ಭಾರತೀಯ ಮೂಲದ ಹಸುವಿಗೆ ಬ್ರೆಜಿಲ್ ನಲ್ಲಿ 40 ಕೋಟಿ ರೂಪಾಯಿಯಷ್ಟು ಬೆಲೆ !

ರಿಯೊ ಡಿ ಜನೈರೊ (ಬ್ರೆಜಿಲ್) – ಬ್ರೆಜಿಲ್ ನ ಮಿನಾಸ ಗೆರೈಸ್ನಲ್ಲಿ ನಡೆದ ಹರಾಜಿನಲ್ಲಿ ಭಾರತದ ಹಸುವಿಗೆ ಬರೋಬ್ಬರಿ 40 ಕೋಟಿ ರೂಪಾಯಿ ಬೆಲೆ ದೊರೆತಿದೆ. ಈ ಹಸುವು ನೆಲ್ಲೂರು ತಳಿಯ ‘ವಿಯಾಟಿನಾ-19’ ಆಗಿದೆ. ಈ ಹಸುವಿನ ತೂಕವು 1101 ಕೆಜಿ ಆಗಿದ್ದು ಇತರ ನೆಲ್ಲೂರು ಹಸುಗಳಿಗಿಂತ ಎರಡು ಪಟ್ಟು ಹೆಚ್ಚಿದೆ. ಈ ಹಸುವು ‘ವಿಶ್ವ ಚಾಂಪಿಯನ್ ಆಫ್ ದ ವರ್ಲ್ಡ’ ಸ್ಪರ್ಧೆಯಲ್ಲಿ ‘ಮಿಸ್ ಸೌತ್ ಅಮೇರಿಕಾ’ ಪ್ರಶಸ್ತಿಯನ್ನು ಗೆದ್ದಿದೆ. ಪ್ರಪಂಚದಾದ್ಯಂತದ ವಿವಿಧ ಪಶುಪಾಲನಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಅದರ ಭ್ರೂಣಗಳನ್ನು ಪ್ರಪಂಚದಾದ್ಯಂತ ರಫ್ತು ಮಾಡಲಾಗುತ್ತದೆ.

1. ನೆಲ್ಲೂರು ಹಸುವಿನ ತಳಿಯನ್ನು ಭಾರತದಲ್ಲಿ ‘ಒಂಗೋಲ’ ಎಂದೂ ಕರೆಯುತ್ತಾರೆ. ಆಂಧ್ರಪ್ರದೇಶದ ಓಂಗೋಲ ಪ್ರದೇಶದ ಈ ಹಸುಗಳು ತೀವ್ರ ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ. ಈ ಹಸುಗಳು ಅತ್ಯುತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಿವೆ, ಆದುದರಿಂದ ಇದು ಆಫ್ರಿಕಾ ಮತ್ತು ದಕ್ಷಿಣ ಅಮೇರಿಕದ ಉಷ್ಣವಲಯದ ಪ್ರದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ.

2. ನೆಲ್ಲೂರು ಹಸುವಿನ ತಳಿಯನ್ನು ಮೊಟ್ಟಮೊದಲು 18 ನೇ ಶತಮಾನದಲ್ಲಿ ಬ್ರೆಜಿಲ್ ಗೆ ಒಯ್ಯಲಾಯಿತು. ಈ ಹಸುವಿನ ತಳಿಯು ತನ್ನ ಪ್ರಭಾವಶಾಲಿ ಸ್ನಾಯುಗಳು ಮತ್ತು ಹೆಚ್ಚಿನ ಪ್ರಜನನಕ್ಷಮತೆಯಿಂದಾಗಿ ಬ್ರೆಜಿಲ್ನಲ್ಲಿ ಜಾನುವಾರು ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.