
ಬೆಂಗಳೂರು – ಬೆಂಗಳೂರಿನ ‘ಸೀಬರ್ಡ್ ಟ್ರಾನ್ಸ್‌ಪೋರ್ಟ್’ನ ಮಾಲೀಕ ಶ್ರೀ. ನಾಗರಾಜ ಇವರು ಕಳೆದ ಅನೇಕ ವರ್ಷಗಳಿಂದ ಸನಾತನ ಸಂಸ್ಥೆಯ ಕಾರ್ಯಕ್ಕೆ ಸಹಕಾರ ಮಾಡುತ್ತಿದ್ದಾರೆ. ಅದಕ್ಕಾಗಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ಪೂ. ರಮಾನಂದ ಗೌಡ ಇವರು ಶ್ರೀ. ನಾಗರಾಜ ಇವರನ್ನು ಬೆಂಗಳೂರಿನಲ್ಲಿ ಸತ್ಕಾರ ಮಾಡಿದರು. ಪೂ ರಮಾನಂದ ಗೌಡ ಇವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ‘ಸನಾತನ ಸಂಸ್ಥೆಯು ನಿಸ್ವಾರ್ಥವಾಗಿ ಅಧ್ಯಾತ್ಮ ಪ್ರಸಾರ, ಅಧ್ಯಾತ್ಮದ ವಿಷಯದಲ್ಲಿ ಸಂಶೋಧನೆ, ಸಮಾಜವನ್ನು ಅಧ್ಯಾತ್ಮದ ಕಡೆಗೆ ಹೊರಳಿಸುವ ಅಮೂಲ್ಯ ಕಾರ್ಯ ಮಾಡುತ್ತಿದೆ. ಸಂಸ್ಥೆಯ ಮಾರ್ಗದರ್ಶನ ಅಡಿಯಲ್ಲಿ ಸಾಧನೆಯ ಮಾಡುವ ಮತ್ತು ಸನಾತನ ಧರ್ಮ ಪ್ರಚಾರಕಾರ್ಯಕ್ಕೆ ಸಹಾಯ ಮಾಡುವ ಸಾವಿರಾರು ಸಾಧಕರು, ಸನಾತನದ ಹಿತಚಿಂತಕರು ಸಾಧನೆಯಲ್ಲಿ ಪ್ರಗತಿಯನ್ನು ಮಾಡಿಕೊಂಡಿದ್ದಾರೆ. ಅದಕ್ಕಾಗಿ ಶ್ರೀ. ನಾಗರಾಜರವರ ಸಹಕಾರವು ನಿಜವಾಗಿಯೂ ಆದರ್ಶವಾಗಿದೆ,’ ಎಂದರು. ಈ ಸಂದರ್ಭದಲ್ಲಿ ಬೆಂಗಳೂರಿನ ಉದ್ಯಮಿ ಶ್ರೀ. ಅರುಣ ಗೌಡರ್ ಇವರು ಉಪಸ್ಥಿತರಿದ್ದರು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!