ಶೇಖ್ ಹಸೀನಾ ಸರಕಾರ ಉರುಳಲು ಅಂದಿನ ಜೊ ಬಾಯಡನ್ ಸರಕಾರದ ಕೈವಾಡ; ವರದಿ ಸೋರಿಕೆ

  • ಅಮೇರಿಕಾದ ವಿದೇಶಾಂಗ ಇಲಾಖೆಯಿಂದ ಸೋರಿಕೆ ಆಗಿದ್ದ ವರದಿಯಲ್ಲಿ ದಾವೆ

  • ಅಮೇರಿಕಾದ ‘ಇಂಟರ್ ನ್ಯಾಷನಲ್ ರಿಪಬ್ಲಿಕನ್ ಇನ್ಸ್ಟಿಟ್ಯೂಟ್’ಯಿಂದ ಬಾಯಡೇನ ಸರಕಾರದ ನಿಧಿಯ ಬಲದಲ್ಲಿ ಬಾಂಗ್ಲಾದೇಶದಲ್ಲಿ ವ್ಯಾಪಕ ಅಭಿಯಾನ ನಡೆಸಿತ್ತು !

ವಾಷಿಂಗ್ಟನ್/ಢಾಕಾ – ಕಳೆದ ವರ್ಷ ಆಗಸ್ಟ್ ೫ ರಂದು ಅಂದಿನ ಪ್ರಧಾನಮಂತ್ರಿ ಶೇಖ ಹಸೀನಾ ಇವರನ್ನು ಬಾಂಗ್ಲಾದೇಶದಿಂದ ಪಲಾಯನ ಮಾಡಬೇಕಾಯಿತು. ಆ ಸಮಯದಲ್ಲಿ ದೇಶದಾದ್ಯಂತ ಹಿಂಸಾಚಾರ ನಡೆದಿತ್ತು. ಇದರ ಹಿಂದೆ ಅಮೇರಿಕಾ ಇರುವುದೆಂದು ಹೇಳಿರುವುದರಲ್ಲಿ ತಥ್ಯ ಇದೆ, ಎಂದು ಹೇಳಲು ಅಡ್ಡಿ ಇಲ್ಲ. ಅಮೇರಿಕಾದ ‘ಇಂಟರ್ನ್ಯಾಷನಲ್ ರಿಪಬ್ಲಿಕ್ ಇನ್ಸ್ಟಿಟ್ಯೂಟ್’ ನ (ಐ.ಆರ್.ಐ.ನ) ಒಂದು ಗೌಪ್ಯ ವರದಿ ಸೋರಿಕೆ ಆಗಿದ್ದು ಅದರಲ್ಲಿ ಬಾಂಗ್ಲಾದೇಶದಲ್ಲಿನ ಶೇಖ ಹಸೀನಾ ಇವರ ಸರಕಾರ ಪದಚ್ಯುತಗೊಳಿಸಲು ನಡೆಸಲಾದ ಅಭಿಯಾನಕ್ಕೆ ಅಂದಿನ ಜೋ ಬಾಯಡೇನ್ ಸರಕಾರವೇ ನಿಧಿ ಪೂರೈಕೆ ಮಾಡಿತ್ತು, ಎಂದು ಹೇಳಲಾಗಿದೆ. ೨೦೨೦ ರಲ್ಲಿ ಅಮೇರಿಕಾದ ವಿದೇಶಾಂಗ ಇಲಾಖೆಗೆ ಈ ಸಂಸ್ಥೆಯು ವರದಿ ಪ್ರಸ್ತುತಪಡಿಸಿತ್ತು. ಈ ವರದಿಯಲ್ಲಿ ಮಾರ್ಚ್ ೧, ೨೦೧೯ ರಿಂದ ಡಿಸೆಂಬರ್ ೩೦, ೨೦೨೦ ಈ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ‘ಐ.ಆರ್.ಐ.’ ಯಿಂದ ಆಯೋಜಿಸಿರುವ ಅಭಿಯಾನದ ಬಗ್ಗೆ ಇದೆ.

ವರದಿಯ ಪ್ರಕಾರ ಈ ರೀತಿಯಲ್ಲಿ ಬಾಂಗ್ಲಾದೇಶದ ಸರಕಾರ ಉರುಳಿಸಿತು !

೧. ಶೇಖ್ ಹಸೀನಾ ಇವರ ಸರಕಾರ ಪದಚ್ಯುತಗೊಳಿಸುವ ಕಾರ್ಯ ೪ ವರ್ಷಗಳ ಮೊದಲೇ ಆರಂಭವಾಗಿತ್ತು.

೨. ಇದಕ್ಕಾಗಿ ‘ಐ.ಆರ್.ಐ.’ ನ ತಂಡವು ಏಪ್ರಿಲ್ ಮತ್ತು ಮೇ ೨೦೧೯ ಎರಡು ತಿಂಗಳ ಅವಧಿಯಲ್ಲಿ ರಾಜಧಾನಿ ಢಾಕಾ, ಸಿಲ್ಹೆಟ್, ರಾಜಶಾಹಿ, ಖುಲನಾ, ಮತ್ತು ಚಿತಗಾವ ಸಹಿತ ಬಾಂಗ್ಲಾದೇಶದಲ್ಲಿನ ಅನೇಕ ನಗರಗಳಲ್ಲಿ ಗ್ರಾಮಮಟ್ಟದಲ್ಲಿ ಮಾಹಿತಿ ನೀಡುವವರ ಜೊತೆಗೆ ಮಾತುಕತೆ ಆರಂಭಿಸಿದ್ದರು. ಬಾಂಗ್ಲಾದೇಶದ ರಾಜಕಾರಣ ಅಸ್ಥಿರಗೊಳಿಸುವುದಕ್ಕಾಗಿ ಸಹಾಯ ನೀಡಲು ಸಮ್ಮತಿ ತೋರಿಸಿರುವ ೧೭೦ ಕ್ಕಿಂತಲೂ ಹೆಚ್ಚಿನ ಲೋಕಶಾಹಿ ಬೆಂಬಲಿಗ ಕಾರ್ಯಕರ್ತರ ಈ ಸಮಯದಲ್ಲಿ ಗುರುತು ದೃಢಪಡಿಸಲಾಯಿತು. ಸಂಸ್ಥೆಯಿಂದ ಈ ಅಭಿಯಾನಕ್ಕೆ ‘ಬದಲಾವಣೆಯ ಸಿದ್ಧಾಂತ’ ಎಂದು ಹೆಸರು ನೀಡಲಾಯಿತು.

೩. ಶೇಖ್ ಹಸೀನಾ ಇವರ ಆಡಳಿತದಿಂದ ಅಸಮಾಧಾನವಿರುವ ಜನರ ಗುರುತು ಪತ್ತೆ ಹಚ್ಚಿ ಅವರಿಗೂ ಕೂಡ ತರಬೇತಿ ನೀಡಲಾಯಿತು.

೪. ನೇರ ‘ಐ.ಆರ್.ಐ.ನ ಪ್ರಶಿಕ್ಷಣ ಪಡೆದಿರುವ ಈ ಜನರು ಅವರ ಮಟ್ಟದಲ್ಲಿ ವಿವಿಧ ಕಾರ್ಯಶಾಲೆಗಳ ಆಯೋಜನೆ ಮಾಡಲು ಆರಂಭಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಜನರನ್ನು ಜೋಡಿಸಲು ಆರಂಭಿಸಿದರು ಹಾಗೂ ವಿವಿಧ ಸಾಮಾಜಿಕ ಉಪಕ್ರಮಗಳ ಯೋಜನೆ ಕೂಡ ಆರಂಭವಾಯಿತು. ಈ ಅಭಿಯಾನದ ಮೂಲಕ ಬಾಂಗ್ಲಾದೇಶದಲ್ಲಿನ ಕಲಾವಿದರು, ಕಾರ್ಯಕರ್ತರು ಮತ್ತು ನಾಗರಿಕರನ್ನು ಒಟ್ಟು ಮಾಡಿದರು.

೫. ಇದರೊಂದಿಗೆ ರಾಜಕೀಯ ವಿರೋಧ ಪಕ್ಷ ‘ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ’ಯ ರಾಜಕಾರಣಿಗಳು ಮತ್ತು ಸಾಂಸದರ ಜೊತೆಗೆ ಚರ್ಚಿಸಲಾಯಿತು. ಅವರು ಸರಕಾರ ವಿರೋಧಿ ಚಳುವಳಿಗಾಗಿ ತಕ್ಷಣ ಸಿದ್ದರಾದರು. (ಭಾರತದಲ್ಲಿನ ಕಾಂಗ್ರೆಸ್ ಮತ್ತು ಸಾಮ್ಯವಾದಿಗಳನ್ನು ಸೇರಿಸಿ ವಿದೇಶಿ ಶಕ್ತಿಗಳು ಕೇಂದ್ರ ಸರಕಾರ ಮತ್ತು ವಿಶೇಷವಾಗಿ ಹಿಂದೂ ಧರ್ಮದ ವಿರುದ್ಧ ಯಾವ ರೀತಿ ಷಡ್ಯಂತ್ರ ರೂಪಿಸುತ್ತಿತ್ತು, ಇದು ತಿಳಿಯಲು ಬಾಂಗ್ಲಾದೇಶದ ಈ ಅಭಿಯಾನದಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು)

೬. ಬಾಂಗ್ಲಾದೇಶದ ಕಲಾವಿದ ತೌಫಿಕ್ ಅಹಮದ್ ಇವರಿಗೆ ಎರಡು ಹಾಡುಗಳು ಸಿದ್ಧಗೊಳಿಸಲು ನಿಧಿ ನೀಡಲಾಗಿತ್ತು. ‘ತೋಯಿ ಪ್ಯಾರಿಶ್'(ನೀವು ಮಾಡ ಬಹುದು) ಮತ್ತು ‘ಎ ದೈ ಖರ’ ಇವು ಈ ಹಾಡುಗಳ ಹೆಸರುಗಳಾಗಿವೆ. ಬಾಂಗ್ಲಾದೇಶಿ ಸರಕಾರದ ವಿರುದ್ಧ ನಿರಾಶೆ ಮತ್ತು ಅಸಮಧಾನ ನಿರ್ಮಾಣ ಮಾಡುವುದಕ್ಕಾಗಿ ಈ ಹಾಡುಗಳನ್ನು ರಚಿಸಲಾಗಿದ್ದವು. ಈ ಮೂಲಕ ಬಾಂಗ್ಲಾದೇಶದಲ್ಲಿ ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗೆ ಕರೆ ನೀಡಲಾಯಿತು. ವಿಶೇಷವಾಗಿ ‘ತುಯಿ ಪ್ಯಾರಿಶ್’ ಹಾಡು ಕಠಿಣ ಸಮಯದಲ್ಲಿ ಯುವಕರಿಗೆ ಶಕ್ತಿಯ ಸಂದೇಶ ನೀಡಿ ಪ್ರೇರಣೆ ನೀಡುತ್ತದೆ ಮತ್ತು ಬಾಂಗ್ಲಾದೇಶದಲ್ಲಿನ ಪ್ರಜಾಪ್ರಭುತ್ವ ಸದೃಢ ಗೊಳಿಸುವುದಕ್ಕಾಗಿ ವಚನಭದ್ದ ಇರುವವರನ್ನು ‘ನಿಷೇಧ ಮತ್ತು ರಸ್ತೆಯಲ್ಲಿ ಪ್ರತಿಭಟನೆ ಇದರ ಜೊತೆಗೆ ಎಲ್ಲಾ ಸಾಧ್ಯವಾದ ಮಾರ್ಗಗಳನ್ನು ಅನುಸರಿಸಿ’, ಅದಕ್ಕಾಗಿ ಪ್ರೋತ್ಸಾಹಿತಗೊಳಿಸುತ್ತದೆ.

೭. ಬಾಂಗ್ಲಾದೇಶದಲ್ಲಿನ ಶೇಖ ಹಸೀನಾ ಇವರ ಸರಕಾರ ಕೆಡವುದು, ಇದು ನಮ್ಮ ನಿಜವಾದ ಧ್ಯೇಯವಾಗಿದೆ, ಎಂದು ಪ್ರತಿಭಟನಾಕಾರರ ಮನಸ್ಸಿನಲ್ಲಿ ಬಿಂಬಿಸಲಾಯಿತು.

೮. ಬಾಯಡೇನ್ ಸರಕಾರ ಐ.ಆರ್.ಐ.ಗೆ ನಿಧಿ ನೀಡುತ್ತಿತ್ತು. ಈ ಸಂಸ್ಥೆ ಸಾಮಾಜಿಕ ಕಾರ್ಯಕರ್ತರು, ಕಲಾವಿದರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಉಪಯೋಗಿಸಿ ದೇಶದ ಸರಕಾರವನ್ನು ಪದಚ್ಯುತಗೊಳಿಸುವ ಕೆಲಸ ಮಾಡುತ್ತದೆ.

‘ಇಂಟರ್ನ್ಯಾಷನಲ್ ರಿಪಬ್ಲಿಕನ್ ಇನ್ಸ್ಟಿಟ್ಯೂಟ್’ ನ ಮಾಹಿತಿ !

ಅಂತರಾಷ್ಟ್ರೀಯ ರಿಪಬ್ಲಿಕನ್ ಸಂಸ್ಥೆಯ (ಐ.ಆರ್.ಐ.ಯ) ಸ್ಥಾಪನೆ ೧೯೮೩ ರಲ್ಲಿ ‘ನ್ಯಾಷನಲ್ ಎಂಡೋಮೆಂಟ್ ಫಾರ್ ಡೆಮಾಕ್ರಸಿ’ ಈ ಅಮೇರಿಕ ಇಲಾಖೆಯ ಅಂತರ್ಗತವಾಯಿತು. ಪ್ರಸ್ತುತ ಈ ಸಂಸ್ಥೆಯ ಸಂಚಾಲಕ ಮಂಡಳದಲ್ಲಿ ಓರ್ವ ಅಮೇರಿಕಾದ ಸಂಸದ ಕೂಡ ಇದ್ದಾರೆ. ಅದಲ್ಲದೆ ಅನೇಕ ಮಾಜಿ ಅಮೇರಿಕಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದಾರೆ. ಈ ಸಂಸ್ಥೆಯು, ಇದು ಒಂದು ನಿಷ್ಪಕ್ಷವಾದ ಸಂಘಟನೆ ಆಗಿದೆ, ಅದು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟಿಲ್ಲ. ಈ ಸಂಸ್ಥೆಗೆ ಮುಖ್ಯವಾಗಿ ಅಮೇರಿಕಾದ ವಿದೇಶಾಂಗ ಇಲಾಖೆ, ಜಾರ್ಜ್ ಸೋರೋಸ್ ಇವರ ‘ಯು.ಎಸ್.ಎ.ಐ.ಡಿ.’ ಮತ್ತು ‘ನ್ಯಾಷನಲ್ ಎಂಡೋಮೆಂಟ್ ಫಾರ್ ಡೆಮಾಕ್ರಸಿ'(ಎಂ.ಈ.ಡಿ.) ಇವರಿಂದ ನಿಧಿ ನೀಡಲಾಗುತ್ತದೆ’, ಎಂದು ದಾವೆ ಮಾಡಿದೆ.

ಸಂಪಾದಕೀಯ ನಿಲುವು

ಅಮೇರಿಕಾದ ಈ ಅಜೆಂಡಾ ಭಾರತದಲ್ಲಿ ಕೂಡ ಕಾರ್ಯನಿರತವಾಗಿತ್ತು, ಇದನ್ನು ಮರೆಯಬಾರದು. ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾನೂನು, ಕೃಷಿ ಕಾನೂನು ಮುಂತಾದವುಗಳಿಗೆ ವಿರೋಧಿಸುವ ಹೆಸರಿನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು, ಅದರ ಹಿಂದೆ ಕೂಡ ಅಮೆರಿಕಾದ ಶಕ್ತಿಗಳೇ ಇದ್ದವು !