
‘ಬುದ್ಧಿಪ್ರಾಮಾಣ್ಯವಾದಿಗಳು ಎಂದಿಗೂ ಉಪಕರಣಗಳನ್ನು ಬಳಸಿ ಸಂಶೋಧನೆ ಮಾಡಿ ‘ಅಧ್ಯಾತ್ಮಶಾಸ್ತ್ರವು ಹೇಗೆ ತಪ್ಪಾಗಿದೆ’ ಎಂಬುದನ್ನು ಸಾಬೀತುಪಡಿಸಿಲ್ಲ. ಆದರೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಅಧ್ಯಾತ್ಮ ಶಾಸ್ತ್ರವು ಚಿರಂತನ ಸತ್ಯವನ್ನು ಹೇಳುತ್ತದೆ’, ಎಂಬುದನ್ನು ನೂರಾರು ಪ್ರಯೋಗಗಳ ಮೂಲಕ ಸಾಬೀತುಪಡಿಸಿದೆ ಹಾಗೂ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಷತ್ತುಗಳಲ್ಲಿ ಶೋಧಪ್ರಬಂಧಗಳನ್ನು ಪ್ರಸ್ತುತಪಡಿಸಿದೆ.’
ರಾಷ್ಟಾಭಿಮಾನವನ್ನು ಜಾಗೃತವಾಗಿಡಲು ಪ್ರತಿದಿನ ಕ್ರಿಯಾಶೀಲರಾಗಿರಿ !
‘ಈಗ ಕೇವಲ ಜನವರಿ ೨೬ ಮತ್ತು ಆಗಸ್ಟ್ ೧೫ ರಂದು ರಾಷ್ಟ್ರಾಭಿಮಾನ ಜಾಗೃತವಾಗಿಡಲು ಧ್ವಜವಂದನೆ ಮಾಡುವುದು, ಭಾಷಣ ಮಾಡುವುದು ಮತ್ತು ದೇಶಭಕ್ತಿ ಗೀತೆಗಳನ್ನು ಹಾಕುವುದು ಸಾಲದು; ಇದಕ್ಕಾಗಿ ಪ್ರತಿದಿನವೂ ಏನನ್ನಾದರೂ ಮಾಡುವ ಅವಶ್ಯಕತೆಯಿದೆ. ಇಲ್ಲದಿದ್ದರೆ ಹಿಂದೂಗಳ ಮತ್ತು ಭಾರತದ ಅಸ್ತಿತ್ವ ಉಳಿಯಲಾರದು.’
ಭಗವಂತನ ಭಕ್ತನಾಗುವುದೇ ಸರ್ವಶ್ರೇಷ್ಠ !
‘ರಾಜಕೀಯ ಪಕ್ಷದಲ್ಲಿ ಅಥವಾ ದೊಡ್ಡ ಸಂಘಟನೆಯಲ್ಲಿ ಯಾವುದಾದರೂಂದು ಪದವಿ ಪಡೆಯುವುದಕ್ಕಿಂತ ಭಗವಂತನ ಭಕ್ತನಾಗುವುದು ಶ್ರೇಷ್ಠವಾಗಿದೆ !
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ