ದಕ್ಷಿಣೆ ಎಂದೂ ದೇವಸ್ಥಾನದ ಅರ್ಚಕರ ಆರತಿ ತಟ್ಟೆಯಲ್ಲಿ ಹಾಕಿರುವ ಹಣ ಕೂಡ ಸರಕಾರದ ಹುಂಡಿಗೆ ಜಮಾ ಮಾಡಬೇಕೆಂಬ ಆದೇಶ ನೀಡಿದ್ದರು
ಚೆನ್ನೈ (ತಮಿಳುನಾಡು) – ತಮಿಳುನಾಡಿನಲ್ಲಿನ ದ್ರಮುಕ ಸರಕಾರದ ಒಂದು ಆದೇಶದಲ್ಲಿ, ‘ದೇವಸ್ಥಾನದಲ್ಲಿನ ಅರ್ಚಕರು ಅವರ ತಟ್ಟೆಯಲ್ಲಿನ ಹಣ ಸರಕಾರಿ ಹುಂಡಿಗೆ ಜಮೆ ಮಾಡಬೇಕು’, ಎಂದು ಹೇಳಿತ್ತು. ಸರಕಾರಿ ಆದೇಶದಲ್ಲಿ, ದೇವಸ್ಥಾನದ ಸುರಕ್ಷಾ ಸಿಬ್ಬಂದಿಗಳಿಗೆ ಅರ್ಚಕರ ಮೇಲೆ ನಿಗಾ ಇಡುವಂತೆ ಆದೇಶ ನೀಡಿತ್ತು. ಈ ಆದೇಶಕ್ಕೆ ಹಿಂದೂ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ನಂತರ ಸರಕಾರವು ಈ ಆದೇಶ ಹಿಂಪಡೆದಿದೆ.
೧. ತಮಿಳುನಾಡಿನಲ್ಲಿನ ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ಫೆಬ್ರುವರಿ ೭, ೨೦೨೫ ರಂದು ಮೇಲಿನ ಆದೇಶ ನೀಡಿತ್ತು. ಅದರಲ್ಲಿ, ಅರ್ಚಕರಿಗೆ ಸರಕಾರದಿಂದ ವೇತನ ಸಿಗುತ್ತದೆ; ಆದ್ದರಿಂದ ದೇವಸ್ಥಾನದಲ್ಲಿ ದೊರೆಯುವ ಪ್ರತಿಯೊಂದು ದೇಣಗಿ ಸರಕಾರದ ಹುಂಡಿಗೆ ಜಮೆ ಮಾಡಬೇಕು.
೨. ಈ ಆದೇಶದ ಸಂದರ್ಭದಲ್ಲಿ ಹಿಂದೂ ತಮಿಳರ ಕತ್ಛೀ (ಹಿಂದೂ ತಮಿಳ ಪಕ್ಷ) ಈ ಸಂಘಟನೆಯು ಖಂಡಿಸುತ್ತಾ, ಈ ಸೂಚನೆ ಹಾಸ್ಯಾಸ್ಪದ ಮತ್ತು ಖಂಡನೀಯವಾಗಿದೆ. ಭಕ್ತರು ಸಾಮಾನ್ಯವಾಗಿ ದೇವಸ್ಥಾನದ ಅರ್ಚಕರ ತಟ್ಟೆಯಲ್ಲಿ ಒಂದು ಅಥವಾ ಐದು ರೂಪಾಯಿ ನಾಣ್ಯ ಅರ್ಪಿಸುತ್ತಾರೆ, ಅದು ಅವರ ಪ್ರದೇಶದ ಮತ್ತು ಸ್ಥಳಿಯ ಪರಂಪರೆಯ ಪ್ರಕಾರ ಅರ್ಪಿಸುತ್ತಾರೆ. ದೇವರ ಬಗ್ಗೆ ಇರುವ ಗೌರವ ಮತ್ತು ಕೃತಜ್ಞತೆ ವ್ಯಕ್ತಪಡಿಸುವುದಕ್ಕಾಗಿ ನಾಣ್ಯಗಳು ಅರ್ಪಿಸುತ್ತಾರೆ. ದತ್ತಿ ಇಲಾಖೆಯು ಈ ಚಿಕ್ಕ ಅರ್ಪಣೆಯ ಕುರಿತು ಕೂಡ ಗಮನ ಇರಿಸುವುದು ತಪ್ಪಾಗಿದೆ. ಇದರ ವಿರುದ್ಧ ಕಾನೂನಿನ ಹೋರಾಟ ಕೂಡ ನಡೆಸಲಾಗುವುದೆಂದು ಹೇಳಿತು.
೩. ಅದರ ನಂತರ ದೊಡ್ಡ ಪ್ರಮಾಣದಲ್ಲಿ ನಡೆದಿರುವ ಖಂಡನೆಯಿಂದ, ಹಿಂದೂ ದತ್ತಿ ಇಲಾಖೆಯಿಂದ ಈ ಸೂಚನೆ ಹಿಂಪಡೆಯಲಾಯಿತು. ದೇವಸ್ಥಾನದ ಟ್ರಸ್ಟಿಗಳ ಜೊತೆ ಚರ್ಚಿಸದೆ ಈ ಆದೇಶ ನೀಡಲಾಗಿದೆ ಎಂದು ಇಲಾಖೆ ಹೇಳಿದೆ.
೪. ಈ ಹಿಂದೆ ಏಪ್ರಿಲ್ ೨೦೨೪ ರಲ್ಲಿ ದೇವಸ್ಥಾನಕ್ಕೆ ಬಂದಿರುವ ಕೆಲವು ಹಣ ತೆಗೆದುಕೊಂಡಿರುವ ಆರೋಪದಡಿಯಲ್ಲಿ ತಮಿಳುನಾಡು ಸರಕಾರ ೪ ಅರ್ಚಕರನ್ನು ಬಂಧಿಸಿತ್ತು. ಅವರ ವಿರುದ್ಧ ಭಕ್ತರು ಪೂಜೆಯ ತಟ್ಟೆಯಲ್ಲಿ ಹಾಕಿದ್ದ ಹಣ ತೆಗೆದುಕೊಂಡ ಆರೋಪ ಹೋರಿಸಲಾಗಿತ್ತು.