|
ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿನ ಸಂಚಾರ ದಟ್ಟಣೆಯನ್ನು ಪರಿಹರಿಸಲು ಮತ್ತು ಭಾವಿಕರ ಗುಂಪನ್ನು ನಿಯಂತ್ರಿಸಲು ಪ್ರಯಾಗರಾಜನಿಂದ ಪೊಲೀಸ್ ಆಯುಕ್ತರಾದ ವಿಜಯ ವಿಶ್ವಾಸ ಪಂತ ಮತ್ತು ಪೊಲೀಸ್ ಉಪಮಹಾನಿರೀಕ್ಷಕರಾದ ಅಜಯ ಪಾಲ ಶರ್ಮಾರವರು ರಸ್ತೆಗಿಳಿದಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರವರು ಫೆಬ್ರವರಿ 10 ರ ಸಂಜೆ ವಿಶೇಷ ಕಾರ್ಯಪಡೆಯ ಮುಖ್ಯಸ್ಥರಾದ ಅಮಿತಾಭ ಯಶರವರನ್ನು ವಿಶೇಷ ವಿಮಾನದಲ್ಲಿ ಪ್ರಯಾಗರಾಜಗೆ ಕಳುಹಿಸಿದ್ದಾರೆ. ಹಾಗೆಯೇ ಮುಖ್ಯಮಂತ್ರಿಗಳ ಆದೇಶದಂತೆ, 52 ಹೊಸ ಐ.ಎ.ಎಸ್., ಐ.ಪಿ.ಎಸ್. ಮತ್ತು ಪಿ.ಸಿ.ಎಸ್. ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಲ್ಲರಿಗೂ ತಕ್ಷಣ ಪ್ರಯಾಗರಾಜಗೆ ತಲುಪಿ ಕರ್ತವ್ಯದಲ್ಲಿ ಸಹಭಾಗಿಯಾಗಲು ಹೇಳಲಾಗಿದೆ. ಫೆಬ್ರವರಿ 10 ರಿಂದ 13 ರವರೆಗೆ ಬೆಳಿಗ್ಗೆ 8 ಗಂಟೆಯವರೆಗೆ ಮಹಾಕುಂಭಕ್ಷೇತ್ರಕ್ಕೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಆಡಳಿತ ಮತ್ತು ಆರೋಗ್ಯ ಇಲಾಖೆಯ ವಾಹನಗಳಿಗೆ ಮಾತ್ರ ಪ್ರವೇಶವಿರುತ್ತದೆ.
ನಗರದಲ್ಲಿ ವಾಹನಸಂಚಾರ ದಟ್ಟಣೆಯಾಗುವುದಿಲ್ಲ ! – ತರುಣ ಗಾಬಾ, ಪೊಲೀಸ ಆಯುಕ್ತರು
ಪ್ರಯಾಗರಾಜ ಪೊಲೀಸ್ ಆಯುಕ್ತರಾದ ತರುಣ ಗಾಬಾರವರು ಮಾತನಾಡಿ, ಭಾವಿಕರಿಗೆ ಆಹ್ಲಾದಕರ ಅನುಭವ ಸಿಗುವಂತೆ ನಾವು ನೋಡಿಕೊಳ್ಳುತ್ತಿದ್ದೇವೆ. ಈಗ ಲಕ್ಷ್ಮಣಪುರಿ, ಜೌನಪುರ, ಪ್ರತಾಪಗಢ, ಚಿತ್ರಕೂಟ, ರಿವಾ, ವಾರಾಣಸಿ ಸೇರಿದಂತೆ ಎಲ್ಲಾ ಮಾರ್ಗಗಳಲ್ಲಿ ಸಂಚಾರ ಸುಗಮವಾಗಿದೆ. ನಗರದಲ್ಲಿ ಯಾವುದೇ ವಾಹನಸಂಚಾರ ದಟ್ಟಣೆ ಇಲ್ಲ. ವಾಹನಗಳನ್ನು ವಿವಿಧ ವಾಹನನಿಲುಗಡೆ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಜನರು ಕೇವಲ ಸಂಗಮಕ್ಕೆ ಹೋಗಲು ಪ್ರಯತ್ನಿಸಬಾರದು. ಮಾಘ ಪೂರ್ಣಿಮೆಯ ಮುನ್ನ ಕುಂಭಮೇಳದ ಪರಿಸರವು ಇಂದಿನಿಂದ ‘ವಾಹನ ನಿಷೇಧಿತ ವಲಯ’ವಾಗಿರುತ್ತದೆ. ಕಲ್ಪವಾಸಿಗಳಿಗಾಗಿ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಸರಿಯಾಗಿ ನಿಲ್ಲಿಸದ ವಾಹನಗಳನ್ನು ಕ್ರೇನ್ ಸಹಾಯದಿಂದ ಮೇಲೆತ್ತಲಾಗುತ್ತಿದೆ, ಎಂದು ಹೇಳಿದರು.