ನಂತರ ರಾಜ್ಯದ ಹೊರರಾಜ್ಯದವರು ರಾಜ್ಯದ ರಾಜಧಾನಿ ಡೆಹ್ರಾಡೂನ್ ಹಾಗೂ ಪೌರಿ ಗಢವಾಲ, ಟಿಹರಿ ಗಡವಾಲ, ಉತ್ತರ ಕಾಶಿ, ರುದ್ರ ಪ್ರಯಾಗ, ಚಮೋಲಿ, ನೈನಿತಾಲ್, ಪಿಥೋರಾಗಡ್, ಚಂಪಾವತ್, ಅಲ್ಮೋಡ ಮತ್ತು ಬಾಗೇಶ್ವರ್ ಜಿಲ್ಲೆಯಲ್ಲಿ ನೀರಾವರಿ ಮತ್ತು ಹೊಲ ಭೂಮಿಗಳು ಖರೀದಿ ಮಾಡಲು ಸಾಧ್ಯವಿಲ್ಲ.
ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರು, ಸರಕಾರ ರಾಜ್ಯ, ಸಂಸ್ಕೃತಿ ಮತ್ತು ಮೂಲ ಸ್ವರೂಪಗಳ ರಕ್ಷಕವಾಗಿದೆ. ಸರಕಾರದ ಐತಿಹಾಸಿಕ ಹೆಜ್ಜೆ ರಾಜ್ಯದ ಸಾಂಸ್ಕೃತಿಕ ಪರಂಪರೆಯ ಮತ್ತು ನಾಗರಿಕ ಅಧಿಕಾರದ ಸಂರಕ್ಷಣೆ ಮಾಡುವುದು ಹಾಗೂ ರಾಜ್ಯದ ಮೂಲ ಪರಿಚಯ ಉಳಿಸುವುದಕ್ಕಾಗಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.