|
(ಮೌಲಾನಾ ಎಂದರೆ ಇಸ್ಲಾಮಿನ ಅಭ್ಯಾಸಕ)
ಇಸ್ಲಾಮಬಾದ್ (ಪಾಕಿಸ್ತಾನ್) – ಬಲೂಚಿಸ್ತಾನ್ ಯಾವಾಗ ಬೇಕಿದ್ದರು ಪಾಕಿಸ್ತಾನದಿಂದ ಸ್ವತಂತ್ರ ಆಗಿರುವ ಘೋಷಣೆ ಆಗಬಹುದು. ಬಲೂಚಿಸ್ತಾನ ಪ್ರಾಂತ್ಯದಲ್ಲಿ ೫ ರಿಂದ ೭ ಜಿಲ್ಲೆಗಳು ಸೇರಿ ಸ್ವತಂತ್ರವಾಗಿರುವ ಘೋಷಣೆ ಮಾಡಬಹುದು. ೧೯೭೧ ರಲ್ಲಿ ಬಾಂಗ್ಲಾದೇಶ ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರವಾಯಿತು. ಪ್ರಸ್ತುತ ರಾಜಕಾರಣಿಗಳ ಮಾನಸಿಕ ಸ್ಥಿತಿ ಬದಲಾಗದಿದ್ದರೆ ಮತ್ತೆ ಅದೇ ಪರಿಸ್ಥಿತಿ ಈಗಲೂ ಉದ್ಭವಿಸಬಹುದು, ಎಂದು ಪಾಕಿಸ್ತಾನದ ಸಂಸದ ಮೌಲಾನಾ ಫಜಲೂ ರೆಹಮಾನ್ ಇವರು ಸಂಸತ್ತಿನಲ್ಲಿ ಹೇಳಿದರು. ಈ ಹೇಳಿಕೆಯಿಂದ ಪಾಕಿಸ್ತಾನದಲ್ಲಿ ಅಷ್ಟೇ ಅಲ್ಲದೆ ಏಷ್ಯಾದಲ್ಲಿನ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ರೆಹಮಾನ್ ಮಾತು ಮುಂದುವರಿಸಿ, ಬಲೂಚಿಸ್ತಾನದಲ್ಲಿ ಈ ಜಿಲ್ಲೆಗಳು ಸ್ವತಂತ್ರ ಆಗಿರುವ ಘೋಷಣೆ ಮಾಡಿದರೆ ವಿಶ್ವಸಂಸ್ಥೆ ತಕ್ಷಣ ಅವರ ಪ್ರಸ್ತಾವ ಸ್ವೀಕರಿಸುವುದು ಮತ್ತು ಪಾಕಿಸ್ತಾನ ಎಲ್ಲಾ ಘಟನಾವಳಿಗೆ ತಲೆಬಾಗ ಬೇಕಾಗುವುದು.
ಬಲೂಚಿಸ್ತಾನದ ಸ್ಥಿತಿ !
ಬಲೂಚಿಸ್ತಾನ ಇದು ಪಾಕಿಸ್ತಾನದಲ್ಲಿ ಆಕಾರದ ದೃಷ್ಟಿಯಿಂದ ಎಲ್ಲಕ್ಕಿಂತ ದೊಡ್ಡ ಪ್ರಾಂತವಾಗಿದ್ದು ಜನಸಂಖ್ಯೆಯಲ್ಲಿ ಮಾತ್ರ ಹಿಂದುಳಿದಿದೆ. ಇಲ್ಲಿ ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇಕಡ ೨ ರಷ್ಟು ಜನರು ವಾಸಿಸುತ್ತಾರೆ. ಈ ಪ್ರದೇಶದಲ್ಲಿ ಕುರ್ಮ ಪರಿಸರದಲ್ಲಿ ಶಿಯಾ ಮತ್ತು ಸುನ್ನಿ ಈ ಎರಡು ಜನಾಂಗಗಳಲ್ಲಿ ಹಿಂಸಾಚಾರದ ಅನೇಕ ಘಟನೆಗಳು ಘಟಿಸಿವೆ. ನವಂಬರ್ ೨೦೨೪ ರಿಂದ ಅಂದರೆ ಕಳೆದ ೪ ತಿಂಗಳಿಂದ ಈ ಪ್ರದೇಶದಲ್ಲಿ ಹಿಂಸಾಚಾರದಲ್ಲಿ ೧೫೦ ಕ್ಕಿಂತಲೂ ಹೆಚ್ಚಿನ ಜನರು ಬಲಿಯಾಗಿದ್ದಾರೆ.