|

ನವದೆಹಲಿ – ಚಲನಚಿತ್ರ ನಿರ್ಮಾಪಕಿ ಏಕ್ತಾ ಕಪೂರ ಅವರಿಗೆ ನೀಡಲಾದ ‘ಪದ್ಮಶ್ರೀ’ ಪ್ರಶಸ್ತಿಯನ್ನು ಹಿಂಪಡೆಯಬೇಕೆಂಬ ಬೇಡಿಕೆ ಕೇಳಿಬರುತ್ತಿದೆ. ಭಾರತದ ವಿವಿಧ ಭಾಗಗಳಿಂದ ಬಂದ 108 ವಕೀಲರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಪೂರ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸು ಪಡೆಯುವಂತೆ ಕೋರಿದ್ದಾರೆ. ಅವರು ರಾಷ್ಟ್ರಪತಿ ಮುರ್ಮು ಅವರಿಗೆ ಈ ಸಂದರ್ಭದಲ್ಲಿ ಪತ್ರವನ್ನೂ ಬರೆದಿದ್ದಾರೆ. ಈ ವಕೀಲರು ಏಕ್ತಾ ಕಪೂರ ಕುರಿತು ವೆಬ್ ಸರಣಿಯ ಮೂಲಕ ಸಮಾಜದಲ್ಲಿ ಅಶ್ಲೀಲತೆಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಏಕ್ತಾ ಕಪೂರ ನಿರ್ಮಿಸಿರುವ ವೆಬ್ ಸರಣಿಯಿಂದ ನೈತಿಕ ಮೌಲ್ಯಗಳ ಅಧೋಗತಿಯಾಗುತ್ತಿದೆ ಮತ್ತು ಪವಿತ್ರವೆಂದು ಪರಿಗಣಿಸಲಾದ ಸಂಬಂಧಗಳನ್ನು ಹಾಳು ಮಾಡುತ್ತಿದೆ’, ಎಂದು ಅವರು ಆರೋಪಿಸಿದ್ದಾರೆ.
1. ವಕೀಲರು ತಮ್ಮ ಪತ್ರದಲ್ಲಿ ಏಕ್ತಾ ಕಪೂರ ನಿರ್ಮಿಸಿದ ಇಂತಹ ಹಲವು ವೆಬ್ ಸರಣಿಗಳ ಬಗ್ಗೆ ರಾಷ್ಟ್ರಪತಿಗಳಿಗೆ ತಿಳಿಸಿದ್ದಾರೆ. ಕಪೂರ್ ಅವರ ‘ಕಂಟೆಂಟ್’ (ಸಾಹಿತ್ಯ) ಭಾರತೀಯ ಯುವಜನರು ಮತ್ತು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದರಿಂದ ಪದ್ಮಶ್ರೀ ಪ್ರಶಸ್ತಿಯ ಪ್ರತಿಷ್ಠೆಗೆ ಧಕ್ಕೆ ತಂದಿದೆ, ಆದ್ದರಿಂದ ವಕೀಲರು ಅದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.
2. ಕಪೂರ ಅವರಿಗೆ 2021 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ದೂರದರ್ಶನ ಮತ್ತು ಚಲನಚಿತ್ರ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು. (ಅವರು ದೇಶ ಮತ್ತು ಸಮಾಜಕ್ಕೆ ಲಾಭವಾಗುವಂತಹ ಯಾವ ಕೊಡುಗೆಗಳನ್ನು ನೀಡಿದ್ದಾರೆ, ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಇದರಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು)
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !