ತಿಥಿ : ಮಾಘ ಶುಕ್ಲ ಸಪ್ತಮಿ
ಸೂರ್ಯನಾರಾಯಣನ ಪೂಜೆ : ರಂಗೋಲಿಯಿಂದ ಅಥವಾ ಚಂದನದಿಂದ ಮಣೆಯ ಮೇಲೆ ಏಳು ಕುದುರೆಗಳ ಸೂರ್ಯ ನಾರಾಯಣನ ರಥ, ಅರುಣಸಾರಥಿ ಮತ್ತು ರಥದಲ್ಲಿ ಸೂರ್ಯ ನಾರಾಯಣನನ್ನು ಬಿಡಿಸಿ ಅವನನ್ನು ಪೂಜಿಸುತ್ತಾರೆ. ಅಂಗಳದಲ್ಲಿ ಬೆರಣಿಗಳನ್ನು ಉರಿಸಿ ಅದರ ಮೇಲೆ ಒಂದು ಮಣ್ಣಿನ ಮಡಕೆಯಲ್ಲಿ ಹಾಲನ್ನು ಉಕ್ಕುವ ತನಕ ಕಾಯಿಸುತ್ತಾರೆ; ಅಂದರೆ ಅಗ್ನಿಗೆ ಸಮರ್ಪಣೆಯಾಗುವ ತನಕ ಇಡುತ್ತಾರೆ. ಅನಂತರ ಉಳಿದ ಹಾಲನ್ನು ಎಲ್ಲರಿಗೂ ಪ್ರಸಾದವೆಂದು ನೀಡುತ್ತಾರೆ. (ಆಧಾರ : ಸನಾತನ ನಿರ್ಮಿತ ಗ್ರಂಥ ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ)
ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರೂಢಿಯಲ್ಲಿದೆ. ಸೂರ್ಯನ ೧೦೮ ಹೆಸರುಗಳನ್ನು ಉಚ್ಚರಿಸಿ ನಮಸ್ಕಾರಗಳನ್ನು ಮಾಡುತ್ತಾರೆ. ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಅರುಣ ಪ್ರಶ್ನದ ಮಂತ್ರ ಪಠಿಸಿ ನಮಸ್ಕಾರ ಮಾಡುತ್ತಾರೆ. ಹೀಗೆ ೧೦೮ ನಮಸ್ಕಾರಗಳನ್ನು ಮಾಡುತ್ತಾರೆ. ೧೦೮ ಆಗದಿದ್ದವರು ೧೨ ನಾಮಗಳನ್ನು ಜಪಿಸಿ ನಮಸ್ಕಾರ ಮಾಡುತ್ತಾರೆ. ಅವಾವುದೆಂದರೆ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ.
– ಶ್ರೀ. ಸಮರ್ಥ ಕಾಂತಾವರ
ಕೋಟಿ ಕೋಟಿ ನಮನಗಳು
ಕೋಟಿ ಕೋಟಿ ನಮನಗಳು
ಕೋಟಿ ಕೋಟಿ ನಮನಗಳು
ಆದಿ ಶಂಕರಾಚಾರ್ಯರ ಕೈಲಾಸಗಮನ ದಿನ ( ೩೦.೪.೨೦೨೬ )
ಪ.ಪೂ. ಸತ್ಯಸಾಯಿ ಬಾಬಾ ಪುಣ್ಯಸ್ಮರಣೆ (೨೪.೪.೨೦೨೬)
ಶ್ರೀ ವ್ಯಾಸರಾಜರ ಜಯಂತಿ, ವೈಶಾಖ ಶುಕ್ಲ ಸಪ್ತಮಿ (೨೩.೪.೨೦೨೬)