ಜಾರ್ಖಂಡ್‌ನ ಪೂ. ಸ್ವಾಮಿ ಕ್ಷಮಾಪರಾನಂದ ಸರಸ್ವತಿಯವರ ಆಶೀರ್ವಚನ !

ಪ್ರಯಾಗರಾಜ್, ಜನವರಿ 26 (ಸುದ್ದಿ) – ಸನಾತನದ ಧರ್ಮ ಶಿಕ್ಷಣ ಪ್ರದರ್ಶನವನ್ನು ನೋಡಿದ ಮೇಲೆ ಭರವಸೆ ನಿರ್ಮಾಣವಾಗಿದೆ. ಸರಕಾರ ಮತ್ತು ಮೇಳದ ಅಧಿಕಾರಿಗಳು ಈ ಸುಂದರ ಪ್ರದರ್ಶನವನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕು. ಸರಕಾರ ಈ ಪ್ರದರ್ಶನವನ್ನು ಪ್ರೋತ್ಸಾಹಿಸಿದರೆ, ಈ ಕುಂಭವು ‘ಬದಲಾವಣೆಯ ಕುಂಭ’ವಾಗುತ್ತದೆ. ಈ ಪ್ರದರ್ಶನ ತುಂಬಾ ಚೆನ್ನಾಗಿದೆ. “ನೀವು ಕೈಗೊಂಡ ಧರ್ಮಕಾರ್ಯದ ವ್ರತವು ಯಶಸ್ವಿಯಾಗಲು ಮನಸ್ಸಿನಲ್ಲಿ ಜ್ಯೋತಿಯನ್ನು ಬೆಳಗಿಸಿ” ಎಂದು ದೆವಘರ್ (ಜಾರ್ಖಂಡ್) ನ ಸ್ವಾಮಿ ಕ್ಷಮಾಪರಣಾನಂದ ಸರಸ್ವತಿ ಅವರು ಸೆಕ್ಟರ್ 9 ರಲ್ಲಿರುವ ಸನಾತನ ಸಂಸ್ಥೆಯ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಿದ ನಂತರ ಉದ್ಘರಿಸಿದರು.
ಪೂ. ಸ್ವಾಮಿ ಕ್ಷಂಪರಾನಂದ ಸರಸ್ವತಿ ಇವರು ಮಾತು ಮುಂದುವರೆಸಿ, ‘ನಿಮ್ಮ ಪ್ರದರ್ಶನದಲ್ಲಿ ಪುರುಷರು ಮತ್ತು ಮಹಿಳೆಯರು ಹೇಗೆ ಉಡುಗೆ ತೊಡಬೇಕು?’ ಎಂಬಂತಹ ಫಲಕಗಳಿವೆ. ತಾಯಂದಿರು ಮತ್ತು ಸಹೋದರಿಯರು ಹಾಗೆಯೇ ಕಾಣಬೇಕು. ಅವರು ಎಂದಿಗೂ ನಟಿಯರಂತೆ ಉಡುಗೆ ತೊಡಬಾರದು. ನಿಮ್ಮ ಕಾರ್ಯ ಚೆನ್ನಾಗಿದೆ. ‘ಸನಾತನ ಎಂದರೇನು?’ ಇದನ್ನು ಪ್ರತಿಯೊಂದು ರಾಜ್ಯದಲ್ಲೂ ವಿವರಿಸಬೇಕು. ಈ ಭೂಮಿ ಓಂಕಾರದ ತರಂಗದಿಂದ ನಿರ್ಮಾಣವಾಗಿದೆ. ಸಮುದ್ರ ತೀರಕ್ಕೆ ಹೋದ ನಂತರ, ಸ್ವಲ್ಪ ಸಮಯದ ನಂತರ ಓಂ ಕಾರ ಶಬ್ದ ಕೇಳಿಸುತ್ತದೆ. ಅಂದರೆ, ಪ್ರತಿಯೊಂದು ಅಂಶವು ಓಂನಿಂದ ವ್ಯಾಪಿಸಿದೆ ಎಂದು ಹೇಳಿದರು.