ಪ್ರಯಾಗರಾಜ್, ಜನವರಿ 16 (ಸುದ್ದಿ.) – ಪುರಿ ಪೀಠದ ಜಗದ್ಗುರು ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಮತ್ತು ದ್ವಾರಕಾ ಪೀಠದ ಜಗದ್ಗುರು ಶಂಕರಾಚಾರ್ಯ ಸದಾನಂದ ಸರಸ್ವತಿ ಇವರು ಜನವರಿ 16 ರಂದು ಕುಂಭನಗರಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ, ಜಗದ್ಗುರು ಶಂಕರಾಚಾರ್ಯ ಸದಾನಂದ ಸರಸ್ವತಿ ಅವರ ಆಗಮನವನ್ನು ಸ್ವಾಗತಿಸಲು ಬಹಳ ದೊಡ್ಡ ಮೆರವಣಿಗೆಯನ್ನು ನಡೆಸಲಾಯಿತು.
ಶಂಕರಾಚಾರ್ಯ ಪೀಠಕ್ಕೆ ಸಂಬಂಧಿಸಿದ ಸಾಧುಗಳು ಮತ್ತು ಸಂತರು ಕುದುರೆಗಳು, ಒಂಟೆಗಳು ಮತ್ತು ರಥಗಳ ಮೇಲೆ ಬಂದರು. ಇದರಲ್ಲಿ ಉತ್ತರ ಪ್ರದೇಶ ಪೊಲೀಸ್ ಬ್ಯಾಂಡ್‌ನಿಂದ ಶಂಕರಾಚಾರ್ಯರಿಗೆ ಗೌರವ ಸಲ್ಲಿಸಲಾಯಿತು. ಶಂಕರಾಚಾರ್ಯರ ಮೆರವಣಿಗೆಯಲ್ಲಿ ಹಲವು ರಥಗಳು ಸೇರಿದ್ದವು. ಶಂಕರಾಚಾರ್ಯರನ್ನು ಸ್ವಾಗತಿಸಲು ರಸ್ತೆಯ ಎರಡೂ ಬದಿಗಳಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ‘ಹರ ಹರ ಮಹಾದೇವ್’ ಎಂದು ಘೋಷಣೆ ಕೂಗಿದರು.