ಪ್ರಯಾಗರಾಜ, ೨೬ ಜನವರಿ (ಸುದ್ಧಿ) – ಮಹಾಕುಂಭಮೇಳದಲ್ಲಿ ಇ-ರಿಕ್ಷಾ ಮೂಲಕ ಸನಾತನ ಸಂಸ್ಥೆಯು ಹೊಸ ಪದ್ಧತಿಯಿಂದ ಅಧ್ಯಾತ್ಮಪ್ರಸಾರ ಮಾಡುತ್ತಿದೆ. ಇ-ರಿಕ್ಷಾಗೆ ’ಗ್ರಂಥ ಪ್ರದರ್ಶನ’ದ ರೂಪ ನೀಡಲಾಗಿದೆ, ಅದರಲ್ಲಿ ಸನಾತನದ ಅಧ್ಯಾತ್ಮ, ರಾಷ್ಟ್ರ-ಧರ್ಮ, ಆಯುರ್ವೇದ, ಬಾಲ ಸಂಸ್ಕಾರ ಇತ್ಯಾದಿ ವಿವಿಧ ಭಾಷೆಗಳ ಗ್ರಂಥಗಳು ಲಭ್ಯವಿರುತ್ತವೆ. ಜೊತೆಗೆ ಸನಾತನದ ಸಾತ್ತ್ವಿಕ ಉತ್ಪನ್ನಗಳು ಕೂಡ ’ಇ-ರಿಕ್ಷಾ’ದಲ್ಲಿ ಇದೆ. ಸಧ್ಯ ’ಇ-ರಿಕ್ಷಾ’ ಸೆಕ್ಟರ್ ೨೦ ರಲ್ಲಿ ಶ್ರೀ ಪಂಚದಶನಾಮ ಜುನಾ ಆಖಾಡಾದ ಹೊರಗೆ ಕಾರ್ಯನಿರ್ವಹಿಸುತ್ತಿದೆ. ಭಕ್ತರ ದಟ್ಟಣಿಗನುಸಾರ ಇ-ರಿಕ್ಷಾ ವಿವಿಧ ಭಾಗಗಳಿಗೆ ಹೋಗುತ್ತದೆ. ಈ ರಿಕ್ಷಾದಲ್ಲಿರುವ ಸಾಧಕರಿಂದ ಭಕ್ತರಿಗೆ ಧರ್ಮಶಿಕ್ಷಣ ತಿಳಿಯಲು ಕರೆ ನೀಡಲಾಗುತ್ತಿದೆ. ಆದ್ದರಿಂದ ರಸ್ತೆಯಲ್ಲಿ ಹೋಗುವ ಜಿಜ್ಞಾಸುಗಳು ಇ-ರಿಕ್ಷಾದ ಹತ್ತಿರ ಬಂದು ಸನಾತನದ ಅಧ್ಯಾತ್ಮ ಪ್ರಸಾರ ವಿಷಯದ ಗ್ರಂಥಗಳನ್ನು ಪಡೆಯುತ್ತಿದ್ದಾರೆ. ಪ್ರತಿದಿನವೂ ಬೆಳಿಗ್ಗೆ ೯:೩೦ ರಿಂದ ರಾತ್ರಿ ೮:೩೦ ರವರೆಗೆ ಈ ಇ-ರಿಕ್ಷಾದ ಮೂಲಕ ಪರಿಣಾಮಕಾರಿಯಾಗಿ ಅಧ್ಯಾತ್ಮ ಪ್ರಸಾರ ನಡೆಯುತ್ತಿದೆ.