ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸಲ್ಲಿಸಿದ್ದ ವರದಿಯಲ್ಲಿ ದಾವೆ

ನವದೆಹಲಿ – ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರಯಾಗರಾಜದ ತ್ರಿವೇಣಿ ಸಂಗಮದ ಸ್ಥಳದ ನೀರು ಸ್ನಾನಕ್ಕಾಗಿ ಹಾಗೂ ಕುಡಿಯಲು ಕೂಡ ಯೋಗ್ಯವಿಲ್ಲ ಎಂದು ಹೇಳಿದೆ. ಮಂಡಳದ ವರದಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಪ್ರಸ್ತುತಪಡಿಸಿದ್ದಾರೆ. ಇದರಲ್ಲಿ, ಸಂಗಮದಲ್ಲಿನ ನೀರಿನಲ್ಲಿ ‘ಫಿಕಲ್ ಕೋಲಿಫಾರಂ’ನ (ಬ್ಯಾಕ್ಟೀರಿಯಾ) ಮಟ್ಟ ಬಹಳಷ್ಟು ಹೆಚ್ಚಾಗಿದೆ ಎಂದು ಹೇಳಿದೆ.
೧. ಮಂಡಳದ ಸಂಶೋಧನಾ ತಂಡದಿಂದ ಪ್ರಯಾಗರಾಜದಲ್ಲಿನ ಅನೇಕ ಘಟ್ಟಗಳಿಂದ ನೀರಿನ ಸ್ಯಾಂಪಲ್ ಸಂಗ್ರಹಿಸಿದೆ. ಈ ಸ್ಯಾಂಪಲ್ ಪರಿಶೀಲಿಸಿದ ನಂತರ ಅದರಲ್ಲಿ ಮಾಲಿನ್ಯ ಕಾರಕ ಘಟಕಗಳ ಸಂಖ್ಯೆ ಹೆಚ್ಚಾಗಿರುವುದು ಕಂಡುಬಂದಿದೆ. ಸಂಗಮದಲ್ಲಿ ಪ್ರತಿದಿನ ಕೋಟ್ಯಾಂತರ ಜನರು ಸ್ನಾನ ಮಾಡುವುದರಿಂದ ‘ಫಿಕಲ್ ಕೋಲಿಫಾರಂ’ನ ಮಟ್ಟ ಹೆಚ್ಚಾಗಿರಬಹುದು, ಎಂದು ಸಾಧ್ಯತೆಯ ಬಗ್ಗೆ ಹೇಳುತ್ತಿದ್ದಾರೆ.
೨. ಮಹಾಕಂಭ ಆರಂಭವಾಗುವ ಮೊದಲು ಇಲ್ಲಿಯ ನೀರಿನ ಸ್ವಚ್ಛತೆಯ ಸಂದರ್ಭದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಒಂದು ಮನವಿ ದಾಖಲಿಸಲಾಗಿತ್ತು. ವರದಿ ದೊರೆತನಂತರ ಹಸಿರು ನ್ಯಾಯಮಂಡಳಿಯಿಂದ ಮುಂದಿನ ವಿಚಾರಣೆಗಾಗಿ ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳ ಮತ್ತು ಸಚಿವರಿಗೆ ವಿಚಾರಣೆಗಾಗಿ ಹಾಜರು ಇರಲು ಆದೇಶ ನೀಡಿದ್ದಾರೆ.
ಸಂಪಾದಕೀಯ ನಿಲುವುಪ್ರಯಾಗರಾಜ ಇಲ್ಲಿಯ ಮಹಾ ಕುಂಭಮೇಳದಲ್ಲಿ ಇಲ್ಲಿಯವರೆಗೆ ೫೫ ಕೋಟಿ ಭಕ್ತರು ಸ್ನಾನ ಮಾಡಿದ್ದಾರೆ. ಈ ಸಮಯದಲ್ಲಿ ತ್ರಿವೇಣಿ ಸಂಗಮದಲ್ಲಿನ ನದಿಯ ನೀರು ಸ್ವಚ್ಛ ಇರುವುದಾಗಿ ೨ ಸಂಸ್ಥೆಯಿಂದ ಹೇಳಲಾಗಿದೆ. ಕಳೆದ ಒಂದು ತಿಂಗಳಕ್ಕಿಂತಲೂ ಹೆಚ್ಚಿನ ಸಮಯದಲ್ಲಿ ಈ ನೀರಿನಲ್ಲಿ ಯಾವುದೇ ಸಂಕ್ರಮಣ ಕಂಡುಬಂದಿಲ್ಲ, ಇದು ನೈಜ ಸ್ಥಿತಿಯಾಗಿದೆ ! |
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !