ಆ ಪತ್ರ ಈಗ 4 ಕೋಟಿ 32 ಲಕ್ಷ ರೂಪಾಯಿಗೆ ಹರಾಜು !
ವಾಷಿಂಗ್ಟನ – `ಆಪಲ್’ ಈ ಜಗತ್ಪ್ರಸಿದ್ದ ಸಂಸ್ಥೆಯ ಸಂಸ್ಥಾಪಕರಾದ ಸ್ಟೀವ್ ಜಾಬ್ಸ್ 1974 ರಲ್ಲಿ ಅಂದರೆ ತಮ್ಮ 19 ನೇ ವಯಸ್ಸಿನಲ್ಲಿ ತಮ್ಮ ಬಾಲ್ಯದ ಗೆಳೆಯ ಟಿಮ್ ಬ್ರೌನ್ ಗೆ ಬರೆದ ಪತ್ರವೊಂದು ಅಂದಾಜು 4 ಕೋಟಿ 32 ಲಕ್ಷ ರೂಪಾಯಿಗಳೀಗೆ ಹರಾಜಾಗಿದೆ. ಈ ಪತ್ರದಲ್ಲಿ, ಜಾಬ್ಸ್ ಭಾರತದಲ್ಲಿ ನಡೆಯುವ ಕುಂಭಮೇಳದಲ್ಲಿ ಭಾಗವಹಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಜಾಬ್ಸ್ ಅವರು ಈ ಪತ್ರವನ್ನು ತಮ್ಮ ಹುಟ್ಟುಹಬ್ಬದ ಕೆಲವು ದಿನಗಳ ಮೊದಲು ಬರೆದಿದ್ದರು. ಅದರಲ್ಲಿ ಅವರು, “ಏಪ್ರಿಲ್‌ನಲ್ಲಿ ಪ್ರಾರಂಭವಾಗುವ ಕುಂಭಮೇಳಕ್ಕಾಗಿ ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ. ನಾನು ಮಾರ್ಚ್‌ನಲ್ಲಿ ಯಾವಾಗಲಾದರೂ ಹೊರಡುತ್ತೇನೆ ಇನ್ನೂ ಖಚಿತವಿಲ್ಲ ಎಂದು ಹೇಳಿದ್ದರು.’ ಎಂದು ಹೇಳಿದ್ದರು. ಜಾಬ್ಸ್ 1970 ರ ದಶಕದಲ್ಲಿ ಭಾರತಕ್ಕೆ ಬಂದಿದ್ದರು. ಆ ಸಮಯದಲ್ಲಿ ಅವರು ಭಾರತದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು. ಅವರು 2011 ರಲ್ಲಿ ಅಮೆರಿಕದಲ್ಲಿ ನಿಧನರಾದರು.