ಮಹಿಳೆಯರು ಪಾಲಿಸಬೇಕಾದ ಆರೋಗ್ಯದ ಕೆಲವು ತತ್ತ್ವಗಳು

ನಾವು ಜೀವನದಲ್ಲಿ ಮುಂದೆ ಸಾಗುವಾಗ ಮಹಿಳೆಯರು ಮತ್ತು ಪುರುಷರಿಗೆ ಕೆಲವು ವಿಷಯಗಳು ಭಿನ್ನವಾಗಿರುತ್ತವೆ ಮತ್ತು ನಾವು ಪೋಷಕರಾಗಿ ನಮ್ಮ ಹೆಣ್ಣುಮಕ್ಕಳಲ್ಲಿ ಈ ಕಲ್ಪನೆಯನ್ನು ಬಾಲ್ಯದಿಂದಲೇ ಬೆಳೆಸಬೇಕು ಎಂದು ನನಗೆ ಅನಿಸುತ್ತದೆ. ಈ ಅಸಮಾನತೆಯು ನೈಸರ್ಗಿಕವಾಗಿದೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ನನಗೆ ಆರೋಗ್ಯದೊಂದಿಗೆ ಹೆಚ್ಚು ನಂಟಿರುವುದರಿಂದ ಆ ಬಗೆಗಿನ ವಿಷಯವನ್ನು ಬರೆಯುತ್ತಿದ್ದೇನೆ. ಅಪವಾದಾತ್ಮಕ ಪರಿಸ್ಥಿತಿಗಳು, ಅಪಘಾತ ಅಥವಾ ಮನೆಯಲ್ಲಿರುವ ಸಂಕಷ್ಟಗಳಿಂದ ತಪ್ಪಿಸಲಾರದಂತಹ ವಿಷಯಗಳನ್ನು ಇಲ್ಲಿ ಸೇರಿಸಿಲ್ಲ.

೧. ಹೆಣ್ಣುಮಕ್ಕಳ ಮದುವೆಯನ್ನು ಸಕಾಲದಲ್ಲಿ ಮಾಡುವುದು ಮತ್ತು ಮದುವೆಯಾದ ನಂತರ, ಮಗುವಿನ ವಿಚಾರ ಇದ್ದರೆ ಆ ದೃಷ್ಟಿಯಿಂದ ಮುಂದಿನ ಹೆಜ್ಜೆ ಇಡುವುದು (ಮೂವತ್ತರ ಒಳಗೆ) ಇದು ಮುಂದಿನ ದೃಷ್ಟಿಯಿಂದ ಸುಲಭವಾಗಿರುತ್ತದೆ, ಇದು ವಸ್ತುಸ್ಥಿತಿ ಮತ್ತು ವಿಜ್ಞಾನದ ವಿಷಯವಾಗಿದೆ. ‘ಹೊಟ್ಟೆಯಲ್ಲಿ ಮಗು ಇರುವಾಗಲೂ ನಾನು ಕೆಲಸ ಮಾಡುತ್ತೇನೆ’, ಎಂದು ಎಷ್ಟೇ ತೀರ್ಮಾನಿಸಿದರೂ, ಉದ್ಭವಿಸಿದ ಪರಿಸ್ಥಿತಿಗನುಸಾರ ‘ಬೆಡ್‌ ರೆಸ್ಟ್‌’ (ಸಂಪೂರ್ಣ ವಿಶ್ರಾಂತಿ), ಹೆಚ್ಚು ಪ್ರಯಾಣ ಮಾಡದಿರುವುದು, ಯಾವುದಾದರೊಂದು ‘ಪ್ರಮೋಶನ್’ (ಬಡ್ತಿ) ಸಿಕ್ಕಿದ್ದರೂ ಸಣ್ಣ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಇರ ಬೇಕಾದ ಪ್ರಮೇಯ ಬರಬಹುದು, ಎಂಬ ಕಲ್ಪನೆ ಮೊದಲೇ ಇರಬೇಕಾಗುತ್ತದೆ. ಇಂತಹ ಸಮಯದಲ್ಲಿ ಮನೆಯಲ್ಲಿನ ಪ್ರತಿಯೊಂದು ಕೆಲಸಕ್ಕಾಗಿ ಸಹಾಯ ಪಡೆಯುವುದು ಆರ್ಥಿಕವಾಗಿ ಸಾಧ್ಯವಿಲ್ಲ ಅಥವಾ ಅನುಕೂಲಕರವಾಗಿರುವುದಿಲ್ಲ. ಮನೆಕೆಲಸ ಇಬ್ಬರಿಗೂ ಬರಬೇಕು; ಆದರೆ ಇಂತಹ ಕೆಲವು ಪರಿಸ್ಥಿತಿಗಳಲ್ಲಿ ಅಥವಾ ಮನೆಯಲ್ಲಿ ಅವಿಭಕ್ತ ಕುಟುಂಬವಿರುವಾಗ ಬೇರೆ ಯಾವುದೇ ಸಹಾಯವಿಲ್ಲದಿರುವಾಗ, ಈ ಮೂಲಭೂತ ಕೆಲಸಗಳು ಮತ್ತು ‘ಮೈಕ್ರೋ ಮ್ಯಾನೇಜಮೆಂಟ್’ ಅನ್ನು (‘ಸೂಕ್ಷ್ಮ ನಿರ್ವಹಣೆ’) ವೈಯಕ್ತಿಕವಾಗಿ ತಾಯಿಗೇ ಮಾಡಬೇಕಾಗುತ್ತದೆ. ಅದರಲ್ಲಿ ಮಗುವಾದ ನಂತರ ತಕ್ಷಣ ಹೊಟೇಲ್, ಹೊರಗೆ ಸ್ವತಂತ್ರವಾಗಿ ತಿರುಗಾಡಲು ಹೋಗುವುದು ಸಾಧ್ಯವಾಗು ತ್ತದೆ ಎಂದೇನಿಲ್ಲ; ಏಕೆಂದರೆ ಪ್ರತಿ ಬಾರಿ ಕುಟುಂಬದವರ ಸಹಾಯ ಸಿಕ್ಕೇ ಸಿಗುತ್ತದೆ, ಎಂದೇನಿಲ್ಲ. ಇಂತಹ ವಿಷಯಗಳಿಂದ ತಮ್ಮ ಮನಸ್ಸಿನ ಆರೋಗ್ಯ ಕೆಡಬಾರದೆಂಬುದಕ್ಕಾಗಿ, ಮೊದಲೇ ತಿಳಿಸಬೇಕು.

೨. ಮಹಿಳೆಯರ ದೇಹದಲ್ಲಿ ‘ಇಸ್ಟ್ರಾಜೆನ್’ ಎಂಬ ಸಂಪ್ರೇರಕವು (ಹಾರ್ಮೋನ್) ಮುಖ್ಯ ಕಾರ್ಯ ಮಾಡುವ ಘಟಕವಾಗಿರು ವುದರಿಂದ ಅದರ ಸ್ರವಿಸುವಿಕೆಯಲ್ಲಿ ಏರುಪೇರಾಗಬಹುದು. ಇದರಿಂದ ತೂಕದಲ್ಲಿ ಹೆಚ್ಚಳ, ಅರ್ಬುದರೋಗ (ಕ್ಯಾನ್ಸರ್‌), ‘ಪಿಸಿಓಡಿ’ (‘ಪಾಲಿಸಿಸ್ಟಿಕ್‌ ಓವೆರಿಯನ್‌ ಡಿಸೀಸ್’ – ಮಾಸಿಕ ಸರದಿಗೆ ಸಂಬಂಧಿಸಿದ ಕಾಯಿಲೆ)ಯ ಪ್ರಮಾಣವನ್ನು ತಪ್ಪಿಸಲು ‘ಜಿ.ಎಮ್‌.ಓ.’ (ಜೆನೆಟಿಕಲಿ ಮಾಡಿಫೈಡ್‌ ಆರಗ್ಯಾನಿಝಮ್‌ – ವಂಶಿಯ ವಿಕಸಿತ ಜೀವ) ಆಹಾರದಲ್ಲಿ ಮುಖ್ಯವಾಗಿ ಮಾಂಸದ ಪ್ರಮಾಣ ಕಡಿಮೆ ಇರಬೇಕು. ಹಾಗಾಗಿ ಮಹಿಳೆಯರು ಕಡಿಮೆ ಮಾಂಸಾಹಾರ ಸೇವಿಸುವುದು ಉತ್ತಮ.

ವೈದ್ಯೆ ಸ್ವರಾಲಿ ಶೆಂಡ್ಯೆ

೩. ಮಹಿಳೆಯರಲ್ಲಿ ಮಾಸಿಕ ಸರದಿ ಪ್ರತಿ ತಿಂಗಳು ಬರುತ್ತದೆ. ಇಂತಹ ಸಮಯದಲ್ಲಿ ಆಯುರ್ವೇದಕ್ಕನುಸಾರ ವಾತವು ನೈಸರ್ಗಿಕವಾಗಿ ದೇಹದಲ್ಲಿ ಹೆಚ್ಚಾಗುವುದರಿಂದ ಈ ಸಮಯದಲ್ಲಿ ವಿಶ್ರಾಂತಿ ಪಡೆಯು ವುದು ಆವಶ್ಯಕವಾಗಿದೆ. ಕೆಲಸದ ನಿಮಿತ್ತ ದೀರ್ಘ ಪ್ರಯಾಣ, ತಗ್ಗುಗಳುಳ್ಳ ರಸ್ತೆ ಮೂಲಕ ನಿರಂತರ ಪ್ರಯಾಣ ಇವುಗಳನ್ನು ಈ ಯುವ ವಯಸ್ಸಿನಲ್ಲಿ ನಡೆಸಿದರೂ, ನಂತರ ಮಹಿಳೆಯರಿಗೆ ಸೊಂಟ, ಬೆನ್ನು, ಸಂದು ನೋವುಗಳು ಹೆಚ್ಚು ತೊಂದರೆ ನೀಡುತ್ತವೆ. ಈ ಸಮಯದಲ್ಲಿ ‘ವರ್ಕ್ ಫ್ರಮ್‌ ಹೋಮ್’ (ಮನೆಯಲ್ಲಿದ್ದು ಕೆಲಸ ಮಾಡು ವುದು) ಅಥವಾ ‘ಫ್ರೀ-ಲಾನ್ಸ್‌’ (ಮುಕ್ತ ಪದ್ಧತಿಯಲ್ಲಿ ಕೆಲಸ ಮಾಡುವುದು) ಪದ್ಧತಿಯ ಕೆಲಸಗಳು ಹೆಚ್ಚು ಉಪಯುಕ್ತ ಮತ್ತು ಅನುಕೂಲಕರವಾಗಿವೆ.

೪. ‘ಸರಾಯಿ, ಸಿಗರೇಟು ಇವು ಮಹಿಳೆಯರ ದೇಹದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತವೆ’, ಎಂದು ಸಂಶೋಧನೆ ಹೇಳುತ್ತದೆ. ‘ಹೆಣ್ತನ ಮತ್ತು ತಾಯ್ತನವನ್ನು ನಿಭಾಯಿಸುವ ದೃಷ್ಟಿಯಿಂದ ಬಾಲ್ಯದಿಂದಲೇ ಈ ಅಭ್ಯಾಸಗಳನ್ನು ತಪ್ಪಿಸಬೇಕು. ಚಿಕ್ಕ ವಯಸ್ಸಿನಲ್ಲಿ ಇವುಗಳ ಪರಿಚಯವಾದಷ್ಟು, ವ್ಯಸನಕ್ಕೆ ಅಧೀನರಾಗುವ ಸಾಧ್ಯತೆ ಹೆಚ್ಚಿರುತ್ತದೆ’, ಎಂದೂ ಸಂಶೋಧನೆ ಹೇಳುತ್ತದೆ.

೫. ಚಿಕ್ಕ ವಯಸ್ಸಿನಲ್ಲಿಯೇ ವ್ಯಾಯಾಮಕ್ಕೆ ಒತ್ತು ನೀಡುವುದು ಬಹಳ ಮುಖ್ಯವಾಗಿದೆ. ತೂಕ ಹೆಚ್ಚಾದ ಮೇಲೆ ಅದನ್ನು ಕಡಿಮೆ ಮಾಡುವುದಕ್ಕಿಂತ ಅದನ್ನು ಹೆಚ್ಚಿಸದಿರುವುದು ಸುಲಭವಾಗಿರುತ್ತದೆ. ಮಹಿಳೆಯರು ಮೂಲತಃ ಹೆಚ್ಚಿನ ತೂಕವನ್ನು ಸಂಗ್ರಹಿಸುವ ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿದ್ದಾರೆ, ಇದಕ್ಕಾಗಿ ಸ್ತ್ರೀ ಸಂಪ್ರೇರಕಗಳು (ಹಾರ್ಮೋನುಗಳು) ಮುಖ್ಯ ಕಾರಣವಾಗಿರುತ್ತವೆ. ಆದುದರಿಂದ ಹುಡುಗಿಯರ ತೂಕ ಬಹುಬೇಗನೆ ಹೆಚ್ಚಾಗುತ್ತದೆ. ಇದರಲ್ಲಿ ದೇಹದ ಕೆಳಗಿನ ಭಾಗದಲ್ಲಿ ‘ಫ್ಯಾಟ್‌'(ಕೊಬ್ಬು) ಸಂಗ್ರಹವಾಗುವ ಪ್ರವೃತ್ತಿ ಹೆಚ್ಚಿರುವುದರಿಂದ ‘ಕಾರ್ಡಿಯೋ ಮೆಟಾಬಾಲಿಕ್‌ ಡಿಸೀಸ್‌)’ನ (ಹೃದಯಕ್ಕೆ ಸಂಬಂಧಿಸಿದ ಚಯಾಪಚಯ ಕಾಯಿಲೆ) ಅಪಾಯ ಕಡಿಮೆ ಇರುತ್ತದೆ; ಆದರೆ ಥೈರೈಡ್, ‘ಪಿಸಿಒಡಿ’ ಮತ್ತು ನಂತರ ಅದಕ್ಕೆ ಹೊಂದಿಕೊಂಡಂತೆ ಮಧುಮೇಹ ಮತ್ತು ತೂಕ ಹೆಚ್ಚಾಗುವುದು ಈ ವಿಷವರ್ತುಲದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

೬. ವಿಭಿನ್ನ ಕೆರಿಯರ್‌ ಆಯ್ದುಕೊಳ್ಳುವಾಗ ಮತ್ತು ಶಿಕ್ಷಣವನ್ನು ಪಡೆಯುವಾಗ ಇವರಿಬ್ಬರಿಗೂ ಸಮಾನ ಅವಕಾಶಗಳಿರಬೇಕು ಎಂಬ ಬಗ್ಗೆ ಭಿನ್ನಾಭಿಪ್ರಾಯ ಇಲ್ಲ; ಆದರೆ ನಿಮಗೆ ನೇರ ಮಾರ್ಗದಿಂದ ವೃತ್ತಿ, ಕುಟುಂಬ, ಮಗು ಈ ಎಲ್ಲ ಮಾರ್ಗಗಳ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಬೇಕಿದ್ದರೆ, ಈ ಬಗ್ಗೆ ಪೋಷಕರು ಹುಡುಗಿಯರಿಗೆ ಈ ವಿಷಯಗಳ ಕಲ್ಪನೆ ನೀಡಬೇಕು. ಅಂದರೆ ಅವರು ಇದ್ದಕ್ಕಿದ್ದಂತೆಯೇ ಈ ಎಲ್ಲ ವಿಷಯಗಳಿಂದ ಗೊಂದಲಕ್ಕೀಡಾಗುವುದಿಲ್ಲ.

ಇವೆಲ್ಲ ನಿಯಮಗಳನ್ನು ಎಲ್ಲರೂ ಅನುಸರಿಸಲೇಬೇಕು; ಏಕೆಂದರೆ ‘ನಾನು ಅದನ್ನು ಪಾಲಿಸಲಿಲ್ಲ, ಯಾವುದೇ ತೊಂದರೆಯಾಗಲಿಲ್ಲ, ಎಲ್ಲವೂ ಚೆನ್ನಾಗಿ ನಡೆಯಿತು’, ಎಂದು ಯಾರು ಹೇಳು ತ್ತಾರೆ, ಆದುದರಿಂದ ಪ್ರತಿಯೊಬ್ಬರು ನಿಯಮವನ್ನು ಪಾಲಿಸಬೇಕು ಮತ್ತು ನಿಮ್ಮದೆಲ್ಲವೂ ಚೆನ್ನಾಗಿ ನಡೆಯಿತು, ಎಂದಾದರೆ ಅದು ನಿಮ್ಮ ಅದೃಷ್ಟ; ಆದರೆ ನಿಸರ್ಗವು ವಿವಿಧ ಶರೀರಗಳನ್ನು ಮಾಡಿ ರುವುದರಿಂದ, ಮಾಸಿಕ ಸರದಿ, ‘ಹಾರ್ಮೋನ್‌ಗಳು’ ಮತ್ತು ಮೇಲೆ ವಿವರಿಸಿದ ವಿಷಯಗಳನ್ನು ನೋಡಿದರೆ ಬಾಲ್ಯದಿಂದಲೇ ಹುಡುಗಿಯರ ಸಿದ್ಧತೆ ಮತ್ತು ಅವರ ಪೋಷಕರು ಮತ್ತು ವೈದ್ಯರೊಂದಿಗೆ ಹೆಚ್ಚು ಸಂವಾದವನ್ನು ಮಾಡಬೇಕಾಗುತ್ತದೆ ಇದು ಸತ್ಯ. ನೀವು ಈ ಮಾರ್ಗದಲ್ಲಿ ಹೋಗಲು ಬಯಸದಿದ್ದರೆ, ಆ ಭಾಗವನ್ನು ಬಿಟ್ಟು ಉಳಿದಂತೆ ವಿವರಿಸಿದ ಆರೋಗ್ಯ ತತ್ತ್ವಗಳು ಮಾತ್ರ ಬದಲಾಗುವುದಿಲ್ಲ. ಖಂಡಿತವಾಗಿಯೂ ಅದರ ಬಗ್ಗೆ ಗಮನ ಹರಿಸಬೇಕು !

– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ.