Pak Army Bangla Navy Chief Meeting : ಬಾಂಗ್ಲಾದೇಶದ ನೌಕಾದಳದ ಪ್ರಮುಖರಿಂದ ಪಾಕಿಸ್ತಾನಿ ಸೈನ್ಯದಳ ಪ್ರಮುಖರ ಭೇಟಿ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ನೌಕಾದಳ ಪ್ರಮುಖ ಆಡ್ಮಿರಲ್ ಮಹಮ್ಮದ್ ನಝಮುಲ ಹಸನ್ ಇವರು ಪಾಕಿಸ್ತಾನದ ಸೈನ್ಯದಳ ಪ್ರಮುಖ ಸೈಯದ್ ಅಸೀಮ್ ಮುನೀರ್ ಇವರನ್ನು ಭೇಟಿ ಮಾಡಿದರು. ಒಂದು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಎರಡು ದೇಶಗಳಲ್ಲಿನ ಇದು ರಕ್ಷಣಾ ಮಟ್ಟದ ಎರಡನೆಯ ಸಭೆಯಾಗಿದೆ. ಈ ಹಿಂದೆ ಬಾಂಗ್ಲಾದೇಶದ ಸೈನ್ಯದ ಹಿರಿಯ ಅಧಿಕಾರಿ ಲೆಟ್ಫ್ ನಂಟ್ ಜನರಲ್ ಎಸ್.ಎಮ್. ಕಾಮರುಲ್ ಹಸನ್ ಇವರು ಆಸೀಮ್ ಮನೀರ್ ಇವರನ್ನು ಭೇಟಿ ಮಾಡಿದ್ದರು. ಅಷ್ಟೇ ಅಲ್ಲದೆ, ಪಾಕಿಸ್ತಾನಿ ಬೇಹುಗಾರಿಕೆ ಸಂಸ್ಥೆ ಐ.ಎಸ್.ಐ.ನ ಒಂದು ನಿಯೋಗವು ಢಾಕಾದಲ್ಲಿನ ಬಾಂಗ್ಲಾದೇಶ ಸೈನ್ಯದೊಂದಿಗೆ ಭೇಟಿ ಮಾಡಿತ್ತು. ಬಾಂಗ್ಲಾದೇಶದ ಮಧ್ಯಂತರ ಸರಕಾರವು ಪಾಕಿಸ್ತಾನದ ಜೊತೆಗೆ ಪ್ರಾದೇಶಿಕ ಮತ್ತು ರಕ್ಷಣಾ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕಾಗಿ ತೆಗೆದುಕೊಂಡ ನಿರ್ಣಯ ಎಂದು ನೋಡಲಾಗುತ್ತಿದೆ. ಉಭಯದೇಶಗಳ ಸಂಬಂಧ ಬಹಳ ಒಳ್ಳೆಯದಾಗಿ ಉಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಹತ್ತಿರ ಬಂದಿರುವುದರಿಂದ ದಕ್ಷಿಣ ಏಷ್ಯಾದಲ್ಲಿನ ಸಮೀಕರಣ ಬದಲಾಗಬಹುದು. ಇದು ಭಾರತಕ್ಕೆ ಆತಂಕದ ಕಾರಣವಾಗಬಹುದು.

೧. ನಝಮುಲ ಹಸನ್ ಇವರು ರಾವಳಪಿಂಡಿಯಲ್ಲಿ ಅಸೀಮ ಮನಿರ್ ಇವರನ್ನು ಭೇಟಿ ಮಾಡಿ ನೌಕಾದಳ ಸಹಾಯ ಮತ್ತು ಅಂತರಾಷ್ಟ್ರೀಯ ನೌಕಾದಳದ ಅಭ್ಯಾಸ ಇದರಲ್ಲಿ ಪಾಕಿಸ್ತಾನ ನೌಕಾದಳದ ಸಹಭಾಗದ ಬಗ್ಗೆ ಚರ್ಚೆ ನಡೆಸಿತು. ಅವರು, ಬಾಂಗ್ಲಾದೇಶದ ಸೈನ್ಯ ಪ್ರಾದೇಶಿಕ ಸ್ಥಿರತೆಗೆ ಚಾಲನೆ ನೀಡುವುದಕ್ಕಾಗಿ ಪಾಕಿಸ್ತಾನದ ಜೊತೆಗೆ ಸಹಾಯದ ಕುರಿತು ಒತ್ತು ನೀಡುತ್ತಿದೆ. ಪಾಕಿಸ್ತಾನಿ ಸೈನ್ಯ ಬಾಂಗ್ಲಾದೇಶಿ ಸೈನ್ಯಕ್ಕಾಗಿ ಪ್ರಶಿಕ್ಷಣ ಸತ್ರಗಳು ನಡೆಸುವ ಯೋಜನೆ ರೂಪಿಸುತ್ತಿದೆ. ಬಾಂಗ್ಲಾದೇಶ ಕೂಡ ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಖರೀದಿ ಮಾಡಿದೆ.

2. ಬಾಂಗ್ಲಾದೇಶ ಸೈನ್ಯದ ಒಂದು ಭಾಗ ಪಾಕಿಸ್ತಾನದ ಜೊತೆಗೆ ಸಹಕಾರಕ್ಕೆ ಆಗ್ರಹಿಸುತ್ತಿದೆ. ಒಂದು ಗುಂಪಿನ ವಿಶ್ವಾಸ ಏನೆಂದರೆ, ಇದರಿಂದ ಈ ಪ್ರದೇಶದಲ್ಲಿ ಸ್ಥಿರತೆ ಬರುವುದಾಗಿದೆ. ಈ ಸಹಕಾರ ಭಯೋತ್ಪಾದನೆ ಮತ್ತು ಇತರ ಭದ್ರತಾ ಸವಾಲುಗಳು ಎದುರಿಸಲು ಸಹಾಯ ಮಾಡಬಹುದು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಆಂತರಿಕ ಒತ್ತಡದ ಹಿನ್ನೆಲೆಯಲ್ಲಿ ಡಾಕಾ ಇಸ್ಲಾಮಾಬಾದನಿಂದ ರಾಜ ನೈತಿಕ ಬೆಂಬಲ ಪಡೆಯುವ ಪ್ರಯತ್ನ ಮಾಡುತ್ತಿದೆ. ಮಹಮ್ಮದ್ ಯುನೂಸ್ ಬಾಂಗ್ಲಾದೇಶಕ್ಕೆ ಭಾರತದ ಬದಲು ಪಾಕಿಸ್ತಾನ ಮತ್ತು ಚೀನಾದ ಹತ್ತಿರ ಕೊಂಡೊಯ್ಯಲು ಬಯಸುತ್ತಿದ್ದಾರೆ. ಇದು ಭಾರತಕ್ಕೆ ಆತಂಕದ ಕಾರಣವಾಗಬಹುದು. ಬಾಂಗ್ಲಾದೇಶದಲ್ಲಿ ಪಾಕಿಸ್ತಾನದ ಹಸ್ತಕ್ಷೇಪ ಏನಾದರೂ ಹೆಚ್ಚಾದರೆ, ಈಶಾನ್ಯದ  ರಾಜ್ಯಗಳಲ್ಲಿ ಅಶಾಂತಿ ನಿರ್ಮಾಣ ಮಾಡುವ ಪ್ರಯತ್ನ ಮಾಡಬಹುದು.

ಸಂಪಾದಕೀಯ ನಿಲುವು

ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೈನ್ಯದ ಭೇಟಿ ಭಾರತಕ್ಕಾಗಿ ಅಪಾಯಕರವಾಗಬಹುದು, ಇದನ್ನು ಹೇಳಲು ಜ್ಯೋತಿಷಿಯ ಅಗತ್ಯವಿಲ್ಲ. ಇದು ಘಟಿಸುವವರೆಗೆ ಭಾರತ ನಿಷ್ಕ್ರಿಯ ಇರುವುದೇ, ಇದು ಊಹೆಗೆ ನಿಲುಕದಾಗಿದೆ !