ಸನಾತನದ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪನ್ನಗಳನ್ನು ಮಹಾಶಿವರಾತ್ರಿ ಸಂದರ್ಭದಲ್ಲಿ ಸಾವಿರಗಳ ಸಂಖ್ಯೆಯಲ್ಲಿ ಹಂಚಬೇಕೆಂದು ಭಕ್ತರ ಮನಸ್ಥಿತಿ !

ಸನಾತನ ಸಂಸ್ಥೆಯ ಪ್ರದರ್ಶನದ ಅನುಭವ

ಪ್ರಯಾಗರಾಜ, ೨೬ ಜನವರಿ (ಸುದ್ಧಿ) – ಮಹಾಕುಂಭನಗರಿಯ ಸೆಕ್ಟರ್ ೧೯ ರಲ್ಲಿ ಹಾಕಲಾದ ಸನಾತನ ಸಂಸ್ಥೆಯ ಗ್ರಂಥಪ್ರದರ್ಶನಕ್ಕೆ ಕಾನಪೂರ್‌ದ ಭಕ್ತರು ಭೇಟಿ ನೀಡಿದರು. ಶ್ರೀ. ರಾಮಬಾಬು ದೀಕ್ಷಿತ್ ಎಂಬ ಭಕ್ತರು ಕೆಲವು ತಿಂಗಳುಗಳ ಹಿಂದೆ ಒಂದು ಸ್ಥಳದಿಂದ ಸನಾತನದ ಅತ್ತರ್ ಖರೀದಿಸಿದ್ದರು. ಈ ಅತ್ತರ್‌ನ್ನು ಉಪಯೋಗಿಸಿದ ಮೇಲೆ, ಇನ್ನು ಕೆಲವು ಸಾಹಿತ್ಯಗಳನ್ನು ಪಡೆಯಲು ವಾರಾಣಸಿ, ಕಾನಪೂರ ಹೀಗೆ ಅನೇಕ ಸ್ಥಳಗಳಲ್ಲಿ ಹುಡುಕಿದರು. ಅವರಿಗೆ ಎಲ್ಲಿಯೂ ಸನಾತನದ ಉತ್ಪಾದನೆಗಳು ಸಿಗಲಿಲ್ಲ. ಮಹಾಕುಂಭನಗರಿಯ ಸನಾತನ ಪ್ರದರ್ಶನವನ್ನು ನೋಡಿದಾಗ, ಅವರಿಗೆ ಆನಂದವಾಯಿತು. ಸನಾತನದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಗ್ರಂಥಗಳು ಮತ್ತು ಉತ್ಪನ್ನಗಳಿವೆ ಎಂದು ನೋಡಿ ಅವರು ಪ್ರತಿಯೊಂದು ಸಾಹಿತ್ಯದಲ್ಲಿನ ಒಂದು ವಸ್ತುವನ್ನು ಖರೀದಿಸಿದರು. ‘ಈ ಭಂಡಾರಾದಲ್ಲಿ ಸನಾತನ ಸಂಸ್ಥೆಯ ಗ್ರಂಥಗಳು ಮತ್ತು ಸಾತ್ತ್ವಿಕ ವಸ್ತುಗಳನ್ನು ಸಾವಿರಾರು ಸಂಖ್ಯೆಯಲ್ಲಿ ಭಕ್ತರಿಗೆ ವಿತರಿಸುವ ಮನೋಭಾವವನ್ನು ವ್ಯಕ್ತಪಡಿಸಿದರು. ಅದಕ್ಕಾಗಿ ಅವರ ಭಾಗದ ಅವರ ಸಹಕಾರಿಗಳಿಗೆ ಅವುಗಳನ್ನು ತೋರಿಸಲು ಗ್ರಂಥಗಳು ಮತ್ತು ಸಾತ್ತ್ವಿಕ ವಸ್ತುಗಳನ್ನು ತೆಗೆದುಕೊಂಡರು.